More

    ಕಮ್ಯಾಂಡೋ ವೇಷ ಧರಿಸಿ ಐಎಸ್​ಐಗೆ ಸೇನೆ ಮಾಹಿತಿ ಕಳಿಸ್ತಿದ್ದ! ಬೆಂಗಳೂರಲ್ಲಿ ಬಟ್ಟೆ ವ್ಯಾಪಾರ ಮಾಡ್ತಿದ್ದ!

    ಬೆಂಗಳೂರು: ಆರ್ಮಿ ಕಮ್ಯಾಂಡೊ ವೇಷ ಧರಿಸಿ ರಾಜಸ್ಥಾನದ ಬಾರ್ಮೆರ್​​ ಮಿಲಿಟರಿ ಸ್ಟೇಷನ್ನಿನ ಮಾಹಿತಿಗಳನ್ನು ಪಾಕಿಸ್ತಾನದ ಐಎಸ್​ಐ ಅಧಿಕಾರಿಗಳಿಗೆ ರವಾನಿಸುತ್ತಿದ್ದ ಯುವಕನನ್ನು ಮಿಲಿಟರಿ ಗುಪ್ತಚರ ವಿಭಾಗದ ದಕ್ಷಿಣ ಕಮಾಂಡೊ ತಂಡ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡಿಕೊಂಡಿದ್ದ ಜಿತೇಂದರ್​ ಸಿಂಗ್​ ಎಂಬುವವನು ಬಂಧಿತ ಆರೋಪಿ.

    ಬೆಂಗಳೂರಿನ ಕಾಟನ್​​ಪೇಟೆಯ ಜಾಲಿ ಮಹೊಲ್ಲಾದಲ್ಲಿ ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ ಆರೋಪಿ ಜಿತೇಂದರ್​ ಸಿಂಗ್​ ಮೂಲತಃ ರಾಜಸ್ಥಾನದ ಬಾರ್ಮೆರ್​​ನವನು. ಈತ ಪಾಕಿಸ್ತಾನದ ISI ಅಧಿಕಾರಿಯ ಜೊತೆ ಸಂಪರ್ಕ ಹೊಂದಿದ್ದ. ವಾಟ್ಸ್ ಆಪ್ ವಿಡಿಯೋ, ಮೆಸೆಜ್ ಮತ್ತು ಕಾಲ್ ಮುಖಾಂತರ ಬಾರ್ಮೆರ್ ಮಿಲಿಟರಿ ಸ್ಟೇಷನ್​​ ಮತ್ತು ಮಿಲಿಟರಿ ವಾಹನಗಳ ಓಡಾಟದ ಬಗ್ಗೆ ಮಾಹಿತಿ ರವಾನಿಸುತ್ತಿದ್ದ. ಆರ್ಮಿಗೆ ಸಂಬಂಧಿಸಿದ ಮತ್ತು ಬಾರ್ಮೆರ್​ನ ಅಂತರಾಷ್ಟ್ರೀಯ ಗಡಿ ಪ್ರದೇಶದ ಫೋಟೊಗಳನ್ನು ಕಳುಹಿಸಿದ್ದ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

    ಇದನ್ನೂ ಓದಿ: ನೈಋತ್ಯ ರೈಲ್ವೆ ವತಿಯಿಂದ ನಿರುದ್ಯೋಗಿ ಯುವಕರಿಗೆ ಉಚಿತ ವೃತ್ತಿ ತರಬೇತಿ

    ಮಿಲಿಟರಿ ಇಂಟಲಿಜೆನ್ಸ್ ಮಾಹಿತಿ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಆರೋಪಿ ಸಿಂಗ್​​, ಆರ್ಮಿ ಕಮ್ಯಾಂಡೊ ಯುನಿಫಾರ್ಮ್ ಧರಿಸಿಕೊಂಡು, ತಾನೂ ಕಮಾಂಡೊ ಅಂತ ಗುರುತಿಸಿಕೊಂಡು ಆಪರೇಟ್ ಮಾಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ಫೇಸ್​​ಬುಕ್​ನಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳ ಬೇಡಿಕೆ ಮೇರೆಗೆ ಮಿಲಿಟರಿ ಮಾಹಿತಿ ಒದಗಿಸಿದ್ದ ಎನ್ನಲಾದ ಸಿಂಗ್​, ಕಳೆದ 2 ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ಇದೀಗ ಸಿಂಗ್​ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಪಂಜಾಬ್: 16ನೇ ಸಿಎಂ ಆಗಿ ಚರಣ್​ಜೀತ್​ ಸಿಂಗ್​ ಚನ್ನಿ; ಜೊತೆಗೆ ಇಬ್ಬರು ಡೆಪ್ಯುಟಿ ಸಿಎಂಗಳ ಅಧಿಕಾರ ಸ್ವೀಕಾರ!

    ‘ಪ್ರತಿಯೊಂದು ರೂಪಾಯಿ ಸರತಿಯಲ್ಲಿ ಕಾಯುತ್ತಿದೆ!’ ಮೌನ ಮುರಿದ ನಟ ಸೋನು ಸೂದ್​, ಐಟಿ ಸಮೀಕ್ಷೆ ಬಗ್ಗೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts