More

    ಟಾಯ್ಲೆಟ್​ನಲ್ಲಿ ಕುಳಿತಿದ್ದವನ ಮರ್ಮಾಂಗಕ್ಕೇ ಕಚ್ಚಿದ ಹಾವು! ಬೆಚ್ಚಿ ಬೀಳಿಸುವ ಘಟನೆ

    ಕ್ಯಾನ್ಬೆರಾ: ಹಾವು ಎಂದರೆ ಹೆದರಿ ನಡುಗುವವರು ಇದ್ದಾರೆ. ಹೀಗಿರುವಾಗ ವ್ಯಕ್ತಿಯೊಬ್ಬ ಟಾಯ್ಲೆಟ್​ಗೆ ಹೋದಾಗ ಹಾವೊಂದು ಆತನ ಮರ್ಮಾಂಗವನ್ನೇ ಕಚ್ಚಿ ಕಳುಹಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    65 ವರ್ಷದ ವ್ಯಕ್ತಿ ಸೋಮವಾರ ಬೆಳಗ್ಗೆ 6 ಗಂಟೆಗೆ ಎದ್ದು, ನಿದ್ರೆ ಕಣ್ಣಿನಲ್ಲಿ ಟಾಯ್ಲೆಟ್​ಗೆ ಹೋಗಿದ್ದಾನೆ. ಹಾಗೆಯೇ ಕುಳಿತು ಮೂತ್ರ ವಿಸರ್ಜನೆ ಮಾಡಲಾರಂಭಿಸಿದ್ದಾನೆ. ಆಗ ಇದ್ದಕ್ಕಿದ್ದಂತೆ ಆತನ ಮರ್ಮಾಂಗಕ್ಕೆ ಏನೋ ಕಚ್ಚಿದಂತಾಗಿದೆ. ಕೆಳಗೆ ನೋಡಿದಾಗ 5 ಅಡಿಯ ಹಾವು ಅಲ್ಲಿದ್ದದ್ದು ಕಂಡುಬಂದಿದೆ. ಅದನ್ನು ಕಂಡು ಗಾಬರಿಗೊಂಡ ಆತ ಕೂಗಿಕೊಳ್ಳುತ್ತ ಓಡಿದ್ದಾನೆ.

    ಆ ಹಾವು ಆತನ ಪಕ್ಕದ ಮನೆಯ 24 ವರ್ಷದ ಯುವಕ ಸಾಕಿದ್ದ ಹಾವು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಹಾವಿನ ವಿಷ ತೆಗೆದಿದ್ದರಿಂದಾಗಿ ಕಚ್ಚಿಸಿಕೊಂಡ ವೃದ್ಧನಿಗೆ ಪ್ರಾಣಾಪಾಯ ಆಗಿಲ್ಲ. ಆದರೆ ಆ ಹಾವು ಯುವಕನ ಮನೆಯಿಂದ ಆತನ ಪಕ್ಕದ ಮನೆಗೆ ಹೋಗಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ಹಾವು ಡ್ರೈನೇಜ್ ಮೂಲಕ ಹೋಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. (ಏಜೆನ್ಸೀಸ್)

    ಆಮೀರ್‌ ಖಾನ್‌ ಡಿವೋರ್ಸ್‌ ಸುದ್ದಿ ಕೇಳಿ ‘ಥ್ಯಾಂಕ್‌ ಗಾಡ್‌’ ಎಂದ ನಟಿ ಸೋನಂ ಕಪೂರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts