More

    ಆ ಮಕ್ಕಳೊಂದಿಗೆ ರಂಗಿನಾಟವಾಡಲು ಅವಕಾಶ ನೀಡದ ನೆರೆಯ ಮನೆಗೆ ಆತ ಇಟ್ಟೇ ಬಿಟ್ಟ ಕೊಳ್ಳಿ …

    ಆಗ್ರಾ:ಪಕ್ಕದ ಮನೆಯವರು ತಮ್ಮ ಮಕ್ಕಳೊಂದಿಗೆ ಆಟವಾಡಲು ತನಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆ ಮನೆಗೆ ಬೆಂಕಿ ಹಚ್ಚಿದ್ದು, ಈ ದುರ್ಘಟನೆಯಲ್ಲಿ ತೀವ್ರ ಗಾಯಗೊಂಡ ಐವರು ಮೃತಪಟ್ಟ ಘಟನೆ ನಡೆದಿದೆ.
    ಈ ಘಟನೆ ಉತ್ತರ ಪ್ರದೇಶದ ಮೈನ್‌ಪುರಿ ಪ್ರದೇಶದಲ್ಲಿ ಜೂನ್ 17 ರಂದು ನಡೆದಿದೆ. 18 ವರ್ಷದ ಯುವತಿ ಸಾಯಿಫೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದಾಳೆ. ಅದಾದ ಕೆಲವೇ ದಿನಗಳಲ್ಲಿ, ಆಕೆಯ ಸೋದರ ಸಂಬಂಧಿ, ಪೋಷಕರು ಮತ್ತು ಸಹೋದರಿ ಸಹ ಮೃತಪಟ್ಟಿದ್ದಾರೆ. 

    ಇದನ್ನೂ ಓದಿ: ಅತಿಯಾದ ದೇಹ ತೂಕದಿಂದ ಬಳಲುತ್ತಿದ್ದೀರಾ? ಕೈಗೆಟುಕುವ ದರದಲ್ಲಿ ಲಭ್ಯವಿದೆ ಪರಿಹಾರ….

    ಆರೋಪಿಯನ್ನು ಮುರಾರಿ ಕಶ್ಯಪ್ ಎಂದು ಗುರುತಿಸಲಾಗಿದೆ. ಈ ವರ್ಷ ಹೋಳಿಯಲ್ಲಿ, ಕಶ್ಯಪ್ ತನ್ನ ನೆರೆಯ ಮನೆಗೆ ಭೇಟಿ ನೀಡಿದ್ದರೂ ಅವರ ಮಕ್ಕಳೊಂದಿಗೆ ಆಟವಾಡಲು ಅವಕಾಶ ಸಿಗಲಿಲ್ಲ.
    ಪೊಲೀಸರ ಪ್ರಕಾರ, ಆರೋಪಿ ಅವರ ಮನೆಗೆ ಹೋದಾಗ ಮದ್ಯದ ಅಮಲಿನಲ್ಲಿದ್ದ ಕಾರಣ ಮಕ್ಕಳೊಂದಿಗೆ ಆಟವಾಡಲು ಅವಕಾಶ ಸಿಗಲಿಲ್ಲ. ಆರೋಪಿ ಇದೇ ವಿಷಯಕ್ಕೆ ನೆರೆಮನೆಯವರೊಂದಿಗೆ ವಾಗ್ವಾದ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಶ್ಯಪ್ ನೆರೆಮನೆಯವರೂ ಕೂಡ ದೂರು ದಾಖಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

    ಇದನ್ನೂ ಓದಿ: ಭಾರತ-ಚೀನಾ ಯುದ್ಧ ಸಂಭವಿಸಿದರೆ ಭಾರತವನ್ನು ಟ್ರಂಪ್ ಬೆಂಬಲಿಸುವುದಿಲ್ಲ!

    ಕಶ್ಯಪ್​​​ನಿಂದ ಯಾವುದೇ ಪ್ರತಿಕ್ರಿಯೆ ಬರ ಕಾರಣ, ಆ ಕುಟುಂಬಕ್ಕೆ ಯಾವ ಅನುಮಾನವೂ ಬಂದಿರಲಿಲ್ಲ. ಆದರೆ ತಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದಾನೆ ಎಂಬುದು ಅವರಿಗೆ ಗೊತ್ತಿತ್ತು. ಜೂನ್ 17 ರಂದು ಆರೋಪಿ ಆ ಮನೆಗೆ ಬೆಂಕಿ ಹಚ್ಚಿ ಅವರೆಲ್ಲರೂ ತಪ್ಪಿಸಿಕೊಳ್ಳದಂತೆ ಎಲ್ಲ ಬಾಗಿಲುಗಳನ್ನು ಬಂದ್ ಮಾಡಿದ್ದಾನೆ.
    18 ವರ್ಷದ ಬಾಲಕಿಯ ಸಹೋದರ, ಆತನ ಪತ್ನಿ ಮತ್ತು ಮಗಳು ಅಂಗಳದಲ್ಲಿ ಮಲಗಿದ್ದರಿಂದ ಒಳಗಿದ್ದವರನ್ನು ಹೊರತರುವಲ್ಲಿ ಸಾಧ್ಯವಾಗಿತ್ತು.ಆರೋಪಿ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. 

    ಕರೊನಾ ಬಿಕ್ಕಟ್ಟಿಗೆ ಭಾರತದ ಪ್ರಾಚೀನ ಜ್ಞಾನದಲ್ಲಿದೆ ಪರಿಹಾರ: ಪ್ರಿನ್ಸ್ ಚಾರ್ಲ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts