More

    VIDEO| ಈ ವಿಡಿಯೋ ನೋಡಿದ್ರೆ ಮದ್ವೆ ಊಟ ಮಾಡಲು ನೀವು ಭಯ ಪಡ್ತೀರಾ: ಥೂ ಇಂಥವರೂ ಇರ್ತಾರಾ!

    ಮೀರತ್​: ಮದುವೆ ಮನೆ ಊಟವನ್ನು ಬಾಯಿ ಚಪ್ಪರಿಸಿ ತಿನ್ನುವವರು ಒಮ್ಮೆ ಈ ವಿಡಿಯೋ ನೋಡಿದ್ರೆ ಶಾಕ್​ ಆಗುವುದು ಗ್ಯಾರೆಂಟಿ. ಕೇವಲ ಶಾಕ್​ ಮಾತ್ರವಲ್ಲ ಊಟ ತಯಾರಿಸುವವನನ್ನು ಒಮ್ಮೆ ಬಾಯಾರೆ ಶಪಿಸುವುದು ಸಹ ನಿಜವೇ.

    ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದ ಮದುವೆಯಲ್ಲಿ ಅಡುಗೆ ಮಾಡುವಾಗ ತಂದೂರಿ ರೋಟಿ ಮೇಲೆ ಉಗಿಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ರೋಟಿ ಮೇಲೆ ಉಗುಳುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ ರೋಟಿ ತಯಾರಕನನ್ನು ಬಂಧಿಸಲಾಗಿದೆ.

    ಇದನ್ನೂ ಓದಿರಿ: VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಆತ್ಮ ಸಂಚಾರದ ದೃಶ್ಯ!? ವಿಡಿಯೋ ನೋಡಿ ಬೆಚ್ಚಿ ಬಿದ್ದ ಜನ

    ಬಂಧಿತನನ್ನು ಸೊಹೈಲ್​ ಎಂದು ಗುರುತಿಸಲಾಗಿದೆ. ಈತ ಮದುವೆಯಲ್ಲಿ ಅಡುಗೆ ಮಾಡುವಾಗ ರೋಟಿಯನ್ನು ಒತ್ತಿದ ಬಳಿಕ ಅದನ್ನು ಸುಡುವ ಮುನ್ನ ಅದರ ಮೇಲೆ ಉಗುಳುವುದನ್ನು ವ್ಯಕ್ತಿಯೊಬ್ಬ ರಹಸ್ಯವಾಗಿ ವಿಡಿಯೋ ಮಾಡಿಕೊಂಡು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ರೋಟಿ ತಯಾರಕನ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆಯೂ ಹಾಗೂ ತನಿಖೆ ನಡೆಸುವಂತೆಯೂ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಹಿಂದು ಜಾಗರಣ ಮಂಚ್​ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸೊಹೈಲ್​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ.

    ಇದನ್ನೂ ಓದಿರಿ: ಪುರಿ ಜಗನ್ನಾಥ ರೂಪವನ್ನೇ ಹೋಲುವ ಪತಂಗ ಪತ್ತೆ! ಗ್ರಾಮಸ್ಥರ ಮಾತು ಕೇಳಿದ್ರೆ ಬೆರಗಾಗ್ತೀರಾ!

    ಈ ವಿಡಿಯೋವನ್ನು ಮೀರತ್​ನ ಮದುವೆ ಸಮಾರಂಭದ ಬಾಂಕ್ವೆಟ್​ ಹಾಲ್​ನಲ್ಲಿ ರೆಕಾರ್ಡ್​ ಮಾಡಲಾಗಿದೆ ಎಂದಿರುವ ಹಿಂದು ಜಾಗರಣ ಮಂಚ್​ ಅಧ್ಯಕ್ಷ ಸಚಿನ್​ ಸಿರೊಹಿ, ಇಂತಹ ಘಟನೆಗಳ ಬಗ್ಗೆ ಪರಿಶೀಲನೆ ನಡೆಸಲು ಸಿಸಿಟಿವಿ ಕ್ಯಾಮೆರಾಗಳನ್ನು ಮದುವೆ ಸ್ಥಳಗಳಲ್ಲಿ ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬಿಜೆಪಿ ನಾಯಕನ ಕುಟುಂಬದ ನಾಲ್ವರು ನೇಣಿಗೆ ಶರಣು: ಡೆತ್​ನೋಟ್​ನಲ್ಲಿ ಸಾವಿನ ರಹಸ್ಯ ಬಯಲು!

    ಮಾಜಿ ಸಿಎಂ ಜಯಲಲಿತಾ-ನಿರ್ಮಲಾ ಸೀತಾರಾಮನ್​ ಗೆಳತಿಯರಾ? ಅಪರೂಪದ ಫೋಟೋ ಹಿಂದಿನ ಸತ್ಯಾಂಶವೇನು?

    ಪೊಗರಿಗೆ ಸುತ್ತಿಕೊಂಡ ವಿವಾದ!; ಕ್ಷಮೆಯಾಚಿಸಿ ದೃಶ್ಯ ತೆಗೆಯುವುದಾಗಿ ನಂದಕಿಶೋರ್ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts