More

    ಕೇಂದ್ರಕ್ಕೆ ಸೆಡ್ಡು: ಆಧಾರ್​​ ನಿಷ್ಕ್ರಿಯಗೊಂಡವರಿಗೆ ಸರ್ಕಾರದಿಂದಲೇ ಪ್ರತ್ಯೇಕ ಕಾರ್ಡ್, ಮಮತಾ ಬ್ಯಾನರ್ಜಿ ಘೋಷಣೆ

    ಕೋಲ್ಕತ: ಆಧಾರ್​​ ನಿಷ್ಕ್ರಿಯಗೊಂಡವರಿಗೆ ರಾಜ್ಯ ಸರ್ಕಾರದಿಂದಲೇ ಪ್ರತ್ಯೇಕ ಕಾರ್ಡ್​ ನೀಡುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಅವರು ಸೋಮವಾರ (ಫೆ.19) ತಿಳಿಸಿದ್ದಾರೆ.

    ರಾಜ್ಯದ ಕೆಲ ಜನರ ಆಧಾರ್​ ಕಾರ್ಡುಗಳನ್ನು ಉದ್ದೇಶಪೂರ್ವಕವಾಗಿಯೇ ಕೇಂದ್ರ ಸರ್ಕಾರ ನಿಷ್ಕ್ರಿಯೆಗೊಳಿಸಿದೆ ಎಂದು ಗಂಭೀರ ಆರೋಪ ಮಾಡಿದ ದಿನದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ಈ ಘೋಷಣೆ ಮಾಡಿದ್ದಾರೆ.

    ಯಾರ್ಯಾರಿಗೆ ಆಧಾರ್​ ಕಾರ್ಡ್​ ನಿಷ್ಕ್ರಿಯಗೊಂಡಿದೆಯೋ ಅವರಿಗೆ ಸರ್ಕಾರದಿಂದಲೇ ಪ್ರತ್ಯೇಕ ಕಾರ್ಡ್​ ನೀಡಲಾವುದು. ಯಾವೊಬ್ಬ ಬಡವನಿಗೂ ಅನ್ಯವಾಗಲು ಬಿಡುವುದಿಲ್ಲ. ಆಧಾರ್​​ ಗ್ರೀವನ್ಸ್​ ಪೋರ್ಟಲ್​ ಆಫ್​ ವೆಸ್ಟ್​ ಬೆಂಗಾಲ್​ ಗವರ್ನಮೆಂಟ್​ (Aadhaar Grievance Portal of West Bengal Government) ಹೆಸರಿನಲ್ಲಿ ವೆಬ್​ಸೈಟ್​ ಒಂದನ್ನು ರಚನೆ ಮಾಡಿದ್ದೇವೆ. ಆಧಾರ್​ ಕಾರ್ಡ್​ ನಿಷ್ಕ್ರಿಯಗೊಂಡಿರುವವರು ನಮಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ತಿಳಿಸಿ, ಪ್ರತ್ಯೇಕ ಕಾರ್ಡ್​ ನೀಡಲಾಗುವುದು. ಇದರಿಂದ ತಮ್ಮ ಪ್ರಜಾಸತ್ತಾತ್ಮಕ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ಅನುಭವಿಸುವುದನ್ನು ಮುಂದುವರಿಸಬಹುದು ಎಂದು ಮಮತಾ ಬ್ಯಾನರ್ಜಿ ಹೇಳಿದರು.

    ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದಾರೆ. ಯುಐಡಿಎಐ (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಪಶ್ಚಿಮ ಬಂಗಾಳದಲ್ಲಿ “ಯಾವುದೇ ಕ್ಷೇತ್ರ ವಿಚಾರಣೆ ಅಥವಾ ವ್ಯಕ್ತಿಗಳನ್ನು ಸಂಪರ್ಕಿಸದೆ ಹಾಗೂ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜನರ ಆಧಾರ್ ಕಾರ್ಡ್‌ಗಳನ್ನು ಏಕಪಕ್ಷೀಯವಾಗಿ ನಿಷ್ಕ್ರಿಯಗೊಳಿಸುತ್ತಿದೆ ಎಂದು ತಮ್ಮ ಪತ್ರದಲ್ಲಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

    ಯಾವುದೇ ಕಾರಣಗಳನ್ನು ನೀಡದೆ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವ ಇಂತಹ ಹಠಾತ್ ಕ್ರಮಕ್ಕೆ ಕಾರಣ ಏನು ಎಂಬುದನ್ನು ನಿಮ್ಮಿಂದ ತಿಳಿಯಲು ಬಯಸುತ್ತೇನೆ. ಇದು ಕೇವಲ ಅರ್ಹ ಫಲಾನುಭವಿಗಳನ್ನು ವಂಚಿತಗೊಳಿಸುವ ಸಲುವಾಗಿಯೇ ಅಥವಾ ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಜನರಲ್ಲಿ ಭಯದ ವಾತಾವರಣ ಉಟುಮಾಡುವ ಉದ್ದೇಶಕ್ಕಾಗಿಯೇ? ಎಂದು ಟಿಎಂಸಿ ನಾಯಕಿ ಪ್ರಶ್ನಿಸಿದ್ದಾರೆ.

    ಭಾನುವಾರ ಪಶ್ಚಿಮ ಬಂಗಾಳದ ಬಿರ್​ಭಮ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರವು ರಾಜ್ಯದ ಜನರ ಆಧಾರ್ ಕಾರ್ಡ್‌ಗಳನ್ನು “ರದ್ದು” ಮಾಡುತ್ತಿದೆ ಎಂದು ಆರೋಪಿಸಿದರು. ನನಗೆ ಗೊತ್ತು ಬುರ್ದ್ವಾನ್‌ನಲ್ಲಿ ಹಾಗೂ ಬಿರ್‌ಭಮ್‌ನಲ್ಲಿ ಕೆಲವು ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ. ಇದು ಕೇಂದ್ರದ ಪಿತೂರಿಯಾಗಿದೆ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ಹೊರಹಾಕಿದರು. (ಏಜೆನ್ಸೀಸ್​)

    ಕೇವಲ 2 ಗಂಟೆಗೆ 13 ಲಕ್ಷ ರೂಪಾಯಿ! ನಟಿ ಮೀನಾ ವಿರುದ್ಧ ಗಂಭೀರ ಆರೋಪ ಮಾಡಿದ ಕಾಲಿವುಡ್​ ನಟ

    ಗಂಡ ಏಕೆ ಬೇಕು ಅದೇ ಸಾಕು! ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು ಕಿರಾತಕ ಬೆಡಗಿಯ ಈ ಮಾತು…​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts