More

    ಮಹಿಳಾ ಪಿಎಸ್​ಐಗೆ ಬೆದರಿಕೆಯೊಡ್ಡಿದ್ರಾ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ? ಮಂಗಳವಾರ ರಾತ್ರಿ ನಡೆದಿದ್ದೇನು?

    ಮಂಡ್ಯ: ಕರೊನಾ ವೈರಸ್​ ಮಣಿಸಲು ಹಗಲಿರುಳು ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್​ ಮೇಲಿನ ದರ್ಪ ಮಂಡ್ಯದಲ್ಲಿ ಮುಂದುವರಿದಿದೆ. ಈ ಹಿಂದೆ ಜೆಡಿಎಸ್​ ಎಂಎಲ್​ಸಿ ಶೀಕಂಠೇಗೌಡ ಅವರು ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸಿದ್ದರು, ಇದೀಗ ಬಿಜೆಪಿ ಜಿಲ್ಲಾಧ್ಯಕ್ಷರು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ ಬೆದರಿಕೆ ಹಾಕಿರುವ ಆರೋಪದ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್ ವಿರುದ್ಧ ಕೆ.ಆರ್.ಪೇಟೆ ಪಟ್ಟಣ ಪೊಲೀಸರಿಂದ ಪ್ರಕರಣ ದಾಖಲಾಗಿದೆ. ಪ್ರೊಬೇಷನರಿ ಮಹಿಳಾ ಪಿಎಸ್ಐ ನಿಖಿತಾ ಅವರು ನೀಡಿದ ದೂರಿನ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ.

    ಇದನ್ನೂ ಓದಿ: ಪಾಕ್ ಮಾಜಿ​ ಕ್ರಿಕೆಟರ್​ ಅಬ್ದುಲ್​ ರಜಾಕ್ ಮದುವೆಯಾಗಲಿದ್ದಾರಾ ತಮನ್ನಾ? ಮಿಲ್ಕಿ ಬ್ಯೂಟಿ ಹೇಳಿದ್ದೇನು?​

    ಘಟನೆ ಹಿನ್ನೆಲೆ ಏನು?
    ಮಂಗಳವಾರ ರಾತ್ರಿ ಪಟ್ಟಣದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಜಿಲ್ಲಾಧ್ಯಕ್ಷರನ್ನು ಪೊಲೀಸರು ತಡೆದು ಪ್ರಶ್ನಿಸಿದ್ದಾರೆ. ರಾತ್ರಿ ವೇಳೆ ತುರ್ತು ಅಗತ್ಯ ಹೊರತುಪಡಿಸಿ ಉಳಿದವರು ಓಡಾಡುವಂತ್ತಿಲ್ಲ ಎಂದ ಮಹಿಳಾ ಪಿಎಸ್ಐ ಲಿಖಿತಾ ಅವರು ಕೇಳಿದ್ದಾರೆ. ಈ ವೇಳೆ ನಾನು ಬಿಜೆಪಿ ಜಿಲ್ಲಾಧ್ಯಕ್ಷ, ನನಗೆ ಸಿಎಂ ಹಾಗೂ ಡಿಸಿಎಂ ಗೊತ್ತು. ನೀನಿನ್ನು ಪ್ರೊಬೆಷನರಿ ಹೊರತು ಎಸ್ಐ ಅಲ್ಲ. ಯಾವ ಪೊಲೀಸ್ ಠಾಣೆಯಲ್ಲೂ ಪೋಸ್ಟಿಂಗ್ ಸಿಗದಂತೆ ಮಾಡುತ್ತೇನೆಂದು ಬೆದರಿಕೆಯೊಡ್ಡಿ ದರ್ಪ ಮೆರೆದಿದ್ದಾರೆ.

    ಎಫ್​ಐಆರ್​ ಮಾಡಿ ಕೈ ತೊಳೆದುಕೊಂಡ ಪೊಲೀಸರು
    ಪ್ರಕರಣದಲ್ಲಿ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದರಾ ಎಂಬ ಅನುಮಾನ ಮೂಡತೊಡಗಿದೆ. ಆರೋಪಿಗೆ ಕೇವಲ ನೋಟಿಸ್ ಕಳುಹಿಸಿ ಪ್ರಕರಣದಿಂದ ಪೊಲೀಸರು ಹಿಂದೆ ಸರಿದಿದ್ದಾರೆ ಎನ್ನಲಾಗಿದ್ದು, ಪೊಲೀಸರ ಮೇಲೆ ಧಮ್ಕಿ ಹಾಕಿದರೂ ಸಹ ಪೊಲೀಸ್​ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

    ಈ ಹಿಂದೆ ರೌಡಿಶೀಟರ್​
    ಈ ಹಿಂದೆ ರೌಡಿಶೀಟರ್ ಪಟ್ಟಿಯಲ್ಲಿದ್ದ ವಿಜಯ್​ ಕುಮಾರ್​, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೇಮಕವಾದಾಗ ಮಂಡ್ಯ ಬಿಜೆಪಿ ಮುಖಂಡರಿಂದ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: PHOTOS: ಕಾಂಗೋ ಗೊರಿಲ್ಲಾಗಳ 12 ರಕ್ಷಕರನ್ನೇ ಕೊಂದು ಹಾಕಿದ್ರು ಬಂಡುಕೋರರು!

    ರೌಡಿಶೀಟರ್ ಬರ್ತ್​ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಪಿಎಸ್​ಐ ಸಿಕ್ಕಿಬಿದ್ದಿದ್ದು ಹೇಗೆ ಕೊನೆಗೂ ಆಯ್ತು ತಲೆದಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts