ಭಾರತಕ್ಕೆ ಐತಿಹಾಸಿಕ ದಿನ: ದಿ ಎಲಿಫೆಂಟ್​ ವಿಸ್ಪರರ್ಸ್​, ನಾಟು ನಾಟುಗೆ ಒಲಿದ ಆಸ್ಕರ್, ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ…

ನವದೆಹಲಿ: ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ ನಡೆದ 95ನೇ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. ಈವರೆಗೂ ಆಸ್ಕರ್​ ರೇಸ್​ನಲ್ಲಿ ಸ್ಪರ್ಧಿಸುವುದೇ ಕಷ್ಟವಾಗಿದ್ದ ಭಾರತಕ್ಕೆ ಈ ಬಾರಿ ಎರಡು ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ. ಕಾರ್ತಿಕ್​ ಗೊನ್ಸಾಲ್ವಿಸ್​ ನಿರ್ದೇಶನದ ಮತ್ತು ಗುನೀತ್​ ಮೊಂಗಾ ನಿರ್ಮಾಣದ ದಿ ಎಲಿಫೆಂಟ್​ ವಿಸ್ಪರರ್ಸ್​ ಸಾಕ್ಷ್ಯಚಿತ್ರಕ್ಕೆ ಮತ್ತು ಜಾಗತಿಕವಾಗಿ ವೈರಲ್ ಆಗಿರುವ ಎಸ್‌ಎಸ್ ರಾಜಮೌಳಿ ಅವರ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್​ ಪ್ರಶಸ್ತಿ ಒಲಿದು ಬಂದಿದೆ. … Continue reading ಭಾರತಕ್ಕೆ ಐತಿಹಾಸಿಕ ದಿನ: ದಿ ಎಲಿಫೆಂಟ್​ ವಿಸ್ಪರರ್ಸ್​, ನಾಟು ನಾಟುಗೆ ಒಲಿದ ಆಸ್ಕರ್, ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ…