More

    ಅಮ್ಮನನ್ನು ನೋಡಿಕೊಳ್ಳಲು ಬಂದವಳ ಮೇಲೆ ಲವ್​; ಅವಳು ಪ್ರೀತಿಸಿದ್ದು ಅಪ್ಪನನ್ನು!

    ಫ್ಲೋರಿಡಾ: ತ್ರಿಕೋನ ಲವ್​ ಸ್ಟೋರಿಯಲ್ಲಿ ಯಾರಾದರೂ ಒಬ್ಬರು ನೋವನ್ನು ಅನುಭವಿಸಲೇಬೇಕಾಗುತ್ತದೆ. ಅದೇ ರೀತಿ ಫ್ಲೋರಿಡಾದಲ್ಲೂ ಒಂದು ತ್ರಿಕೋನ ಲವ್​​ ಸ್ಟೋರಿ ಏರ್ಪಟ್ಟಿತ್ತು. ಆದರೆ ಈ ಪ್ರೀತಿಯಿಂದಾಗಿ ಕೇವಲ ಒಬ್ಬರಲ್ಲಿ ಮೂರೂ ಜನರೂ ನೋವಿನಲ್ಲೇ ಮುಳುಗುವಂತಾಗಿದೆ.

    ಇದನ್ನೂ ಓದಿ: ಬೇಗ ಸಾಯಲು ನೇಣು ಹಾಕಿಕೋ ಎಂದು ಸಲಹೆ ಕೊಟ್ಟ ಬಾಯ್​ಫ್ರೆಂಡ್​; ವಿಡಿಯೋ ಕಾಲ್​ನಲ್ಲೇ ಅಂತ್ಯವಾಯಿತು ಯುವತಿಯ ಬಾಳು

    ಫ್ಲೋರಿಡಾದ ಲೂಯಿಸ್ ಏಂಜಲ್ ಕ್ವಿನೋನೆಜ್(53) ಹೆಸರಿನ ವ್ಯಕ್ತಿಯ ತಾಯಿಗೆ ಆರೋಗ್ಯ ಸರಿಯಿರಲಿಲ್ಲ. ಆದ ಕಾರಣ ಆತ ಏಂಜೆಲಿಕಾ ಅಕೋಸ್ಟಾ ಬ್ಲಾಂಕೊ(61) ಹೆಸರಿನ ಮಹಿಳೆಯನ್ನು ತಾಯಿಯ ಸೇವೆ ಮಾಡಲು ನೇಮಿಸಿಕೊಂಡಿದ್ದ. ಹಲವು ವರ್ಷಗಳಿಂದ ಆಕೆ ಆತನ ತಾಯಿಯ ಸೇವೆ ಮಾಡುತ್ತಿದ್ದಳು. ಇವರಿಬ್ಬರ ಜತೆ ಲೂಯಿಸ್​ನ ಮಲತಂದೆಯೂ ವಾಸಿಸುತ್ತಿದ್ದ. ಜತೆಯಲ್ಲಿ ಬದುಕುತ್ತಿದ್ದರಿಂದಾಗಿ ಏಂಜೆಲಿಕಾ ಮತ್ತು ಮಲತಂದೆಯ ನಡುವೆ ಪ್ರೀತಿ ಹುಟ್ಟಿದೆ. ಇವರಿಬ್ಬರ ನಡುವೆ ಸಂಬಂಧವೂ ಏರ್ಪಟ್ಟಿದೆ.

    ಆದರೆ ಇನ್ನೊಂದತ್ತ ಲೂಯಿಸ್​, ಏಂಜೆಲಿಕಾ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಲಾರಂಭಿಸಿದ್ದಾನೆ. ಈ ವಿಚಾರವನ್ನು ಆಕೆಗೆ ಹೇಳಬೇಕೆನ್ನುವಷ್ಟರಲ್ಲಿ ಆಕೆ ತನ್ನ ಮಲತಂದೆಯ ಜತೆ ಸಂಬಂಧದಲ್ಲಿರುವುದು ತಿಳಿದುಬಂದಿದೆ. ಇದರಿಂದ ಸಿಟ್ಟಿಗೆದ್ದ ಲೂಯಿಸ್​ ಮಾಡಬಾರದ ತಪ್ಪನ್ನು ಮಾಡಿಬಿಟ್ಟಿದ್ದಾನೆ.

    ಇದನ್ನೂ ಓದಿ: ‘ಈ ಬಲ್ಬ್​ ನಿಮ್ಮ ಬದುಕನ್ನೇ ಬದಲಾಯಿಸುತ್ತೆ’ ಬಲ್ಬ್​ ಕೊಳ್ಳುವ ಮುನ್ನ ಎಚ್ಚರ!

    ಇತ್ತೀಚೆಗೆ ಒಂದು ದಿನ ರಾತ್ರಿ ಕುಡಿದು ಬಂದ ಲೂಯಿಸ್​, ಏಂಜೆಲಿಕಾ ಮೇಲೆ ಗ್ಯಾಸೋಲಿನ್​ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳೀಯರಿಗೆ ಮಾಹಿತಿ ತಿಳಿದು ಅಗ್ನಿಶಾಮಕ ದಳ ಮತ್ತು ಆ್ಯಂಬುಲೆನ್ಸ್​ಗೆ ಕರೆ ಮಾಡಲಾಗಿದೆ. ಇದೀಗ ಏಜೆಂಲಿಕಾರನ್ನು ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

    ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts