More

    ಆನ್​​ಲೈನ್​ನಲ್ಲಿ ತೆಂಗಿನಕಾಯಿ ಖರೀದಿಗೆ ಮುಂದಾದ ಮಹಿಳೆ ಕೈಗೆ ‘ಚಿಪ್ಪು’; 45 ಸಾವಿರ ರೂಪಾಯಿ ಮೋಸ..

    ಬೆಂಗಳೂರು: ಆನ್‌ಲೈನ್‌ನಲ್ಲಿ ತೆಂಗಿನ ಕಾಯಿ ಖರೀದಿಸಲು ಮುಂದಾದ ಮಹಿಳೆಯಿಂದ 45 ಸಾವಿರ ರೂಪಾಯಿ ಪಡೆದು ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ. ವಿಮಾನಪುರದ ಎಚ್‌ಎಎಲ್ ಓಲ್ಡ್ ಟೌನ್‌ಶಿಪ್​​ನ ಮಹಿಳೆ ವಂಚನೆಗೆ ಒಳಗಾದವರು. ಈಕೆ ಕೊಟ್ಟ ದೂರಿನ ಮೇರೆಗೆ ಮಲ್ಲಿಕಾರ್ಜುನ್ ಮತ್ತು ಮಹೇಶ್ ಎಂಬುವರ ವಿರುದ್ಧ ಎಫ್​​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ವೈಟ್‌ಫೀಲ್ಡ್ ಸಿಇಎನ್ ಪೊಲೀಸರು ತಿಳಿಸಿದ್ದಾರೆ.

    ಅಂಗಡಿಗೆ ಆನ್‌ಲೈನ್‌ನಲ್ಲಿ ತೆಂಗಿನ ಕಾಯಿ ಆರ್ಡರ್ ಮಾಡಲು ಗೂಗಲ್‌ನಲ್ಲಿ ಮಾಹಿತಿ ಸರ್ಚ್ ಮಾಡುತ್ತಿದ್ದಾಗ ಮೈಸೂರು ಆರ್‌ಎಂಸಿ ಯಾರ್ಡ್ ಮಲ್ಲಿಕಾರ್ಜುನ್ ಎಂಬಾತನ ನಂಬರ್ ಲಭ್ಯವಾಗಿದೆ. ಆ ನಂಬರ್‌ಗೆ ಕರೆ ಮಾಡಿದಾಗ ತೆಂಗಿನ ಕಾಯಿ ಪೂರೈಕೆ ಮಾಡುತ್ತೇನೆ, ಅದಕ್ಕೂ ಮೊದಲು ಮುಂಗಡ ಹಣ ಪಾವತಿ ಮಾಡಬೇಕೆಂದು ಆತ ಸೂಚಿಸಿದ್ದ.

    ಇದನ್ನೂ ಓದಿ: ಕನ್ನಡದ ಬಾವುಟ, ಸಂಗೊಳ್ಳಿ ರಾಯಣ್ಣ ಬಳಿಕ ಈಗ ಬಸವಣ್ಣಂಗೂ ಅಪಮಾನ; ಭಾವಚಿತ್ರಕ್ಕೆ ಸೆಗಣಿ ಎಸೆದ ದುಷ್ಕರ್ಮಿಗಳು..

    ಇದನ್ನು ನಂಬಿದ ಮಹಿಳೆ, ಗೂಗಲ್ ಪೇ ಮೂಲಕ ಆತ ಕೊಟ್ಟ ಬ್ಯಾಂಕ್ ಖಾತೆಗೆ 45 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ. ಹಣ ಪಡೆದ ಆರೋಪಿ, ಬಳಿಕ ಮಹಿಳೆಯ ವಿಳಾಸ ಪಡೆದುಕೊಂಡಿದ್ದಾನೆ. ಎಷ್ಟು ದಿನವಾದರೂ ತೆಂಗಿನ ಕಾಯಿ ಪಾರ್ಸೆಲ್ ಬಂದಿಲ್ಲ. ಕೊನೆಗೆ ಅಂಗಡಿ ವಿಳಾಸಕ್ಕೆ ಹೋಗಿ ನೋಡಿದಾಗ ಅಂಥ ವ್ಯಕ್ತಿ ಯಾರೂ ಇಲ್ಲವೆಂದು ಗೊತ್ತಾಗಿದೆ.

    ಇದನ್ನೂ ಓದಿ: ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

    ಮತ್ತೆ ಕರೆ ಮಾಡಿದಾಗ ಮೈಸೂರು ಆರ್‌ಎಂಸಿ ಯಾರ್ಡ್ ಅಲ್ಲ. ಪಾಂಡವಪುರದಲ್ಲಿ ಅಂಗಡಿ ಇರುವುದಾಗಿ ಆತ ಹೇಳಿದ್ದಾನೆ. ಅಲ್ಲಿಗೆ ಹೋದಾಗ ಅಲ್ಲಿಯೂ ಆರೋಪಿಯ ಭೇಟಿ ಸಾಧ್ಯವಾಗಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಆ ಮಹಿಳೆ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೂರು ವರ್ಷದ ಅವಳಿ ಮಕ್ಕಳ ಸಾವಿನ ಬೆನ್ನಿಗೆ ತಾಯಿಯೂ ನಿಧನ; ತಂದೆ ಇನ್ನೂ ಆಸ್ಪತ್ರೆಯಲ್ಲಿ…

    ಫ್ಲೈಟಲ್ಲಿ ಬಂದು ಕಳವು ಮಾಡಿ ಫ್ಲೈಟಲ್ಲೇ ಮರಳಿದ; 5 ವರ್ಷಗಳ ಹಿಂದೆ ಕದ್ದು ಸಿಕ್ಕಿಬಿದ್ದಿದ್ದ ಆ ದ್ವೇಷವನ್ನು ಮತ್ತೆ ಕದ್ದೇ ತೀರಿಸಿಕೊಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts