More

  ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಕವಯತ್ರಿಯರ ಸಂಘ

  ಶಿವಮೊಗ್ಗ: ಅಖಿಲ ಭಾರತ ಕವಯತ್ರಿಯರ ಸಂಘವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ಸಂಘಟನೆಯಾಗಿದ್ದು, ವಿಶೇಷ ಮಹತ್ವವನ್ನು ಪಡೆದಿದೆ ಎಂದು ಲೇಖಕಿ, ನಗರಸಭೆ ಮಾಜಿ ಸದಸ್ಯೆ ಮಂಜುಳಾ ಆರಾಧ್ಯ ಹೇಳಿದರು.

  ಅಖಿಲ ಭಾರತ ಕವಯತ್ರಿಯರ ಸಂಘದ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಂಘಟನೆ ಈಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದುಕೊಂಡಿದೆ. ವಿಶ್ವದೆಲ್ಲೆಡೆ ಸದಸ್ಯರಿದ್ದಾರೆ ಎಂಬುದೇ ವಿಶೇಷ ಸಂಗತಿ ಎಂದು ತಿಳಿಸಿದರು.
  ಅಖಿಲ ಭಾರತ ಕವಯತ್ರಿಯರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಸರೋಜ ಮಾತನಾಡಿ, ಸಂಘದ 25ನೇ ವರ್ಷಾಚರಣೆ ಸಂಭ್ರಮಕ್ಕೆ ರೂಪುರೇಷೆ ಸಿದ್ಧಪಡಿಸಬೇಕು. ಶಿವಮೊಗ್ಗದಲ್ಲಿ ಇದೇ ವರ್ಷ ನಡೆಯಲಿರುವ ಸಂಘದ ಮೊದಲ ಅಂತರಾಷ್ಟ್ರೀಯ ಸಮ್ಮೇಳನ ಐತಿಹಾಸಿಕವಾಗಲಿದೆ ಎಂದರು.
  ಮಹಿಳೆಯರಿಂದಲೇ ನಡೆಯುವ ಮೂರು ದಿನಗಳ ಸಮ್ಮೇಳನದಲ್ಲಿ ಬೇರೆ ಬೇರೆ ರಾಜ್ಯ ಹಾಗೂ ದೇಶಗಳಿಂದ 500 ಪ್ರತಿನಿಧಿಗಳು ಭಾಗವಹಿಸುವರು. ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಯಲ್ಲಿ ಉದ್ಘಾಟನೆ ಜ್ಯೋತಿ ಬೆಳಗಿದ ನಂತರ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
  ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ವಿಭಾಗೀಯ ವ್ಯವಸ್ಥಾಪಕಿ ಸ್ವರೂಪರಾಣಿ ಅವರು ಕೆನರಾ ಏಂಜೆಲ್ ಎಂಬ ಮಹಿಳೆಯರಿಗಾಗಿಯೇ ಇರುವ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸಂಘದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಗೀತಾಂಜಲಿ ಪ್ರಸನ್ನಕುಮಾರ್, ಉಷಾ ನಾಗರಾಜ್, ಪ್ರಾಧ್ಯಾಪಕಿ ನಾಗರತ್ನ, ಶಿಕ್ಷಕಿಯರಾದ ದೀಪಾ ಕುಬಸದ್, ಕವಿತಾ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts