More

    ‘ಮನ್ ಕಿ ಬಾತ್’ನಲ್ಲಿ ಬಸವ ಜಯಂತಿ ಶುಭಾಶಯ ಕೋರಿದ ಪ್ರಧಾನಿ ಮೋದಿ

    ನವದೆಹಲಿ: ‘ಬಸವೇಶ್ವರ ಅವರ ಸಂದೇಶಗಳನ್ನು ಅನುಸರಿಸಲು ಹಾಗೂ ಅವರ ಆದರ್ಶಗಳನ್ನು ಪಾಲಿಸಲು ನನಗೆ ಅವಕಾಶ ದೊರಕಿರುವುದು ತುಂಬಾ ಸಂತೋಷದ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

    ಬಸವೇಶ್ವರ ಜಯಂತಿಗೆ ‘ಮನ್‌ ಕಿ ಬಾತ್‌’ನಲ್ಲಿ ಶುಭಾಶಯ ಕೋರಿದ ಪ್ರಧಾನಿ, ಎಲ್ಲರೂ ಬಸವೇಶ್ವರರ ಆದರ್ಶಗಳನ್ನು ಪಾಲನೆ ಮಾಡಬೇಕಿದೆ ಎಂದು ಹೇಳಿದರು.
    ಇಂದು ಅಕ್ಷಯ-ತೃತೀಯದ ಪವಿತ್ರ ಹಬ್ಬವೂ ಹೌದು. ಈ ಸಮಯದಲ್ಲಿಯೇ ಮನ್‌-ಕೀ-ಬಾತ್‌ ಕಾರ್ಯಕ್ರಮ ಆಯೋಜನೆ ಆಗಿರುವುದು ಕಾಕತಾಳೀಯ. ‘ಅಕ್ಷಯ’ ಎಂದರೆ ಮುಗಿಯದ ಎಂದರ್ಥ. ಇಂಥ ಸಂದಿಗ್ಧ ಸಮಯದಲ್ಲಿ, ನಮ್ಮ ಆತ್ಮ, ನಮ್ಮ ಜೀವ ಶಕ್ತಿ ‘ಅಕ್ಷಯ’ ಎಂಬುದನ್ನು ನೆನಪಿಸುವ ಕಾಲವಿದು. ನಮ್ಮ ಹಾದಿಯನ್ನು ಎಷ್ಟೇ ತೊಂದರೆ, ಅಡೆತಡೆಗಳು ಬಂದರೂ, ನಮ್ಮ ಮೇಲೆ ಎಷ್ಟು ಅನಾಹುತಗಳು ಸಂಭವಿಸಿದರೂ ಮತ್ತು ಎಷ್ಟು ಸಾಂಕ್ರಾಮಿಕ ರೋಗಗಳನ್ನು ಎದುರಿಸಬೇಕಾಗಿದ್ದರೂ – ಅವುಗಳನ್ನು ಹೋರಾಡುವ ನಮ್ಮ ಶಕ್ತಿ ಎಂದಿಗೂ ಕುಂದದಿರಲಿ, ನಮ್ಮ ಶಕ್ತಿಯು ಅಕ್ಷಯವಾಗಿರಲಿ ಎಂಬುದನ್ನು ನೆನಪಿಸುತ್ತದೆ ಎಂದರು.

    ನಮ್ಮ ರೈತರು ಇಂಥ ಪರಿಸ್ಥಿತಿಯಲ್ಲಿಯೂ ದುಡಿಯುತ್ತಿರುವ ಹಿನ್ನೆಲೆಯಲ್ಲಿ, ನಮಗೆಲ್ಲಾ ಆಹಾರ ಧಾನ್ಯಗಳು ಸಿಗುತ್ತಿವೆ. ಅವರೇ ನಮ್ಮ ಅನ್ನದಾತರು. ಅವರ ಶ್ರಮದಿಂದ ಆಹಾರ ಧಾನ್ಯಗಳು ಅಕ್ಷಯವಾಗಿದೆ. ಅಕ್ಷಯ ತೃತೀಯದ ಈ ದಿನದಂದು, ನಮ್ಮ ಪರಿಸರ, ಕಾಡುಗಳು, ನದಿಗಳು ಮತ್ತು ನಮ್ಮ ಪರಿಸರದಲ್ಲಿ ಸಂರಕ್ಷಣೆ ಮಾಡುವ ಬಗ್ಗೆ ಯೋಚಿಸಬೇಕು, ಅವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದರು.

    ರಂಜಾನ್‌ ಮಾಸಾಚರಣೆ ಶುರುವಾಗಿರುವ ಹಿನ್ನೆಲೆಯಲ್ಲಿ, ರಂಜಾನ್‌ ಶುಭಾಶಯವನ್ನೂ ಕೋರಿದ ಪ್ರಧಾನಿ, ‘ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗಿದೆ. ಈ ಸಮಯದಲ್ಲಿ ನಾವು ಇಷ್ಟು ದೊಡ್ಡ ಸಂಕಟವನ್ನು ಎದುರಿಸುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ಇಡೀ ವಿಶ್ವ ಈ ಸಮಯದಲ್ಲಿ ತೊಂದರೆಯಿಂದ ಇರುವ ಕಾರಣದಿಂದ, ರಂಜಾನ್ ಅನ್ನು ಸಂಯಮ, ಸದ್ಭಾವನೆ ಮತ್ತು ಸೂಕ್ಷ್ಮವಾಗಿ ಆಚರಿಸಬೇಕಾದ ಅಗತ್ಯವಿದೆ. ಈ ಸಮಯದಲ್ಲಿ ನಾವು ಹಿಂದೆಂದಿಗಿಂತಲೂ ಹೆಚ್ಚು ಪ್ರಾರ್ಥಿಸಬೇಕು. ಈ ಮೂಲಕ ಈದ್‌ ಆಚರಣೆಗೂ ಮುನ್ನ ಜಗತ್ತು ಕರೊನಾದಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದರು. ರಂಜಾನ್‌ನ ಈ ದಿನಗಳಲ್ಲಿ, ಸ್ಥಳೀಯ ಆಡಳಿತದ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ, ಕರೊನಾ ವಿರುದ್ಧದ ಹೋರಾಟವನ್ನು ಬಲಪಡಿಸುವ ವಿಶ್ವಾಸ ತಮಗಿದೆ ಎಂದು ಅವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts