More

    ‘ಜಾಹಿರಾತು ನೋಡಿ ಹಣ ಬರುತ್ತೆ’ ಎಂದು ವಂಚನೆ… 4 ಲಕ್ಷ ಜನರಿಗೆ ಟೋಪಿ !

    ಬೆಂಗಳೂರು : ಅರ್ಧ ಗಂಟೆ ಜಾಹಿರಾತು ನೋಡಿದ್ರೆ ಹಣ ಬರುತ್ತೆ ಎಂದು ಚೈನ್ ಲಿಂಕ್ ರೀತಿಯಲ್ಲಿ ಆನ್​​ಲೈನ್ ಮುಖಾಂತರ ವಂಚನೆಯ ಜಾಲ ಹೆಣೆದಿದ್ದ ಖದೀಮನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ‘ಅಡ್ವರ್​ಟೈಸ್​ಮೆಂಟ್ ಪ್ರಾಜೆಕ್ಟ್’ ಎಂದು ಹೇಳಿ ಸುಮಾರು ನಾಲ್ಕು ಲಕ್ಷ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ಧೋಖಾ ಮಾಡುತ್ತಿದ್ದ ಕೆ.ವಿ.ಜಾನಿ ಬಂಧಿತ.

    ಆರೋಪಿಯು ಚೈನ್ ಲಿಂಕ್ ಮಾದರಿಯಲ್ಲಿ www.jalilifestyle.com ಎಂಬ ವೆಬ್ಸೈಟ್ ಮುಖಾಂತರ ಜನರಿಂದ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಜಾಹೀರಾತು ನೋಡಿದರೆ ದಿನಕ್ಕೆ 240 ರೂಪಾಯಿ ಬರುತ್ತೆ ಎಂದು 1109 ರೂಪಾಯಿ ನೀಡಿ ಸದಸ್ಯತ್ವ ಪಡೆದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದ. ಹೀಗೆ ಸದಸ್ಯತ್ವ ಪಡೆದರೆ ತಿಂಗಳಿಗೆ 7200 ರೂ., ವರ್ಷಕ್ಕೆ 86,400 ರೂ. ದುಡಿಯಬಹುದು ಎಂದು ಆಮಿಷ ಒಡ್ಡುತ್ತಿದ್ದ. ಅದೇ ರೀತಿ ಒಬ್ಬ ಸದ್ಯಸ್ಯ 10 ಜನರನ್ನು ಇನ್ವೈಟ್ ಮಾಡಿ ಸದ್ಯಸರನ್ನಾಗಿಸಿದರೆ, 4400 ರೂಪಾಯಿ ಪ್ರಾಫಿಟ್ ಸಿಗುತ್ತೆ; 1 ಲಕ್ಷ ಸದಸ್ಯರನ್ನಾಗಿ ಮಾಡಿದರೆ 356 ಕೋಟಿ ರೂ. ಹಣ ಗಳಿಸಬಹುದೆಂದು ದೊಡ್ಡ ಪ್ರಮಾಣದಲ್ಲಿ ಆಮಿಷ ತೋರಿಸುತ್ತಿದ್ದ ಎನ್ನಲಾಗಿದೆ.

    ಈ ಜಾಲದ ಬಗ್ಗೆ ವಂಚನೆಗೊಳಗಾದ ಹಲವರಿಂದ ನಿರಂತರ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಆರೋಪಿ‌ ಜಾನಿ‌ಯನ್ನು ಇಂದು ಬಂಧಿಸಿದ್ದಾರೆ.

    ಇಳಿಯುತ್ತಿದೆ ಕರೊನಾ ಸೋಂಕು : 1.2 ಲಕ್ಷ ಹೊಸ ಪ್ರಕರಣಗಳು

    ಬಿಬಿಎಂಪಿ ಕಮಿಷನರ್ ಟ್ವಿಟರ್​ ಖಾತೆ ಹ್ಯಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts