More

    ನೈಋತ್ಯ ರೈಲ್ವೆ ವತಿಯಿಂದ ನಿರುದ್ಯೋಗಿ ಯುವಕರಿಗೆ ಉಚಿತ ವೃತ್ತಿ ತರಬೇತಿ

    ಬೆಂಗಳೂರು: ನೈಋತ್ಯ ರೈಲ್ವೆಯು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯ ಆಶ್ರಯದಡಿ ‘ರೈಲ್ ಕೌಶಲ್ ವಿಕಾಸ ಯೋಜನೆ’ ಹೆಸರಿನಲ್ಲಿ ನಿರುದ್ಯೋಗಿ ಯುವಕರಿಗೆ ಉಚಿತ ಎಲೆಕ್ಟ್ರಿಷಿಯನ್, ಫಿಟ್ಟರ್ ಮಷಿನಿಸ್ಟ್ ಹಾಗೂ ವೆಲ್ಡರ್ ಸೇರಿದಂತೆ ವೃತ್ತಿಪರ ತರಬೇತಿ ನೀಡುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

    ಹುಬ್ಬಳ್ಳಿ ಮತ್ತು ಮೈಸೂರಿನ ಕ್ಯಾರೇಜ್ ಅಂಡ್ ವ್ಯಾಗನ್ ವರ್ಕ್ ಶಾಪ್​ನ ಬೇಸಿಕ್ ಟ್ರೈನಿಂಗ್ ಸೆಂಟರ್ ಹಾಗೂ ಬೆಂಗಳೂರಿನ ಮಲ್ಟಿ ಡಿಸಿಪ್ಲಿನರಿ ಟ್ರೈನಿಂಗ್ ಸೆಂಟರ್ ಇನ್ಸ್​ಟ್ಯೂಟ್​ಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಮೊದಲ ಬ್ಯಾಚ್​ನ ತರಬೇತಿ ಸೆ.13ರಿಂದ ಪ್ರಾರಂಭವಾಗಿದ್ದು, ಅ.5ರಂದು ಮುಕ್ತಾಯವಾಗಲಿದೆ. ಎರಡನೇ ಬ್ಯಾಚ್​ನ ತರಬೇತಿ ಅ.18ರಿಂದ ಆರಂಭವಾಗಲಿದ್ದು, ನ.9ಕ್ಕೆ ಮುಗಿಯಲಿದೆ. ತರಬೇತಿ ಮುಗಿದ ಬಳಿಕ ಅಭ್ಯರ್ಥಿಗಳಿಗೆ ರೈಲ್ವೆ ಸಚಿವಾಲಯವು ಪ್ರಮಾಣಪತ್ರ ನೀಡಲಿದೆ. ಆಸಕ್ತರು ರೈಲ್ವೆ ಇಲಾಖೆಯಲ್ಲಿ ಮಾಹಿತಿ ಪಡೆದು ಪ್ರವೇಶ ಪಡೆಯಬಹುದಾಗಿದೆ.

    ರೈಲ್ವೆ ಸಚಿವಾಲಯವು ರೈಲ್ ಕೌಶಲ್ ವಿಕಾಸ ಯೋಜನೆಯಡಿ ದೇಶದ 50 ಸಾವಿರ ನಿರುದ್ಯೋಗಿ ಯುವಕರು ಉದ್ಯೋಗವನ್ನು ಪಡೆಯುವ ಅಥವಾ ಸ್ವ ಉದ್ಯೋಗ ಪ್ರಾರಂಭಿಸುವ ಸಾಮರ್ಥ್ಯ ಹೊಂದುವ ಕೌಶಲ ನಿಪುಣತೆ ಒದಗಿಸುವ ಗುರಿ ಹೊಂದಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

    ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

    ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts