More

    ಗೋವಾದಲ್ಲಿ ಹೋಟೆಲ್​ ಸಿಬ್ಬಂದಿ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಕುಟುಂಬಕ್ಕೆ ಕಾದಿತ್ತು ಭಾರೀ ಆಘಾತ!

    ಪಣಜಿ: ಪ್ರವಾಸಕ್ಕೆ ತೆರಳಿದ್ದ ಕುಟುಂಬವೊಂದರ ಮೇಲೆ ದಾಳಿ ನಡೆದಿರುವ ಘಟನೆ ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ನಡೆದಿದೆ. ಖಡ್ಗ ಮತ್ತು ಇತರೆ ಮಾರಕ ಆಯುಧಗಳನ್ನು ಹಿಡಿದುಕೊಂಡು ನಾಲ್ವರು ದುಷ್ಕರ್ಮಿಗಳು ಕುಟುಂಬದ ಮೇಲೆ ಹಲ್ಲೆ ಮಾಡಿದ್ದು, ನಾಲ್ವರನ್ನೂ ಬಂಧಿಸಲಾಗಿದೆ.

    ಬಂಧಿತರನ್ನು ರೋಶನ್, ನೈರೋನ್ ರೆಜಿನಾಲ್ಡೋ ಡಯಾಸ್, ಜೋಸೆಫ್ ಅಲೆಕ್ಸ್ ಲೋಬೋ ಮತ್ತು ಕಾಶಿನಾಥ್ ವಿಶ್ವೋರ್ ಅಗರಖಾಡೆಕೆ ಎಂದು ಗುರುತಿಸಲಾಗಿದೆ. ಬಂಧಿತರ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ. ಗೋವಾದ ಅಂಜುನಾ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಬ್ಯಾಂಕಿಂಗ್ ವಲಯಕ್ಕೆ ಪಾಠ: ಅಮೆರಿಕದ ಸಿಲಿಕಾನ್ ವ್ಯಾಲಿ, ಸಿಗ್ನೇಚರ್ ಬ್ಯಾಂಕ್​ಗಳ ಪತನ

    ಮಾರ್ಚ್ 5 ರಂದು ಈ ಘಟನೆ ನಡೆದಿದೆ. ದಾಳಿಯಲ್ಲಿ ಗಾಯಗೊಂಡ ದೆಹಲಿ ಮೂಲದ ಅಶ್ವಿನಿ ಕುಮಾರ್ ಚಂದ್ರಾನಿ ಮತ್ತು ಅವರ ಕುಟುಂಬ, ಗೋವಾದ ಅಂಜುನಾದ ಸ್ಪಾಜಿಯೊ ಲೀಸರ್ ರೆಸಾರ್ಟ್‌ನಲ್ಲಿ ತಂಗಿದ್ದರು. ಅಶ್ವಿನಿ ರೆಸಾರ್ಟ್‌ನ ಉದ್ಯೋಗಿಯೊಂದಿಗೆ ಜಗಳವಾಡಿದ ನಂತರ ರೆಸಾರ್ಟ್ ವ್ಯವಸ್ಥಾಪಕರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ನೌಕರನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ವೈಷಮ್ಯದಿಂದ ರೋಷನ್ ಮತ್ತು ಆತನ ಗ್ಯಾಂಗ್ ಸದಸ್ಯರು ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಮಾರಕಾಯುಧಗಳಿಂದ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಅಶ್ವಿನಿ ಅವರ ಕುಟುಂಬದ ಸದಸ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.

    ಘಟನೆ ಸಂಬಂಧ ಕುಟುಂಬದಿಂದ ದೂರು ಸ್ವೀಕರಿಸಿದ ಬಳಿಕವೂ ಪೊಲೀಸರು ಆರಂಭದಲ್ಲಿ ಕ್ರಮ ಕೈಗೊಳ್ಳಲು ನಿರಾಕರಿಸಿದರು ಎಂದು ಆರೋಪಿಸಲಾಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೇರಿದಂತೆ ಹಲವರು ಈ ಬಗ್ಗೆ ಪ್ರತಿಕ್ರಿಯಿಸಿದ ಬಳಿಕ ಘಟನೆಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ, ತನಿಖೆ ನಡೆಸಿ, ನಾಲ್ವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಬ್ಯಾಂಕಿಂಗ್ ವಲಯಕ್ಕೆ ಪಾಠ: ಅಮೆರಿಕದ ಸಿಲಿಕಾನ್ ವ್ಯಾಲಿ, ಸಿಗ್ನೇಚರ್ ಬ್ಯಾಂಕ್​ಗಳ ಪತನ

    ಭಾರತಕ್ಕೆ ಐತಿಹಾಸಿಕ ದಿನ: ದಿ ಎಲಿಫೆಂಟ್​ ವಿಸ್ಪರರ್ಸ್​, ನಾಟು ನಾಟುಗೆ ಒಲಿದ ಆಸ್ಕರ್, ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ…

    ಎರಡನೇ ಮಹಡಿಯಿಂದ ಬಿದ್ದಿದ್ದ 3 ವರ್ಷದ ಮಗು ಸಾವು; ಫಲಿಸಲಿಲ್ಲ ಮೂರು ದಿನಗಳ ಜೀವನ್ಮರಣ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts