More

    ಕಿವಿಗೆ ಫೈರಿಂಗ್​ ಮಾಡಿಕೊಂಡ ಪತಿ: ಗುಂಡು ತಲೆಹೊಕ್ಕಿ ಹೊರಬಂದು ಪತ್ನಿಯ ಕುತ್ತಿಗೆಗೂ ತಗುಲಿತು!

    ನವದೆಹಲಿ: ಆತಂಕಕಾರಿ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಕಿವಿಗೆ ಫೈರಿಂಗ್​ ಮಾಡಿಕೊಂಡಿದ್ದರಿಂದ ಗುಂಡು ತಲೆಯೊಳಗೆ ಹೊಕ್ಕಿ ಮತ್ತೊಂದು ಭಾಗದಲ್ಲಿ ಹೊರಬಂದು ಆತನ ಪತ್ನಿಗೂ ತಗುಲಿರುವ ಘಟನೆ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ಇದನ್ನೂ ಓದಿ: VIDEO| ಸ್ವಿಮ್ಮಿಂಗ್​ ಮಾಡುತ್ತಾ ಭಾರಿ ಗಾತ್ರದ ಶಾರ್ಕ್​ ಎದರು ಹೋದ ಈಜುಗಾರ: ಮುಂದೇನಾಯ್ತು ನೀವೇ ನೋಡಿ!​

    ಆತ್ಮಹತ್ಯೆಗೆ ಯತ್ನಿಸಿದ 34 ವರ್ಷದ ವ್ಯಕ್ತಿ ದೆಹಲಿಯ ಸಫ್ದಾರ್​ಜಂಗ್​ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಏಳು ತಿಂಗಳ ಗರ್ಭಿಣಿಯಾಗಿರುವ ಆತನ ಪತ್ನಿ ಸದ್ಯ ಅಪಾಯದಿಂದ ಪಾರಾಗಿದ್ದಾರೆ.

    ಈ ಬಗ್ಗೆ ಮಾತನಾಡಿರುವ ದೆಹಲಿ ಪೊಲೀಸ್​ ಆಯುಕ್ತ (ಮನೆಸಾರ್​) ದೀಪಕ್​ ಸಹರನ್​, ಕಿವಿಗೆ ಫೈರಿಂಗ್​ ಮಾಡಿಕೊಂಡಿದ್ದರಿಂದ ತಲೆಯೊಳಗೆ ಹೊಕ್ಕಿ ಮತ್ತೊಂದು ಕಡೆಯಿಂದ ಗುಂಡು ಹೊರಬಂದು ಆತನ ಪಕ್ಕದಲ್ಲಿ ಕಾರಿನಲ್ಲಿ ಕುಳಿತಿದ್ದ ಪತ್ನಿಯ ಕುತ್ತಿಗೆಗೆ ತಾಗಿದೆ. ಎಫ್​ಐಆರ್​ ದಾಖಲಿಸಲಾಗಿದ್ದು, ಬ್ಯಾಲಿಸ್ಟಿಕ್ಸ್​ ವರದಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.

    ಇದನ್ನೂ ಓದಿ: ಜಡ್ಜ್​ ಮನೆಯಿಂದ ಕಳ್ಳರು ದೋಚಿದ ವಸ್ತುವನ್ನು ಕೇಳಿ ಪೊಲೀಸರೇ ಶಾಕ್​…!

    ಫೈರಿಂಗ್​ ಮಾಡಿಕೊಂಡ ವ್ಯಕ್ತಿ ಕೆಲ ತಿಂಗಳಿಂದ ಕೆಲಸ ಕಳೆದುಕೊಂಡಿದ್ದ ಎನ್ನಲಾಗಿದೆ. ಗರ್ಭಿಣಿಯಾಗಿದ್ದ ಪತ್ನಿಯನ್ನು ಆಸ್ಪತ್ರೆಗೆ ಪರಿಶೀಲನೆಗಾಗಿ ಕರೆದೊಯ್ಯುವಾಗ ಕೆಲಸ ಕಳೆದುಕೊಂಡ ವಿಚಾರವಾಗಿ ಪತಿ ಮತ್ತು ಪತ್ನಿಯ ನಡುವೆ ನಡೆದ ವಾಗ್ವಾದದಿಂದಾಗಿ ಘಟನೆ ನಡೆದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ಇನ್ನೊಂದು ಮೂಲದ ಪ್ರಕಾರ ಫರೀದಬಾದ್​ ಮೂಲದ ಸಂತ್ರಸ್ತ ಕುಟುಂಬ 5 ತಿಂಗಳ ಹಿಂದೆ ಗುರುಗ್ರಾಮದ ರಾಂಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಆಸ್ಪತ್ರೆಗೆ ಚೆಕ್​ಅಪ್​ಗಾಗಿ ಕರೆದೊಯ್ದಿದ್ದ ಪತಿ, ಪತ್ನಿಯನ್ನು ತವರಿನಲ್ಲಿ ಬಿಟ್ಟುಬರಲು ನಿರ್ಧರಿಸಿದ್ದ ಎನ್ನಲಾಗಿದೆ. ಆದರೆ, ಪತಿಯೊಂದಿಗೆ ಉಳಿಯಲು ಬಯಸಿ ತವರಿಗೆ ಹೋಗಲು ನಿರಾಕರಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿ, ತಾರಕಕ್ಕೇರಿದಾಗ ಕಾರನ್ನು ರಸ್ತೆ ಪಕ್ಕದಲ್ಲಿ ಪಾರ್ಕ್​ ಮಾಡಿ, ಪಿಸ್ತೂಲ್​ನಿಂದ ಶೂಟ್​ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: 8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!

    ಆದರೆ, ಸಂತ್ರಸ್ತೆ ಪತ್ನಿಯ ಹೇಳಿಕೆ ಪ್ರಕಾರ ಕಳೆದ ನಾಲ್ಕೈದು ದಿನಗಳಿಂದ ನಿರೂದ್ಯೋಗ ವಿಚಾರವಾಗಿ ದಂಪತಿ ಜಗಳ ಆಡುತ್ತಿದ್ದಾರಂತೆ.

    ರಕ್ತದ ಮಡುವಿನಲ್ಲಿ ಬಿದ್ದಿದ್ದ ದಂಪತಿಯನ್ನು ದಾರಿ ಹೋಕರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಂದ ಪೊಲೀಸರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸಫ್ದಾರ್​ಜಂಗ್​ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಪಿಸ್ತೂಲ್​ಗೆ ಪರವಾನಗಿ ಇತ್ತ ಎಂಬುದರ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಮದುಮಗಳಂತೆ ಸಿಂಗರಿಸಿಕೊಂಡು 80 ಕಿ.ಮೀ ನಡೆದು ಬಂದ ಯುವತಿಯ ಕಂಡ ಗ್ರಾಮಸ್ಥರು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts