More

    ಹೆತ್ತವರಿಂದ ಪ್ರತ್ಯೇಕಿಸಿದರೆ ಪತಿಗೆ ವಿಚ್ಛೇದನ ಅವಕಾಶ

    ಕೋಲ್ಕತಾ: ಹೆತ್ತವರಿಂದ ಪ್ರತ್ಯೇಕವಾಗಿ ವಾಸ ಮಾಡುವಂತೆ ಪತ್ನಿ ಒತ್ತಾಯಿಸಿದರೆ ವಿಚ್ಛೇದನ ಮಾಡಿಕೊಳ್ಳುವ ಹಕ್ಕು ಪತಿಗೆ ಇರುತ್ತದೆ ಎಂದು ಕೋಲ್ಕತಾ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ಹೆತ್ತವರನ್ನು ನೋಡಿಕೊಳ್ಳುವುದು ಮಗನ ‘ಪವಿತ್ರ ಕರ್ತವ್ಯವಾಗಿರುತ್ತದೆ’ ಎಂದು ಕೋರ್ಟ್ ಹೇಳಿದೆ.

    ಪತಿಯನ್ನು ತಂದೆ-ತಾಯಿಯಿಂದ ದೂರ ಮಾಡಲು ಪೀಡಿಸಿ ಹೆಂಡತಿ ಮಾನಸಿಕ ಹಿಂಸೆ ನೀಡಿದರೆ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಸಕಾರಣವಿರಬಹುದು ಎಂದು ಅದು ಅಭಿಪ್ರಾಯಪಟ್ಟಿದೆ. ಹೆತ್ತವರು ಮಗನೊಂದಿಗೆ ವಾಸಿಸುವುದು ‘ಭಾರತೀಯ ಸಂಸ್ಕೃತಿಯಲ್ಲಿ ಸಹಜವಾಗಿದೆ’ ಎಂದೂ ಕೋರ್ಟ್ ಹೇಳಿದೆ.

    ವಿಚ್ಛೇದನ ನೀಡಲು ಪತಿಗೆ ಅನುಮತಿ ಕೊಟ್ಟಿರುವ ಕೌಟುಂಬಿಕ ಕೋರ್ಟ್​ನ ತೀರ್ಪನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೌಮೇನ್ ಸೇನ್ ಮತ್ತು ಉದಯ್ ಕುಮಾರ್ ಇದ್ದ ವಿಭಾಗೀಯ ಪೀಠ ತಳ್ಳಿ ಹಾಕಿ ಕೆಳ ಕೋರ್ಟ್​ನ ತೀರ್ಪನ್ನು ಎತ್ತಿ ಹಿಡಿದಿದೆ. ಪಶ್ಚಿಮ ಮೇದಿನಿಪುರ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯ, ಪ್ರಶಾಂತ್ ಕುಮಾರ್ ಮಂಡಲ್ ಎಂಬಾತ ಪತ್ನಿ ಝುರ್ನಾಗೆ ವಿಚ್ಛೇದನ ನೀಡಲು ಅನುಮತಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts