More

    ಬರೊಬ್ಬರಿ 38 ವರ್ಷಗಳ ಬಳಿಕ.. ಬ್ಯಾಂಕ್ ದರೋಡೆ ಮಾಡಿದ ಕೊಲೆಗಾರನನ್ನು ಬಂಧಿಸಿದ ಗುಜರಾತ್

    ಜೈಸಲ್ಮೇರ್: ಬ್ಯಾಂಕ್ ದರೋಡೆ ಮಾಡಿದ ಆರೋಪದ ಮೇರೆಗೆ ಬರೊಬ್ಬರಿ 38 ವರ್ಷಗಳ ನಂತರ ಗುಜರಾತ್ ರಾಜ್ಯದ ವ್ಯಕ್ತಿಯೋರ್ವನನ್ನು ಶುಕ್ರವಾರ ಬಂಧಿಸಲಾಗಿದೆ.
    ಶಕ್ತಿದಾನ್ ಸಿಂಗ್ ಎಂದು ಗುರುತಿಸಲಾಗಿರುವ ಆರೋಪಿಯನ್ನು ರಾಜಸ್ಥಾನದ ಬಾರ್ಮರ್‌ನ ಗದ್ರಾ ರಸ್ತೆ ಪೊಲೀಸ್ ಠಾಣೆಯಿಂದ ಬಂಧಿಸಲಾಗಿದೆ. 38 ವರ್ಷಗಳ ಹಿಂದೆ ಈತ ಬ್ಯಾಂಕ್ ದರೋಡೆಗೆ ಪ್ರಯತ್ನಿಸಿದ್ದಲ್ಲದೆ ಮೂವರನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
    ಇನ್ನೂ ಆತಂಕಕಾರಿ ವಿಷಯವೆಂದರೆ, ಹಲವಾರು ಅಪರಾಧ ಪ್ರಕರಣಗಳಲ್ಲಿ ಆತನ ಹೆಸರು ಕೇಳಿಬಂದಿದ್ದರೂ ಆತ ಹಳ್ಳಿಯ ಸರ್ಪಂಚ್ ಆಗಿದ್ದ. ಆತನ ವಿರುದ್ಧ 40 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೊಲೀಸರ ಪ್ರಕಾರ, 65 ವರ್ಷದ ಈತ ಮಾಜಿ ಡಕಾಯಿತ ಮತ್ತು ಹಲವಾರು ದರೋಡೆಗಳಲ್ಲಿ ಭಾಗಿಯಾಗಿದ್ದ.

    ಇದನ್ನೂ ಓದಿ: ಬ್ಯಾಂಕ್​ನಲ್ಲಿ ಉದ್ಯೋಗ ಸಿಗಲಿಲ್ಲ ಎಂಬ ಕಾರಣಕ್ಕೆ ಈ ಯುವಕ ಮಾಡಿದ್ದೇನು ಗೊತ್ತಾ? ಮ್ಯಾನೇಜರ್​ ಫುಲ್​ ಶಾಕ್​


    1982ರಲ್ಲಿ, ಶಕ್ತಿದಾನ್ ಸಿಂಗ್ ಗುಜರಾತ್‌ನ ಬನಸ್ಕಾಂತದಲ್ಲಿರುವ ಅಕ್ಬರ್ ಗಢ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬ್ಯಾಂಕ್ ದರೋಡೆಗೆ ಪ್ರಯತ್ನಿಸಿದ್ದ. ಇದೇ ಸಂದರ್ಭದಲ್ಲಿ, ಸಿಂಗ್, ಪೊಲೀಸ್ ಅಧಿಕಾರಿ ಸೇರಿದಂತೆ ಮೂವರನ್ನು ಕೊಲೆ ಮಾಡಿದ. ದರೋಡೆಯ ನಂತರ ಆತ ಪೊಲೀಸರಿಗೆ ‘ವಾಂಟೆಡ್ ಕ್ರಿಮಿನಲ್ ‘ ಆಗಿದ್ದ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
    ಶುಕ್ರವಾರ ಸಿಂಗ್ ನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಬಾರ್ಮರ್ ಎಸ್ಪಿ ಆನಂದ್ ಶರ್ಮಾ ಪ್ರಕಾರ, ಸಿಂಗ್ ಅತ್ಯಂತ ಕುಖ್ಯಾತ ಅಪರಾಧಿಗಳಲ್ಲಿ ಒಬ್ಬನಾಗಿದ್ದ ಮತ್ತು ಹಲವಾರು ಅಪರಾಧಗಳಲ್ಲಿ ಭಾಗವಾಗಿದ್ದ.
    1989 ರಲ್ಲಿ ಸಿಂಗ್ ಪೊಲೀಸರ ಮುಂದೆ ಶರಣಾಗಿದ್ದ. ಆ ನಂತರ ಆತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳನ್ನು ಸರ್ಕಾರ ಹಿಂತೆಗೆದುಕೊಂಡಿತ್ತು. ಆದಾಗ್ಯೂ, ಆತ 1982ರಲ್ಲಿ ಮಾಡಿದ ಬ್ಯಾಂಕ್ ದರೋಡೆ ಮತ್ತು ಕೊಲೆ ಆರೋಪದ ಹಿನ್ನೆಲೆ ಆತ ಪೊಲೀಸರ ‘ವಾಂಟೆಡ್ ಲಿಸ್ಟ್​’ ನಲ್ಲಿದ್ದ.

    ಆ ಮಕ್ಕಳೊಂದಿಗೆ ರಂಗಿನಾಟವಾಡಲು ಅವಕಾಶ ನೀಡದ ನೆರೆಯ ಮನೆಗೆ ಆತ ಇಟ್ಟೇ ಬಿಟ್ಟ ಕೊಳ್ಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts