More

    ಮಮತಾ ಬ್ಯಾನರ್ಜಿಯವರ ಸರ್ಕಸ್​ ನೋಡುತ್ತಿದ್ದೇವೆ ಎಂದ ಬಿಜೆಪಿ ಮುಖ್ಯಸ್ಥ

    ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮುಂದಿನ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಿಲ್ಲ ಎಂದು ರಾಜ್ಯದ ಬಿಜೆಪಿ ಮುಖ್ಯಸ್ಥ ದಿಲೀಪ್​ ಘೋಷ್​ ಹೇಳಿದ್ದಾರೆ.

    2021ರಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಚಾರ ಸಭೆಯೊಂದರಲ್ಲಿ ಹೇಳಿದ್ದರು. ಆ ಮಾತಿಗೆ ತಿರುಗೇಟು ನೀಡಿದ ದಿಲೀಪ್​ ಘೋಷ್​ ಅವರು, ಮಮತಾ ಬ್ಯಾನರ್ಜಿಯವರು ಮಾಡುತ್ತಿರುವ ಸರ್ಕಸ್​ ನೋಡುತ್ತಿದ್ದೇವೆ. ಅವರ ಭಾಷಣದಲ್ಲಿ ಶೇ.95ರಷ್ಟು ಭಾಗ ಬಿಜೆಪಿಗೆ ಬೈಯುವುದೇ ಇರುತ್ತದೆ. ನಮ್ಮ ಪಕ್ಷವೆಂದರೆ ಮಮತಾ ಬ್ಯಾನರ್ಜಿಯವರಿಗೆ ಭಯ ಎಂದು ಇದರಲ್ಲೇ ಗೊತ್ತಾಗುತ್ತದೆ. ಯಾರೂ ಅವರ ಟಿಎಂಸಿ ಪಕ್ಷವನ್ನು ಸೇರುತ್ತಿಲ್ಲ. ಅಸಹಾಯಕತೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಮಮತಾ ಬ್ಯಾನರ್ಜಿಯವರು ಖಂಡಿತ ಮುಂದಿನ ವರ್ಷ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನಷ್ಟು ದೊಡ್ಡ ದೇಶಭಕ್ತ ಇನ್ಯಾರೂ ಇಲ್ಲ…ನೋಡಿ ಮಾಸ್ಕ್​ ಧರಿಸಿದ್ದೇನೆ: ಯುಎಸ್​ ಅಧ್ಯಕ್ಷ ಟ್ರಂಪ್​ ಟ್ವೀಟ್​

    2019ರಲ್ಲಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ತಾವು 42 ಸ್ಥಾನ ಗೆಲ್ಲುವುದಾಗಿ ಹೇಳಿಕೊಂಡಿದ್ದರು. ಅದೂ ಆಗಲಿಲ್ಲ. 2021ರ ಚುನಾವಣೆಯಲ್ಲಿ ನಾವು ಟಿಎಂಸಿಯನ್ನು ಸಂಪೂರ್ಣವಾಗಿ ಸೋಲಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಲಾಕ್​ಡೌನ್​ ಸಮಯದಲ್ಲಿ ಪ್ರೇಮ್​ ಎಷ್ಟು ಬದಲಾಗಿದ್ದಾರೆ ನೋಡಿ …

    ಈ ಹಿಂದೆ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, 2021ರ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿಯನ್ನು ಪಶ್ಚಿಮ ಬಂಗಾಳದಿಂದ ಕಿತ್ತೊಗೆಯುತ್ತೇವೆ. ಮತ್ತೊಮ್ಮೆ ತೃಣಮೂಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ಚುನಾವಣೆ ಇಡೀ ದೇಶಕ್ಕೇ ಹೊಸ ಮಾರ್ಗ ತೋರಿಸುತ್ತದೆ ಎಂದು ಹೇಳಿದ್ದರು.(ಏಜೆನ್ಸೀಸ್​)

    ಹಣ ಗಳಿಕೆಗಾಗಿ ಕೊವಿಡ್​-19 ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡಿದ ಐದು ಮಂದಿಯ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts