More

    ನಾಯಿಯ ಮೇಲೆ ಪದೇಪದೆ ಅತ್ಯಾಚಾರವೆಸಗಿದ ವೃದ್ಧ! ಸಿಸಿ ಕ್ಯಾಮರಾದಿಂದ ಸಿಕ್ಕಿಬಿದ್ದ

    ಪುಣೆ: ಮನೆಯಲ್ಲಿ ಮೊಮ್ಮಕ್ಕಳೊಂದಿಗೆ ಕಾಲ ಕಳೆಬೇಕಿರುವ ವಯಸ್ಸಿನ ವೃದ್ಧನೊಬ್ಬ ನಾಯಿಯ ಮೇಲೆ ಪದೇಪದೆ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ಪ್ರಕರಣವನ್ನು ಬೇಧಿಸಲೆಂದೇ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ವೃದ್ಧನ ಕಾಮದಾಟ ಬಯಲಾಗಿದೆ.

    65 ವರ್ಷದ ವೃದ್ಧ ಕಳೆದ ಅಕ್ಟೋಬರ್​ನಿಂದಲೇ ನಾಯಿಯ ಮೇಲೆ ಅತ್ಯಾಚಾರವೆಸಗುತ್ತಿದ್ದುದ್ದಾಗಿ ಸ್ಥಳೀಯರಿಂದ ಮಾಹಿತಿ ಸಿಕ್ಕಿತ್ತು. ಪುಣೆಯ ಮಾಡೆಲ್ ಕಾಲೋನಿಯಲ್ಲಿನ ವಸತಿ ಸಮಾಜದ ಪಾರ್ಕಿಂಗ್ ಸ್ಥಳದಲ್ಲಿ ಈ ಕೃತ್ಯವನ್ನು ಎಸಗುತ್ತಿದ್ದಾನೆ ಎನ್ನುವ ಮಾಹಿತಿಯಿತ್ತು. ಇದನ್ನು ಕಂಡುಹಿಡಿಯಲೆಂದು RESQ ಚಾರಿಟಬಲ್ ಟ್ರಸ್ಟ್​ ಹೆಸರಿನ ಎನ್​ಜಿಒ ಆ ಸ್ಥಳದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿತ್ತು. ಆತನ ಹಿಂಬಾಲಿಸಲೆಂದು ಜನರನ್ನು ಬಿಡಲಾಗಿತ್ತು.

    ಇತ್ತೀಚೆಗೆ ವೃದ್ಧ ಪಾರ್ಕಿಂಗ್​ ಸ್ಥಳಕ್ಕೆ ಹೋಗುತ್ತಿರುವುದನ್ನು ಕಂಡ ನಂತರ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ ಆತ ನಾಯಿಯನ್ನು ಎತ್ತಿಕೊಂಡು ಬಂದು, ಅದರ ಮೇಲೆ ಅತ್ಯಾಚಾರವೆಸಗಿರುವುದು ರೆಕಾರ್ಡ್​ ಆಗಿದೆ. ಈ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿದೆ. ಪೊಲೀಸರು ವೃದ್ಧನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಯಾದಗಿರಿಯಲ್ಲಿ ಗುಡುಗು ಸಹಿತ ಭಾರಿ ಮಳೆ! ಸಿಡಿಲು ಬಡಿದು ಹಸು ಸಾವು

    ದಿನಕ್ಕೆ 5 ಬಾಟಲಿ ಬಿಯರ್​ ಕುಡಿದು 46 ದಿನಗಳಲ್ಲಿ 18 ಕೆಜಿ ಇಳಿಸಿದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts