More

    ಮನ ಪರಿವರ್ತನೆಯಾಗುವ ಕತೆಗಳು ಬರಲಿ

    ರಾಯಚೂರು: ಜೀವನದ ಮೌಲ್ಯಗಳನ್ನು ಆಧರಿಸಿ ಕತೆ ಬರೆಯಬಹುದು. ಆದರೆ, ಕತೆ ಹುಟ್ಟುವ ಬಗೆ ಬರೆಯಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ ಹೇಳಿದರು.

    ಇದನ್ನೂ ಓದಿ: ಅಜಾಗರೂಕತೆಯಿಂದ ಬಂದ ಮೀನು ಸಾಗಾಟ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ

    ನಗರದ ಕನ್ನಡ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಸುಖಲತಾ ಸುನೀಲ್ ಕುಮಾರ ರಚಿಸಿದ ‘ಕಮರಿದ ಕನಸು ಚಿಗುರೊಡೆದಾಗ’ ಕಥಾ ಸಂಕಲನ ಹಾಗೂ ರಾಣಿ ಡೇವಿಡ್ ನೆಲಹಾಳ ರಚಿಸಿದ ‘ವಸಂತಾಲಾಪ’ ಕವನ ಸಂಕಲನ ಪುಸ್ತಕ ಬಿಡುಗಡೆಗೊಳಿಸಿ ಭಾನುವಾರ ಮಾತನಾಡಿದರು.

    ಎರಡು ಪುಸ್ತಕ ಬಿಡುಗಡೆ ಸಮಾರಂಭ

    ಕಥೆಗಳ ಮೂಲ ಹುಡುಕುವುದು ಕಷ್ಟವಾಗಿದ್ದು, ಕಥೆ ಬರೆಯುವ ಮತ್ತು ನೋಡುವ ದೃಷ್ಟಿ ವಿಭಿನ್ನವಾಗಿರಬೇಕು. ಸಂಗತಿಗಳನ್ನು ಹೆಣೆಯಲು ಸಂಯಮ, ತಾಳ್ಮೆ ಅವಶ್ಯ. ಜನರ ಮನಸ್ಸು ಪರಿವರ್ತನೆ ಮಾಡುವಂಥ ಕತೆಗಳನ್ನು ಬರೆದಾಗ ಅದಕ್ಕೆ ಅರ್ಥ ದೊರೆಯುತ್ತದೆ ಎಂದು ಲಕ್ಷ್ಮೀದೇವಿ ಶಾಸ್ತ್ರಿ ತಿಳಿಸಿದರು.

    ಹಿರಿಯ ಸಾಹಿತಿ ರಮೇಶ ಗಬ್ಬೂರು ಮಾತನಾಡಿ, ಕತೆ ಮತ್ತು ಕವನಗಳು ಸಮಾಜಕ್ಕೆ ಸಂದೇಶ ನೀಡುವಂತಿರಬೇಕು. ಜಾತಿಯತೆ, ದೌರ್ಜನ್ಯ, ಆಹಾರದ ಹಕ್ಕಿನ ಪ್ರಶ್ನೆ, ದೀನ ದಲಿತರು, ಮಹಿಳೆಯರ ಮೇಲೆ ದಬ್ಬಾಳಿಕೆ ಬಗ್ಗೆ ಬೆಳಕು ಚೆಲ್ಲಬೇಕು. ಕಥೆಗಾರರಿಗೆ ಬಹಳ ಜವಾಬ್ದಾರಿಯಿದ್ದು, ಕವಿ ಅಲೆಮಾರಿಯಾಗಬೇಕು. ಹೊಸ ವಿಚಾರಗಳ ಮೂಲಕ ಕವನಗಳನ್ನ ರಚಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts