More

  ದೆಹಲಿ ಮೆಟ್ರೋ ರೈಲಿನಲ್ಲಿ ಅಪ್ರಾಪ್ತ ವಯಸ್ಕಳ ಎದುರೇ ಕಾಮುಕನಿಂದ ಹಸ್ತಮೈಥುನ

  ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋ ಹಲವು ವಿಚಾರಗಳಿಗೆ ಹೆಚ್ಚು ಸದ್ದು ಮಾಡುತ್ತಿದ್ದು, ಒಂದಿಲ್ಲೊಂದು ವಿವಾದಗಳಿಂದ ದೇಶದ ಜನರ ಗಮನ ಸೆಳೆಯುತ್ತಿದೆ. ಪ್ರೇಮಿಗಳ ಪ್ರಣಯ, ಹೊಡೆದಾಟ ಹಾಗೂ ಅಸಭ್ಯ ವರ್ತನೆಗಳಿಂದ ದೆಹಲಿ ಮೆಟ್ರೋ ಸದಾ ಸುದ್ದಿಯಲ್ಲಿರುತ್ತದೆ.

  ಇದೀಗ ವಿಲಕ್ಷಣಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ಜನನಿಬಿಡ ಮೆಟ್ರೋ ರೈಲಿನಲ್ಲಿ ಅಪ್ರಾಪ್ತ ವಯಸ್ಕಳ ಎದುರಿನಲ್ಲೇ ಹಸ್ತಮೈಥುನ ಮಾಡಿ, ಸ್ಖಲನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

  ಘಟನೆಯೂ ಗುರುವಾರ ಬೆಳಗ್ಗೆ 8:30ರ ಸುಮಾರಿಗೆ ನಡೆದಿದ್ದು, ಆರೋಪಿ ಜನನಿಬಿಡ ರೈಲಿನಲ್ಲಿ ಈ ರೀತಿ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ. ದೆಹಲಿಯ ರೆಡ್​ ಲೈನ್ ಮೆಟ್ರೋ​ನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ಇದನ್ನೂ ಓದಿ: ಇಸ್ರೋ ವಿಜ್ಞಾನಿ ಕಾರಿಗೆ ಕಲ್ಲೆಸೆತ, ಹಲ್ಲೆಗೆ ಯತ್ನ

  ಅಸಭ್ಯ ವರ್ತನೆ

  ಘಟನೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ಆರೋಪಿ ಪಶ್ಚಿಮ ಬಂಗಾಳ ಮೂಲದವಾನಗಿದ್ದು, ಆತ ಅಪ್ರಾಪ್ರ ವಯಸ್ಕಳ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಆಕೆಯ ತಾಯಿ ಗಮನಿಸಿ ಸೀಲಮ್​​ಪುರ ಮೆಟ್ರೋ ನಿಲ್ದಾಣದಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

  ಆರೋಪಿ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಸಹ ಪ್ರಯಾಣಿಕರು ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಪಶ್ಚಿಮ ಬಂಗಾಳ ಮೂಲದವನಾಗಿದ್ದು, ಕೆಲಸದ ನಿಮಿತ್ತ ದೆಹಲಿಗೆ ಬಂದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ಧಾನೆ. ವಿಚಾರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ದೆಹಲಿ ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts