ರೌಡಿಶೀಟರ್ ಬರ್ತ್​ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಪಿಎಸ್​ಐ ಸಿಕ್ಕಿಬಿದ್ದಿದ್ದು ಹೇಗೆ ಕೊನೆಗೂ ಆಯ್ತು ತಲೆದಂಡ!

SI-WITH-ROWDY-SHEATER
Published on

ಮೈಸೂರು: ರೌಡಿಶೀಟರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯ ಸಬ್​ಇನ್ಸ್​ಪೆಕ್ಟರ್​ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಕರ್ತವ್ಯ ಲೋಪದಡಿಯಲ್ಲಿ ಪಿಎಸ್​ಐ ಲೋಕೇಶ್​ರನ್ನು ಅಮಾನತು ಮಾಡಲಾಗಿದೆ. ಈಚೆಗೆ ಕುಶಾಲನಗರದ ಹಾರಂಗಿ ಜಲಾಶಯದ ಅತಿಥಿಗೃಹದಲ್ಲಿ ರೌಡಿಶೀಟರ್​ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ಜತೆಗೆ ಪೋಟೋ ಕೂಡ ತೆಗೆಸಿಕೊಂಡಿದ್ದರು. ಈ ಬಗ್ಗೆ ಅಣ್ಣಯ್ಯ ಎಂಬುವವರು ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಲೋಕೇಶ್ ಅವರನ್ನು ಮಂಗಳವಾರ ಕರ್ತವ್ಯದಿಂದ ಅಮಾನತುಗೊಳಿಸಿರುವುದಾಗಿ ಎಸ್‌ಪಿ ರಿಷ್ಯಂತ್ ಆದೇಶಿಸಿದ್ದಾರೆ. ಇಲಾಖೆ ಅನುಮತಿ ಇಲ್ಲದೆ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೇಶವನ್ನು ಬಿಟ್ಟು ಬೇರೆ ಜಿಲ್ಲೆಗೆ ತೆರಳಿದ ಕಾರಣಕ್ಕೆ ಅಮಾನತುಗೊಳಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net