More

    ನೀರಿಗೆ ಬಿತ್ತು ಪ್ರಪೋಸ್ ಮಾಡಲೆಂದು ತಂದ ಉಂಗುರ; ಸಮುದ್ರಕ್ಕೇ ಧುಮುಕಿದ ಪ್ರಿಯಕರ: ಆಮೇಲೇನಾಯ್ತು!

    ನವದೆಹಲಿ: ಪ್ರಪೋಸ್​ ಮಾಡುವುದು ರೊಮ್ಯಾಂಟಿಕ್ ಆಗಿರಬೇಕು ಎಂದು ಅದಕ್ಕಾಗಿ ಬೋಟ್​​ನ ತುದಿಯಲ್ಲಿ ಸನ್​ಸೆಟ್​ನ ಬ್ಯಾಕ್​ಗ್ರೌಂಡ್​ನಲ್ಲಿ ಗೆಳತಿಗೆ ಮುಂದೆ ಪ್ರೇಮನಿವೇದನೆ ಮಾಡಬೇಕು ಎಂದು ಎಲ್ಲವನ್ನೂ ಸೆಟ್​ ಮಾಡಿದ್ದ ಪ್ರಿಯಕರ, ಇನ್ನೇನು ಪ್ರಪೋಸ್ ಮಾಡಬೇಕು ಎನ್ನುವಷ್ಟರಲ್ಲಿ ಉಂಗುರವಿದ್ದ ಬಾಕ್ಸ್​ ನೀರಿಗೆ ಬಿದ್ದಿದೆ.

    ಯುಎಸ್​ನ ಫ್ಲೋರಿಡದಲ್ಲಿ ಸ್ಕಾಟ್​ ಕ್ಲೈನ್​ ಎಂಬಾತ ತನ್ನ ಗೆಳತಿ ಸುಜೀ ಟಕರ್​ಗೆ ಪ್ರೇಮನಿವೇದನೆ ಮಾಡಲು ಮುಂದಾಗಿದ್ದಾಗ ಇಂಥದ್ದೊಂದು ಪ್ರಸಂಗ ನಡೆದಿದೆ. ಪ್ರಪೋಸ್ ಮಾಡುವ ಸಂದರ್ಭ ಅತ್ಯಂತ ರೊಮ್ಯಾಂಟಿಕ್ ಆಗಿರಬೇಕು ಎಂದು ಆತ ಸೂರ್ಯಾಸ್ತದ ದೃಶ್ಯದ ಹಿನ್ನೆಲೆಯಲ್ಲಿ ಪ್ರೇಮನಿವೇದನೆಯನ್ನು ಪ್ಲ್ಯಾನ್ ಮಾಡಿದ್ದ.

    ಅವಳ ಮುಂದೆ ಮಂಡಿಯೂರಿ ಇನ್ನೇನು ಬಾಕ್ಸ್​ನಿಂದ ರಿಂಗ್ ತೆಗೆದು ಅವಳಿಗೆ ತೊಡಿಸಬೇಕು ಎನ್ನುವಷ್ಟರಲ್ಲಿ ಬಾಕ್ಸ್ ಕೈ ತಪ್ಪಿ ನೀರಿಗೆ ಬಿದ್ದಿದೆ. ಆಗ ತಕ್ಷಣ ನೀರಿಗೆ ಧುಮುಕಿದ ಸ್ಕಾಟ್, ನೀರಲ್ಲಿ ಜಾಲಾಡಿ ಆ ಬಾಕ್ಸ್​ ಪುನಃ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ಗಮನ ಸೆಳೆದಿದೆ. ರಿಂಗ್ ಮತ್ತೆ ಸಿಕ್ಕ ಖುಷಿಯಲ್ಲಿ ‘ದಿಸ್​ ಈಸ್ 100% ರಿಯಲ್, 100% ಮೈ ಲಕ್, 100% ವಿಲ್ ನೆವರ್ ಫೊರ್ಗೆಟ್​’ ಎಂದು ಫೇಸ್​ಬುಕ್​ನಲ್ಲಿ ಸ್ಕಾಟ್ ಹಂಚಿಕೊಂಡಿದ್ದಾನೆ.

    ಮಗಳ ಮದುವೆಗೆ ಕೆಲವು ಗಂಟೆಗಳು ಬಾಕಿ ಇರುವಾಗ ನೇಣು ಹಾಕಿಕೊಂಡ ತಂದೆ; ಮದ್ಯಪಾನ ಮಾಡಿದ್ದಕ್ಕೆ ಬೈದಿದ್ದೇ ಕಾರಣ?

    ಮಗನಿಗಾಗಿ ಎರಡೇ ತಿಂಗಳಲ್ಲಿ ಹತ್ತು ಕೆ.ಜಿ. ತೂಕ ಕಳೆದುಕೊಂಡ ತಂದೆ; ಕಾರಣವಿದು…

    ಒಂದೇ ಮಾದರಿಯ 2 ಅಪಘಾತಕ್ಕೆ ಬೆಚ್ಚಿಬಿದ್ದ ಹೊನ್ನಾಳಿ, ಕಾರಲ್ಲಿ ಶವ ಪತ್ತೆ: ಅಂದು ಶಾಸಕರ ತಮ್ಮನ ಮಗ, ಇಂದು ಎಎಸ್‌ಐ ಪುತ್ರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts