More

    ಉದ್ಯೋಗಿಯ ಆಕ್ರೋಶಕ್ಕೆ ಕಂಪನಿ ಮುಖ್ಯಸ್ಥನ ಸಂಸಾರವೇ ನಾಶ: 4 ಕೊಲೆ, 8 ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿ

    ನವದೆಹಲಿ: ಕಂಪನಿ ಮುಖ್ಯಸ್ಥನೊಬ್ಬ ಆತನ ಸಂಸಾರಸಮೇತ ತನ್ನ ಉದ್ಯೋಗಿಯೊಬ್ಬನ ಆಕ್ರೋಶಕ್ಕೆ ಬಲಿಯಾಗಿದ್ದಾನೆ. ಅರ್ಥಾತ್, ಮುಖ್ಯಸ್ಥನ ಮೇಲಿನ ಕೋಪದಿಂದ ಉದ್ಯೋಗಿ ತನ್ನ ಮುಖ್ಯಸ್ಥ, ಆತನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ.

    ಫಂಗ್ ಲು ಎಂಬಾತ ಇಂಥದ್ದೊಂದು ದುಷ್ಕೃತ್ಯ ಎಸಗಿದ್ದಾನೆ. ಈತನನ್ನು ಸೆ. 11ರಂದು ಪೊಲೀಸರು ಬಂಧಿಸಿದ್ದಾರೆ. ಈತ ಕಂಪನಿಯೊಂದರ ಮುಖ್ಯಸ್ಥ ಮಾವ್ಯೆ ಸನ್ (50), ಆತನ ಪತ್ನಿ ಮೀಕ್ಸಿ ಸನ್ (49), ಮಕ್ಕಳಾದ ತಿಮೊತಿ ಸನ್ (9) ಮತ್ತು ಟಿಟಸ್​ ಸನ್ (7) ಎಂಬವರು ಕೊಲೆಯಾದರು. ಆರೋಪಿ ಇವರನ್ನು ಬೇರೆ ಬೇರೆ ಕೋಣೆಗಳಲ್ಲಿ ಗುಂಡಿಟ್ಟು ಸಾಯಿಸಿದ್ದ.

    ಅಂದಹಾಗೆ ಈ ಪ್ರಕರಣ ನಡೆದಿದ್ದು, 2014ರ ಜ. 30ರಂದು. ಅಂದು ಯುನೈಟೆಡ್​ ನೇಷನ್ಸ್​ನ ಹೌಸ್ಟನ್​ನಲ್ಲಿ ಕೊಲೆ ಮಾಡಿದ್ದ ಫಂಗ್​, ಬಳಿಕ ತಲೆಮರೆಸಿಕೊಂಡಿದ್ದು, ಈತ ಸೆ. 11ರಂದು ಚೀನಾದಿಂದ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

    58 ವರ್ಷದ ಫಂಗ್​ಗೆ ತಾನು ಕೆಲಸದಲ್ಲಿ ಪರಿಣತ, ಉನ್ನತ ಸ್ಥಾನ ಬೇಕು ಎಂಬ ಭಾವನೆ ಇತ್ತು. ಈ ಕುರಿತು ಕಂಪನಿಯಲ್ಲಿನ ಮುಖ್ಯಸ್ಥ ಮಾವ್ಯೆ ತನ್ನ ಪ್ರಮೋಷನ್​ಗೆ ಶಿಫಾರಸು ಮಾಡಬೇಕು ಎಂದು ಬಯಸಿದ್ದು. ಅಲ್ಲದೆ ಕಂಪನಿಯಲ್ಲಿನ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಮಾಡುವ ಕುರಿತು ಮಾತು ಹೇಳುವಂತೆ ಹೇಳಿದ್ದ. ಅದೇ ಸಿಟ್ಟಿಗೆ ಈ ನಾಲ್ವರನ್ನು ಕೊಲೆ ಮಾಡಿದ್ದ ಎಂಬುದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ.

    ಡಿಎನ್​ಎ ಪರೀಕ್ಷೆ ಮೂಲಕ ಪತ್ತೆಗಿಳಿದ ಪೊಲೀಸರಿಗೆ ಆರೋಪಿ ಫಂಗ್ ಎಂಬುದು ದೃಢಪಡುವಷ್ಟರಲ್ಲಿ ಆತ ತನ್ನ ಸ್ವದೇಶ ಚೀನಾಕ್ಕೆ ಹೊರಟು ಹೋಗಿದ್ದ. ಇನ್ನು ಆತನನ್ನು ಪತ್ತೆ ಮಾಡುವುದು ಕಷ್ಟ ಎಂಬ ಅನಿಸಿಕೆಯಲ್ಲಿದ್ದ ಪೊಲೀಸರಿಗೆ ಆತ ಇತ್ತೀಚೆಗೆ ಕ್ಯಾಲಿಫೋರ್ನಿಯಾ ಏರ್​ಪೋರ್ಟ್​ಗೆ ಬಂದಿಳಿದಿದ್ದು ತಿಳಿದು ಅಲ್ಲಿ ಬಂಧಿಸಿದ್ದಾರೆ. – ಏಜೆನ್ಸೀಸ್

    ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts