More

    ವಿಶೇಷ ಕ್ರಿಕೆಟರ್ ಸೈಯಾಮಿ; ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಚಿತ್ರದಲ್ಲಿ ನಟನೆ

    ‘ಮಿರ್ಜಾ’, ‘ವೈಲ್ಡ್ ಡಾಗ್’ ಸೇರಿದಂತೆ ಹಿಂದಿ ಹಾಗೂ ತೆಲುಗಿನಲ್ಲಿ ತಲಾ ಮೂರು ಚಿತ್ರಗಳಲ್ಲಿ ನಟಿಸಿರುವ ಸೈಯಾಮಿ, ಸದ್ಯ ತಮ್ಮ ಕರಿಯರ್​ನಲ್ಲೇ ವಿಭಿನ್ನ, ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಸಂಭ್ರಮದಲ್ಲಿದ್ದಾರೆ. ಆರ್. ಬಾಲ್ಕಿ ನಿರ್ದೇಶಿಸುತ್ತಿರುವ ‘ಘೂಮರ್’ ಚಿತ್ರದಲ್ಲಿ ಸೈಯಾಮಿ, ಸವಾಲಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ‘ನಾನು ‘ಘೂಮರ್’ ಚಿತ್ರದಲ್ಲಿ ಎಡಗೈ ಬೌಲರ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಿಜ ಜೀವನದಲ್ಲಿ ನಾನು ಬಲಗೈ ಆಟಗಾರ್ತಿ. ನನ್ನ ಪಾತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುವಾಗ ಜೀವನದ ಪಾಠ ಕಲಿತೆ. ಒಬ್ಬ ಕ್ರೀಡಾಪಟುವಾಗಿ ಹಲವು ವಿಷಯಗಳ ಬಗ್ಗೆ ನನ್ನ ಅಭಿಪ್ರಾಯ ಬದಲಾಯಿತು. ದೈಹಿಕವಾಗಿ, ಮಾನಸಿಕವಾಗಿ ಸವಾಲುಗಳಿಂದ ಕೂಡಿತ್ತು. ಆದರೆ, ನಿಜ ಜೀವನದ ಹೀರೋಗಳು, ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತಿರುವ ಪ್ಯಾರಾ ಅಥ್ಲೀಟ್​ಗಳ ಮುಂದೆ ನಾನು ಹಾಕಿದ ಶ್ರಮ ಏನೂ ಅಲ್ಲ’ ಎಂದು ಹೇಳಿಕೊಂಡಿದ್ದಾರೆ.

    ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಅಂಗದ್ ಬೇಡಿ, ಶಬಾನಾ ಆಜ್ಮಿ ಪ್ರಮುಖ ತಾರಾಗಣದಲ್ಲಿದ್ದಾರೆ. ಹಂಗೇರಿ ಮೂಲದ ಒಲಿಂಪಿಕ್ ಶೂಟರ್ ಕೆರೋಲಿ ಟಕೇಕ್ಸ್ ಅವರ ಜೀವನದಿಂದ ಸ್ಪೂರ್ತಿ ಪಡೆದು ಬಾಲ್ಕಿ, ‘ಘೂಮರ್’ ಕಥೆ ಮಾಡಿಕೊಂಡಿದ್ದಾರೆ. 1948ರ ಒಲಿಂಪಿಕ್ಸ್​ನಲ್ಲಿ ಬಲಗೈನಲ್ಲಿ ಪಿಸ್ತೂಲ್ ಹಿಡಿದು ಶೂಟ್ ಮಾಡಿ ಗೆದ್ದಿದ್ದ ಕೆರೋಲಿ, 1952ರ ಒಲಿಂಪಿಕ್ಸ್​ನಲ್ಲಿ ಬಲಗೈಗೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ಎಡಗೈನಲ್ಲಿ ಪಿಸ್ತೂಲ್ ಹಿಡಿದು ಶೂಟ್ ಮಾಡಿ ಗೆದ್ದಿದ್ದರು. – ಏಜೆನ್ಸೀಸ್

    ಕಲ್ಯಾಣ ಮಂಟಪದಲ್ಲೇ ಕುಸಿದು ಬಿದ್ದ ವರ; ಆಸ್ಪತ್ರೆಯ ಮಾರ್ಗಮಧ್ಯೆ ಸಾವು

    ಟ್ರಾಫಿಕ್ ಫೈನ್, ಮತ್ತೆ 50% ಆಫರ್​​: ಎಷ್ಟು ದಿನಗಳವರೆಗೆ ಅವಕಾಶ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts