More

    ಪೊಲೀಸರ​ ಹೆಸರಲ್ಲಿ ಬೆಂಗ್ಳೂರಲ್ಲಿ ಮತ್ತೊಂದು ಧೋಖಾ: 1.75 ಕೋಟಿ ರೂ. ವಂಚಿಸಿದ ನಕಲಿ ಪೊಲೀಸ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರ ಹೆಸರಲ್ಲಿ ವಂಚನೆ ಮಾಡಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬರೋಬ್ಬರಿ 1 ಕೋಟಿ 75 ಲಕ್ಷ ರೂ. ವಂಚಿಸಲಾಗಿದೆ.

    ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಂಚನೆಗೆ ಒಳಗಾದ ವ್ಯಕ್ತಿಯನ್ನು ವೆಂಕಟನಾರಾಯಣ ಮತ್ತು ಮೋಸ ಮಾಡಿದ ನಕಲಿ ಪೊಲೀಸ್​ ಅನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಬೆಂಗಳೂರು‌ ದಕ್ಷಿಣ ವಿಭಾಗದ ಎಎಸ್ಪಿ ಎಂದು ಹೇಳಿಕೊಂಡು ವಂಚನೆ ಎಸಗಿದ್ದಾರೆ.

    ವಿವರಣೆಗೆ ಬರುವುದಾದರೆ, ಸಂತ್ರಸ್ತ ವೆಂಕಟನಾರಾಯಣ, ಕಾರುಗಳನ್ನು ಕೊಳ್ಳುವುದು ಮತ್ತು ಅವುಗಳನ್ನು ಮಾರಾಟ ಮಾಡುವ ಬಿಸಿನೆಸ್‌ ಮಾಡಿಕೊಂಡಿದ್ದಾರೆ. ಕೆ.ಆರ್.ರಸ್ತೆಯಲ್ಲಿ ಲಕ್ಷ್ಮೀ ರಬ್ಬರ್ ಸ್ಟ್ಯಾಂಪ್ ಅಂಗಡಿ ಇಟ್ಟುಕೊಂಡಿರುವ ವೆಂಕಟರಮಣಪ್ಪ ಅಲಿಯಾಸ್​ ಕಿರಣ ಎಂಬುವವರು 2016ರಿಂದ ವೆಂಕಟನಾರಾಯಣರಿಗೆ ಪರಿಚಿತರಾಗಿದ್ದಾರೆ. ವೆಂಕಟರಮಣಪ್ಪ ಅವರ ಮೂಲಕ 2022ರ ಜೂನ್ ತಿಂಗಳಲ್ಲಿ ಆರ್. ಶ್ರೀನಿವಾಸ್ ಪರಿಚಯವಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ಎಎಸ್​ಪಿ ಎಂದು ಪರಿಚಯಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಸ್ವಂತ ಸೂರಿಲ್ಲದ ಬಿಜೆಪಿ, ಕಾಂಗ್ರೆಸ್ ! ಪಕ್ಷದ ಕಾರ್ಯಕರ್ತರ ಅಹವಾಲು ಆಲಿಸೋಕೆ ಜಾಗವಿಲ್ಲ

    ಇದಾದ ಬಳಿಕ ವೆಂಕಟನಾರಾಯಣ ಅವರು ವೆಂಕಟರಮಣಪ್ಪ, ಆರ್.ಶ್ರೀನಿವಾಸ್, ರಘುರಾಂ (ರಾಘವಿ ಡೆವಲಪರ್ಸ್), ಮುತ್ತೇಗೌಡ (ನಿವೃತ್ತ ಎ.ಎಸ್.ಐ), ಶ್ರೀನಿವಾಸ್ ಅವರ ಕಾರು ಚಾಲಕನ ಜತೆ ತಿರುಪತಿಗೆ ಟ್ರಿಪ್ ಹೋಗಿದ್ದರು. ಈ ಸಮಯದಲ್ಲಿ ಆರೋಪಿ ಆರ್. ಶ್ರೀನಿವಾಸ್ ತಾನು ಬೆಂಗಳೂರು ನಗರದಲ್ಲಿ ಎಸ್​ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮೈಸೂರಿನಲ್ಲಿ ಒಂದು ಲಿಟಿಗೇಷನ್ ಪ್ರಾಪರ್ಟಿ ಕೇಸ್​ ಅನ್ನು ನಿರ್ವಹಿಸುತ್ತಿದ್ದೇನೆ. ಕೇಸ್​ ಎಲ್ಲ ಮುಗಿದು ರೆವಿನ್ಯೂ ಇಲಾಖೆಯ ಕೆಲಸ ಮಾತ್ರ ಬಾಕಿ ಇದೆ. ಒಟ್ಟು 450 ಕೋಟಿ ರೂ. ಡೀಲಿಂಗ್ ನಡೆಯುತ್ತಿದ್ದು, ನನಗೆ 250 ಕೋಟಿ ರೂ. ಬರುತ್ತದೆ ಎಂದು ಶ್ರೀನಿವಾಸ್​ ಹೇಳಿದ್ದಾರೆ.

    ಕೇಸ್​ ಪೂರ್ಣಗೊಳ್ಳಲು ಹಣಕಾಸಿನ ಅವಶ್ಯಕತೆ ಇದೆ ಎಂದು ತಿಳಿಸಿ ಎಲ್ಲಿಯಾದರೂ 2.50 ಕೋಟಿ ರೂ. ವ್ಯವಸ್ಥೆ ಮಾಡಿಕೊಡುವಂತೆ ವೆಂಕಟನಾರಾಯಣ ಅವರನ್ನು ಶ್ರೀನಿವಾಸ್​ ಕೇಳುತ್ತಾರೆ. ಬಳಿಕ ಆರೋಪಿ ಆರ್.ಶ್ರೀನಿವಾಸ್ ಇನೋವಾ ಕಾರಿನಲ್ಲಿ ಪೊಲೀಸ್ ಯೂನಿಫಾರ್ಮ್​ನಲ್ಲಿ ವೆಂಕಟರಮಣಪ್ಪ ಅವರ ಅಂಗಡಿ ಬಳಿ ಬಂದು ವೆಂಕಟನಾರಾಯಣ ಅವರನ್ನು ಭೇಟಿ ಮಾಡುತ್ತಾರೆ. ಈ ವೇಳೆ ಪೊಲೀಸ್ ಅಧಿಕಾರಿ ಎಂದು ನಂಬಿ 49 ಲಕ್ಷ ರೂಗಳನ್ನು ಆರೋಪಿ ಆರ್.ಶ್ರೀನಿವಾಸ್​ಗೆ ನೀಡಿದ್ದಾರೆ.

    ಬಳಿಕ 2022ರ ಡಿಸೆಂಬರ್​ನಲ್ಲಿ ಹಣ ವಾಪಸ್ ಕೊಟ್ಟು ತನಗೆ ಈ ಪ್ರಾಜೆಕ್ಟ್ ಸಂಬಂಧ ಇನ್ನು ಹೆಚ್ಚಿನ ಹಣ ಬೇಕಾಗಿರುತ್ತದೆ ಎಂದು ತಿಳಿಸಿದಾಗ ವೆಂಕಟನಾರಾಯಣ, ತಮಗೆ ಪರಿಚಯದ ಸಂಖಿಸಾಗರ್​ ಹೋಟೆಲ್‌ ಮಾಲೀಕರಾದ ಅಭಿಷೇಕ ಪೂಜಾರಿ ಅವರಿಗೆ ಆರ್.ಶ್ರೀನಿವಾಸ್​ನನ್ನು ಪರಿಚಯಿಸಿ ಅವರಿಂದ ಆರೋಪಿ ಆರ್.ಶ್ರೀನಿವಾಸ್​ಗೆ 1 ಕೋಟಿ 20 ಲಕ್ಷ ರೂ.ಗಳನ್ನು ಸಾಲ ಕೊಡಿಸುತ್ತಾರೆ. ಸಾಲಕ್ಕೆ ಗ್ಯಾರೆಂಟಿಯಾಗಿ ವೆಂಕಟನಾರಾಯಣ ಅವರ ಬಳಿ ಅಭಿಷೇಕ್ ಪೂಜಾರಿ 3 ಚೆಕ್​​ಗಳನ್ನು ಪಡೆದುಕೊಂಡಿರುತ್ತಾರೆ. ಇದಾದ ನಂತರ ಆರೋಪಿ ಆರ್.ಶ್ರೀನಿವಾಸ್​, ತಾನು ಮದುವೆಯಾಗುವ ರಮ್ಯಾ ಎಂಬುವವರ ಮನೆಯ ಪೂಜೆ ಕಾರ್ಯಕ್ರಮಕ್ಕೆ ವೆಂಕಟನಾರಾಯಣ ಅವರನ್ನು ಕರೆದು, ಭಾವಿ ಪತ್ನಿ ರಮ್ಯಾ, ರಿಯಲ್ ಎಸ್ಟೇಟ್ ಬಿಸಿನೆಸ್​ಮೆನ್ ಕೃಷ್ಣಮೂರ್ತಿ, ಮೈಸೂರಿನ ವಾಸಿ ದೇವರಾಜ್ ಎಂಬುವವರನ್ನು ಪರಿಚಯಿಸಿ ಮತ್ತೊಮ್ಮೆ ಉಳಿದ ಹಣವನ್ನು ವ್ಯವಸ್ಥೆ ಮಾಡಿಕೊಡುವಂತೆ ಕೇಳಿದ್ದಾನೆ.

    ಇದನ್ನೂ ಓದಿ: ಗೋವಾದಲ್ಲಿ ಹೋಟೆಲ್​ ಸಿಬ್ಬಂದಿ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಕುಟುಂಬಕ್ಕೆ ಕಾದಿತ್ತು ಭಾರೀ ಆಘಾತ!

    ಇದಾದ ಬಳಿಕ ವೆಂಕಟನಾರಾಯಣ ತನ್ನ ಸ್ನೇಹಿತರ ಬಳಿ ಒಟ್ಟು 56 ಲಕ್ಷ ರೂಗಳನ್ನು ವಿವಿಧ ದಿನಾಂಕಗಳಂದು ವ್ಯವಸ್ಥೆ ಮಾಡಿಕೊಟ್ಟಿದ್ದು, ಆರ್.ಶ್ರೀನಿವಾಸ್ ಸ್ವತಃ ವೆಂಕಟನಾರಾಯಣ ಮನೆಗೆ ಬಂದು ಹಣ ತೆಗೆದುಕೊಂಡು ಹೋಗಿದ್ದ. ಇದಾದ ನಂತರ ಆರೋಪಿ ಆರ್.ಶ್ರೀನಿವಾಸ್‌ ವೆಂಕಟನಾರಾಯಾಣಗೆ ಸಿಗದೇ ತನ್ನ ಮತ್ತು ರಮ್ಯ ರವರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ತಾನು ಮೋಸ ಹೋಗಿರುವುದು ಗೊತ್ತಾದ ಬಳಿಕ ಆರೋಪಿ ಆರ್.ಶ್ರೀನಿವಾಸ್‌ ನಿಜವಾದ ಪೊಲೀಸ್ ಅಲ್ಲದಿದ್ದರೂ ತಾನು ಪೊಲೀಸ್ ಅಧಿಕಾರಿ ಎಂದು ನಂಬಿಸಿ ನನ್ನ ಬಳಿ ಹಣ ಒಟ್ಟು 2 ಕೋಟಿ 25 ಲಕ್ಷ ರೂ.ಗಳನ್ನು ಪಡೆದುಕೊಂಡು ಅದರಲ್ಲಿ 50 ಲಕ್ಷ ರೂಗಳನ್ನು ಮಾತ್ರ ವಾಪಸ್ ಕೊಟ್ಟು ಉಳಿದ 1 ಕೋಟಿ 75 ಲಕ್ಷ ರೂ.ಗಳನ್ನು ಕೊಡದೇ ಮೋಸ ಮಾಡಿದ್ದಾರೆ. ತಾನು ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡು ತನ್ನನ್ನು ನಂಬಿಸಿ ಹಣ ಪಡೆದುಕೊಂಡು ಮೋಸ ಮಾಡಿರುವ ಆರ್.ಶ್ರೀನಿವಾಸ್ ಎಂಬುವವನ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಸಂತ್ರಸ್ತ ವೆಂಕಟನಾರಾಯಣ ದೂರು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ವಿರೋಧದ ಮಧ್ಯೆಯೂ ಬೆಂಗ್ಳೂರು-ಮೈಸೂರು ಹೆದ್ದಾರಿ ಟೋಲ್​ ಸಂಗ್ರಹ ಆರಂಭ: ಪ್ರತಿಭಟನಾಕಾರರ ಬಂಧನ

    ಸುಮಲತಾ ಬಗ್ಗೆ ಯಾರೂ ಮಾತಾಡಬೇಡಿ: ಜೆಡಿಎಸ್​ ನಾಯಕರಿಗೆ ಮಾಜಿ ಪ್ರಧಾನಿ ಎಚ್​ಡಿಡಿ ಸಲಹೆ

    ಗೋವಾದಲ್ಲಿ ಹೋಟೆಲ್​ ಸಿಬ್ಬಂದಿ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಕುಟುಂಬಕ್ಕೆ ಕಾದಿತ್ತು ಭಾರೀ ಆಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts