More

    ಮನೆ ಬಾಡಿಗೆ ಪಡೆಯುವ ಸೋಗಲ್ಲಿ ಬ್ಯಾಂಕ್ ಖಾತೆಗೇ ಕನ್ನ!

    ಬೆಂಗಳೂರು: ಮನೆ ಬಾಡಿಗೆಗಿದೆ ಎಂದು ವೆಬ್‌ಸೈಟ್‌ನಲ್ಲಿ ಜಾಹಿರಾತು ಹಾಕಿದ ಮಹಿಳೆಯನ್ನು ಸಂಪರ್ಕಿಸಿದ ಸೈಬರ್ ಖದೀಮರು ಮುಂಗಡ ಹಣ ಹಾಕುವ ನೆಪದಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವಂತೆ ಸೂಚಿಸಿ 1 ಲಕ್ಷ ರೂ. ಲಪಟಾಯಿಸಿದ್ದಾರೆ.
    ಈಜೀಪುರ ನಿವಾಸಿ ಗೋವರ್ದನ್ (58) ಎಂಬುವವರ ಪತ್ನಿ ಹಣ ಕಳೆದುಕೊಂಡವರು.

    ಗೋವರ್ದನ್ ಪತ್ನಿ ಈಜೀಪುರದಲ್ಲಿ ಸ್ವಂತ ಮನೆ ಹೊಂದಿದ್ದರು. ವೆಬ್‌ಸೈಟ್‌ವೊಂದರಲ್ಲಿ ಮನೆ ಬಾಡಿಗೆಗೆ ಇದೆ ಎಂದು ಜಾಹಿರಾತು ಹಾಕಿ ಮೊಬೈಲ್ ನಂಬರ್ ನಮೂದಿಸಿದ್ದರು. ಇತ್ತೀಚೆಗೆ ಮಹಿಳೆಯ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ಸೇನೆಯಲ್ಲಿ ಇರುವುದಾಗಿ ಪರಿಚಯಿಸಿಕೊಂಡಿದ್ದ. ನಂತರ ನಿಮ್ಮ ಮನೆ ಬಾಡಿಗೆಗೆ ಪಡೆಯುತ್ತೇನೆ ಎಂದು ನಂಬಿಸಿ ಬ್ಯಾಂಕ್ ಖಾತೆ ವಿವರ ಪಡೆದುಕೊಂಡಿದ್ದ. ಇದಾದ ಕೆಲ ಹೊತ್ತಿನ ಬಳಿಕ ಮತ್ತೆ ಕರೆ ಮಾಡಿದ ಅಪರಿಚಿತ ಮುಂಗಡ ಹಣ ಪಾವತಿಸುವುದಾಗಿ ಮಹಿಳೆಯ ವಾಟ್ಸ್‌ಆಪ್ ನಂಬರ್‌ಗೆ ಕ್ಯೂ ಆರ್ ಕೋಡ್ ಲಿಂಕ್ ಕಳುಹಿಸಿ ಸ್ಕ್ಯಾನ್ ಮಾಡುವಂತೆ ಸೂಚಿಸಿದ್ದ. ಕ್ಯೂಆರ್ ಕೋಡ್‌ನ್ನು ಮಹಿಳೆ ಸ್ಕ್ಯಾನ್ ಮಾಡಿದಾಗ ಹಣ ಪಾವತಿಯಾಗುವ ಬದಲು ಮಹಿಳೆಯ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ 1 ಲಕ್ಷ ರೂ. ಕಡಿತಗೊಂಡಿದೆ. ತಾವು ಮೊಸ ಹೋಗಿರುವುದನ್ನು ಅರಿತ ಮಹಿಳೆಯ ಪತಿ ಗೋವರ್ದನ್ ಕೇಂದ್ರ ಸಿಇಎನ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.

    ಮಲಗೋ ಜಾಗಕ್ಕೂ ಹೊಡೆದಾಟ! ಚಪ್ಪಲಿ ಡಿಸೈನ್​ನಿಂದಲೇ ಸಿಕ್ಕಿಬಿದ್ದ ಕೊಲೆಗಾರ

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts