More

    ಮಗಳ ಪಾಡು ನೋಡಲಾಗದೆ ಪ್ರಾಣ ತೆತ್ತ ತಂದೆ! ಹಲವು ದಿನಗಳ ಕಾಲ ಮೊಬೈಲ್​ನಲ್ಲೇ ಅಡಗಿದ್ದ ಸತ್ಯ!

    ತಿರುವನಂತಪುರಂ: ಬಡ ಕಾರ್ಮಿಕನೊಬ್ಬ ತನ್ನ ಮಗಳಿಗೆ ಆಕೆಯ ಪತಿ ನೀಡುತ್ತಿದ್ದ ವರದಕ್ಷಿಣೆ ಕಿರುಕುಳದ ಬಗ್ಗೆ ತಿಳಿದು, ತನ್ನ ಅಸಹಾಯಕತೆಯಿಂದ ದುಃಖಿತನಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ರಾಜ್ಯದ ಮಲಪ್ಪುರಂ ಜಿಲ್ಲೆಯ ಮಂಪಾಡ್​ ನಿವಾಸಿಯಾಗಿದ್ದ 46 ವರ್ಷ ವಯಸ್ಸಿನ ಮೂಸಕುಟ್ಟಿ ಎಂಬಾತ ಮೃತ ದುರ್ದೈವಿ.

    ಮೂಸಕುಟ್ಟಿ ರಬ್ಬರ್​ ಟ್ಯಾಪಿಂಗ್​ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಸೆಪ್ಟೆಂಬರ್​ 23 ರಂದು ಸಾವಪ್ಪಿದ್ದ. ಆತನ ದಿಢೀರ್​ ಸಾವಿನ ಬಗ್ಗೆ ದುಃಖಿತರಾಗಿದ್ದ ಕುಟುಂಬದ ಸದಸ್ಯರಿಗೆ ಇತ್ತೀಚೆಗೆ ಅವನ ಫೋನಿನಲ್ಲಿ ರೆಕಾರ್ಡ್​​ ಮಾಡಿದ್ದ ವಿಡಿಯೋ ಒಂದು ಸಿಕ್ಕಿದೆ. ಈ ವಿಡಿಯೋದಲ್ಲಿ ತನ್ನ ಮಗಳು ಹೀಬಾಳ ಗಂಡ ಹಮೀದ್​​ನ ಬೇಡಿಕೆಯಂತೆ ತಾನು ಹೆಚ್ಚಿನ ವರದಕ್ಷಿಣೆ ನೀಡಲಾರದ ಅಸಹಾಯಕತೆಯನ್ನು ಆತ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ನಿರ್ಭಯಾ ನಿಧಿ ಬಳಕೆಯಲ್ಲಿ ಸರ್ಕಾರ ವಿಳಂಬ, ಬೆಂಗಳೂರಲ್ಲಿ ಕ್ರೈಂ ರೇಟ್‌ ಹೆಚ್ಚಳ

    “ನನ್ನ ಮಗಳು ನನಗೆ ಎಲ್ಲಾ ಹೇಳಿದ್ದಾಳೆ. ಅವಳಿಗೆ ತುಂಬಾ ಹಿಂಸೆ ನೀಡಿದ್ದಾನೆ. ನನ್ನೊಂದಿಗೆ ಕೆಟ್ಟದಾಗಿ ಮಾತಾಡಿದ. ನನಗೆ ಇದನ್ನು ಸಹಿಸಲಾಗುತ್ತಿಲ್ಲ. ಹೆಚ್ಚು ಚಿನ್ನ ಕೊಡಲು ಕೇಳುತ್ತಿದ್ದಾನೆ. ಮದುವೆ ಸಮಯದಲ್ಲಿ ನಾನಾಗಲೇ 18 ಸವರನ್ ಚಿನ್ನ ಕೊಟ್ಟಿದ್ದೀನಿ. ಮತ್ತೆ 6 ಸವರನ್ ಕೊಟ್ಟಿದ್ದೀನಿ. ಈಗ ಅವನು​ ಮಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳುತ್ತಿದ್ದಾನೆ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀನಿ” ಎಂದು ನಡುನಡುವೆ ರೋಧಿಸುತ್ತ ಹೇಳಿಕೊಂಡಿರುವ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.

    ನವಜಾತ ಶಿಶುವಿನ ತಾಯಾಗಿರುವ ಮಗಳು ಹೀಬಾ ಕಳೆದ ಕೆಲವು ತಿಂಗಳಿಂದ ಮೂಸಕುಟ್ಟಿ ಮನೆಯಲ್ಲೇ ವಾಸಿಸುತ್ತಿದ್ದಾಳೆ ಎನ್ನಲಾಗಿದ್ದು, ತನ್ನ ಗಂಡ ಹೆಚ್ಚಿನ ವರದಕ್ಷಿಣೆಗಾಗಿ ತನಗೆ 2 ವರ್ಷದಿಂದ ಅಮಾನುಷವಾದ ಕಿರುಕುಳ ನೀಡುತ್ತಿದ್ದುದನ್ನು ಒಪ್ಪಿಕೊಂಡಿದ್ದಾಳೆ. ಮೃತ ಮೂಸಕುಟ್ಟಿಯ ಈ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಮಂಪಾಡ್​ ಪೊಲೀಸರು ತನಿಖೆ ಕೈಗೊಂಡು ಅಳಿಯ ಹಮೀದ್​ನನ್ನು ಅಕ್ಟೋಬರ್ 5 ರಂದು ಬಂಧಿಸಿದ್ದಾರೆ. (ಏಜೆನ್ಸೀಸ್)

    “2047ರ ವೇಳೆಗೆ ಭಾರತದ 100 ನಗರಗಳಲ್ಲಿ ಮೆಟ್ರೋ ರೈಲು ಸಂಚಾರ”

    ತುಂಬಾ ಹೊತ್ತು ಕಂಪ್ಯೂಟರ್​ ಮುಂದೆ ಕೂತು ಕೆಲಸ ಮಾಡುತ್ತೀರಾ? ಹಾಗಿದ್ರೆ, ಈ ಉಪಯುಕ್ತ ಆಸನಗಳನ್ನು ಮಾಡಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts