More

    ಕುಡಿದ ಮತ್ತಲ್ಲಿ ಕಚ್ಚಾ ಬಾಂಬ್ ಕಚ್ಚಿದ ವ್ಯಕ್ತಿ ಮೃತ್ಯು; ಆ ಗ್ರಾಮಕ್ಕೆ ಬಾಂಬ್​ ಹೇಗೆ ಬಂತು?

    ಚಿತ್ತೂರು (ಆಂಧ್ರ ಪ್ರದೇಶ): ರಾಜ್ಯದ ಗಡಿ ಜಿಲ್ಲೆಗಳಾದ ಆಂಧ್ರದ ರಾಯಲಸೀಮಾದ ಚಿತ್ತೂರುಮ ಕಡಪ, ಅನಂತಪುರದಲ್ಲಿ ಈ ಹಿಂದೆ ಕಚ್ಚಾ ಬಾಂಬ್, ನಾಡಬಂದೂಕುಗಳಿಂದ ಸಿಡಿಯುತ್ತಿದ್ದ ಗುಂಡುಗಳು, ಮಚ್ಚು, ದೊಣ್ಣೆಗಳದ್ದೇ ಸದ್ದು. ಆದರೆ ಇತ್ತೀಚೆಗೆ ಈ ಸಂಸ್ಕೃತಿ ಕಡಿಮೆಯಾಗಿತ್ತಾದರೂ, ಅದು ಸಂಪೂರ್ಣವಾಗಿ ನಿಂತಿಲ್ಲ ಎಂಬುದು ಇಲ್ಲೊಂದು ಪ್ರಕರಣದಿಂದ ಸಾಬೀತಾಗಿದೆ.

    ಇದನ್ನೂ ಓದಿ: “ನನ್ನ ಗುರು ಜತೆ ಮತ್ತೆ ಕೆಲಸ ಮಾಡುತ್ತಿದ್ದೇನೆ”: ಸಂತಸ ಹಂಚಿಕೊಂಡ ತಲೈವಾ…
    ಅದೇನೆಂದರೆ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲಿದ್ದ ಕಚ್ಚಾ ಬಾಂಬ್ ಅನ್ನು ರಾಗಿ ಮುದ್ದೆ ಎಂದು ತಿಳಿದೋ ಏನೋ ಬಾಯಲ್ಲಿ ಕಚ್ಚಿದ್ದಾನೆ. ಕೂಡಲೇ ಅದು ಸಿಡಿದು ಆತ ಮೃತಪಟ್ಟಿದ್ದಾನೆ. ಘಟನೆ ಚಿತ್ತೂರು ಜಿಲ್ಲೆಯ ಬಂಗಾರು ಪಾಳ್ಯಂ ಮಂಡಲದ ಗಡ್ಡಂವರಿ ಪಲ್ಲಿಯಲ್ಲಿ ಸೋಮವಾರ ತಡ ರಾತ್ರಿ ಈ ಘಟನೆ ನಡೆದಿದ್ದು, 35 ವರ್ಷದ ಎಂ. ಚಿರಂಜೀವಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಚಿರಂಜೀವಿಗೆ ಕಡಿತ ಚಟವಿದ್ದು, ಆತನ ಪತ್ನಿ ಇದೇ ವಿಚಾರಕ್ಕೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದಳು. ಪತ್ನಿ ದೂರವಾಗಿದ್ದರಿಂದ ಚಿರಂಜೀವಿ ನಿತ್ಯ ವಿಪರೀತ ಕುಡಿದು ಮನೆಗೆ ಬರುತ್ತಿದ್ದ. ಎಂದಿನಂತೆ ಕುಡಿದಿದ್ದ ಆತನಿಗೆ ಸೋಮವಾರ ಸಂಜೆ ಹಸಿವಾಗಿದೆ. ಆಗ ಮನೆಯೆಲ್ಲ ಆಹಾರಕ್ಕಾಗಿ ಹುಡುಕಾಡಿದ್ದಾನೆ. ಕಡೆಗೆ ಅಮಲಿನಲ್ಲಿದ್ದ ಆತನ ಕೈಗೆ ಕಚ್ಚಾ ಬಾಂಬ್ ಸಿಕ್ಕಿದೆ. ಅದನ್ನು ರಾಗಿ ಮುದ್ದೆ ಇರಬೇಕೆಂದು ಭಾವಿಸಿ ಬಾಯಿಗೆ ಇಟ್ಟುಕೊಂಡು ಕಚ್ಚಿದ್ದಾನೆ. ಕೂಡಲೇ ಅದು ಸ್ಫೋಟಗೊಂಡಿದೆ. ಇದರ ಪರಿಣಾಮ ಆತನ ತಲೆ ಛಿದ್ರಗೊಂಡಿದೆ.

    ಭಾರೀ ಸ್ಪೋಟದ ಸದ್ದು ಕೇಳಿ ಗ್ರಾಮಸ್ಥರು ಚಿರಂಜೀವಿ ಮನೆಯತ್ತ ದೌಡಾಯಿಸಿದ್ದಾರೆ. ಆರಂಭದಲ್ಲಿ ಆತನಿಗೆ ಏನಾಯ್ತು ಎಂದು ಜನರಿಗೆ ಅರಿವಾಗಿಲ್ಲ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆತ ಮಾರ್ಗಮಧ್ಯೆ ಆತ ಮೃತಪಟ್ಟಿದ್ದ ಎಂದು ವೈದ್ಯರು ಘೋಷಿಸಿದ್ದಾರೆ.
    ಬಳಿಕ ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆ ವೇಳೆ ಆತ ತನ್ನ ಬಾಯಿಯಲ್ಲಿ ಬಾಂಬ್ ಕಡಿದಿರುವ ಬಗ್ಗೆ ಸುಳಿವು ಸಿಕ್ಕಿದೆ. ಗ್ರಾಮಕ್ಕೆ ಕಚ್ಚಾ ಬಾಂಬ್ ಹೇಗೆ ಬಂತು ಎಂದು ಯಾರಿಗೂ ಗೊತ್ತಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

    ಹಮಾಸ್ ಯುದ್ಧದ ಮಧ್ಯೆ ಇಂಧನವನ್ನು ಏಕೆ ಸಂಗ್ರಹಿಸುತ್ತಿದೆ? ಫೋಟೋ ಬಿಡುಗಡೆ ಮಾಡಿದ ಇಸ್ರೇಲ್ ರಕ್ಷಣಾ ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts