More

    13,960 ಕೋಟಿ ರೂ. ಸಾಲ ತೀರುವಳಿ ಪ್ಯಾಕೇಜ್​, ಕಿಂಗ್​ ಆಫ್​ ಗುಡ್​ ಟೈಮ್ಸ್​ನ ಮತ್ತೊಂದು ದಾಳ

    ನವದೆಹಲಿ: ಭಾರತದ ವಿವಿಧ ಬ್ಯಾಂಕ್​ಗಳಿಂದ 9 ಸಾವಿರ ಕೋಟಿ ರೂ.ಗೂ ಹೆಚ್ಚಿನ ಸಾಲ ಮಾಡಿ ಲಂಡನ್​ಗೆ ಪರಾರಿಯಾಗಿರುವ ಕಿಂಗ್​ ಆಫ್​ ಗುಡ್​ ಟೈಮ್ಸ್​ ಖ್ಯಾತಿಯ ವಾಣಿಜ್ಯೋದ್ಯಮಿ ವಿಜಯ್​ ಮಲ್ಯ 13,960 ಕೋಟಿ ರೂ.ಗಳ ಸಮಗ್ರ ಸಾಲ ತೀರುವಳಿ ಪ್ಯಾಕೇಜ್​ ರೂಪಿಸಿರುವುದಾಗಿಯೂ, ಅದನ್ನು ಪಡೆದು ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಸುಪ್ರೀಂಕೋರ್ಟ್​ಗೆ ಮನವಿ ಮಾಡಿಕೊಂಡಿದ್ದಾರೆ.

    ಲಂಡನ್​ನಲ್ಲಿ ಅಡಗಿಕೊಂಡಿದ್ದ ಅವರನ್ನು ಭಾರತಕ್ಕೆ ಗಡೀಪಾರು ಮಾಡಿ, ಸರ್ಕಾರಕ್ಕೆ ಹಸ್ತಾಂತರಿಸುವಂತೆ ಬ್ರಿಟನ್​ ಕೋರ್ಟ್​ಗಳು ಆದೇಶಿಸಿವೆ. ಆದರೆ, ಅಲ್ಲಿಯೇ ಆಶ್ರಯ ಬಯಸಿ ಅರ್ಜಿ ಸಲ್ಲಿಸಿರುವ ಮಲ್ಯ, ತಮ್ಮ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ 13,960 ಕೋಟಿ ರೂ. ಸಾಲ ತೀರುವಳಿ ಪ್ಯಾಕೇಜ್​ ಘೋಷಿಸಿದ್ದಾರೆ ಎನ್ನಲಾಗಿದೆ.

    ಮಲ್ಯ ಪರ ವಕೀಲರು ಸುಪ್ರೀಂಕೋರ್ಟ್​ಗೆ ತಮ್ಮ ಕಕ್ಷಿದಾರರು ಸಾಲ ತೀರುವಳಿ ಪ್ಯಾಕೇಜ್​ ರೂಪಿಸಿರುವುದಾಗಿ ಹೇಳಿದ್ದರೂ, ಅದರ ಮೊತ್ತವನ್ನು ತಿಳಿಸಿರಲಿಲ್ಲ ಎನ್ನಲಾಗಿದೆ. ಆದರೆ, ಕಳೆದ ತಿಂಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಮಲ್ಯ, ಅದರಲ್ಲಿ 13,960 ಕೋಟಿ ರೂ.ಗಳ ಪ್ಯಾಕೇಜ್​ ಬಗ್ಗೆ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ತಾವು ಸಾಲ ಪಡೆದು ವಂಚಿಸಿರುವ 9 ಸಾವಿರ ಕೋಟಿ ರೂ.ಗೆ ಹೋಲಿಸಿದರೆ, ಇದು ಸಾಕಷ್ಟು ಹೆಚ್ಚಾಗಿದೆ ಎಂಬುದು ಅವರ ವಾದವಾಗಿದೆ. ಜತೆಗೆ ಸಾಲ ತೀರುವಳಿ ಬಗ್ಗೆ ಮಲ್ಯ ಪ್ರಸ್ತಾಪಿಸಿರುವ ಇದುವರೆಗಿನ ಗರಿಷ್ಠ ಮೊತ್ತ ಇದಾಗಿದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಚೀನಾ ಸೇನೆ ಹಿಂತೆಗೆತ: 10 ದಿನಗಳವರೆಗೆ ಭಾರತದ ಪರಿಶೀಲನೆ

    ಆದರೆ, ಮಲ್ಯ ಅವರ ಈ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, ಸ್ವತಂತ್ರ ಹಕ್ಕಿಯಾಗಿ ತಮ್ಮ ಸ್ವಚ್ಛಂದ ಬದುಕನ್ನು ಮುಂದುವರಿಸಲು ಮಲ್ಯ ಈ ಹಿಂದೆ ಕೂಡ ಇಂಥ ಹಲವು ಪ್ರಸ್ತಾಪಗಳನ್ನು ಇರಿಸಿದ್ದರು. ಆದರೆ, ಅವು ಯಾವುವೂ ಸಾಕಾರವಾಗಿಲ್ಲ. ಈಗಲಾದರೂ ಭಾರತಕ್ಕೆ ಹಸ್ತಾಂತರಗೊಳ್ಳುವ ಮೊದಲು ಅವರು ಪ್ರಸ್ತಾಪಿಸಿ 13,960 ಕೋಟಿ ರೂ.ಗಳನ್ನು ಜಮೆ ಮಾಡಲಿ. ಆಮೇಲೆ ನೋಡೋಣ ಎಂದು ಸುಪ್ರೀಂಕೋರ್ಟ್​ ನ್ಯಾಯಪೀಠಕ್ಕೆ ಹೇಳಿದರು ಎನ್ನಲಾಗಿದೆ. ತನ್ಮೂಲಕ ಅವರು ಮಲ್ಯ ಅವರು ಭಾರತಕ್ಕೆ ಹಸ್ತಾಂತರಗೊಳ್ಳುವುದು ನಿಶ್ಚಿತ ಎಂಬುದನ್ನು ಪರೋಕ್ಷವಾಗಿ ಖಚಿತಪಡಿಸಿದರು ಎನ್ನಲಾಗಿದೆ.

    ಬ್ಯಾಂಕ್​ಗಳ ಸಾಲ ವಸೂಲಾತಿಗೆ ಅನುಕೂಲವಾಗುವಂತೆ ತಮ್ಮ ಆಸ್ತಿಗಳ ವಿವರಗಳನ್ನು ಸಲ್ಲಿಸುವಂತೆ ಜಾರಿ ನಿರ್ದೇಶನಾಲಯದ ಸೂಚನೆಯ ಹೊರತಾಗಿಯೂ ಮಲ್ಯ ಮಾಹಿತಿಯನ್ನು ಒದಗಿಸಿರಲಿಲ್ಲ. ಈ ಹಿನ್ನೆಲೆಯಲ್ಲೆ ಜಾರಿ ನಿರ್ದೆಶನಾಲಯ ದೆಹಲಿ ಕೋರ್ಟ್​ನಲ್ಲಿ ಮಲ್ಯ ವಿರುದ್ಧ ಪ್ರಕರಣ ದಾಖಲಿಸಿತ್ತು. ಆದರೆ ಇದರ ವಿಚಾರಣೆಗೆ ಮಲ್ಯ ನಿರಂತರವಾಗಿ ಗೈರುಹಾಜರಾಗಿದ್ದರಿಂದ, ದೆಹಲಿ ಕೋರ್ಟ್​ 2016ರಲ್ಲಿ ಅವರ ವಿರುದ್ಧ ಜಾಮೀನುರಹಿತ ವಾರೆಂಟ್​ ಹೊರಡಿಸಿತ್ತು.

    ಇದನ್ನೂ ಓದಿ: ಇದೇ ಕೊನೆ, ಇನ್ನು ನನ್ನ ತಂಟೆಗೆ ಬಂದ್ರೆ ಹುಷಾರ್: ಡ್ರೋನ್ ಪ್ರತಾಪ್ ಎಚ್ಚರಿಕೆ!

    ಆಗ 2016ರ ಮಾರ್ಚ್​ನಲ್ಲಿ ಮಲ್ಯ 4 ಸಾವಿರ ಕೋಟಿ ರೂ.ಗಳನ್ನು ಪಾವತಿಸುವುದಾಗಿ ಪ್ರಸ್ತಾಪ ಇರಿಸಿ, ಕಿಂಗ್​ಫಿಶರ್​ ಏರ್​ಲೈನ್ಸ್​ ಸೇರಿ ತಮ್ಮ ಎಲ್ಲ ಕಂಪನಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಒಂದು ತಿಂಗಳ ಬಳಿಕ ಈ ಮೊತ್ತವನ್ನು 6,868 ಕೋಟಿ ರೂ.ಗೆ ಹೆಚ್ಚಿಸಿದ್ದರು.

    ಇತ್ತೀಚೆಗೆ ಟ್ವೀಟ್​ ಮಾಡಿದ್ದ ಅವರು, ಕೋವಿಡ್​-19 ಪರಿಹಾರ ಪ್ಯಾಕೇಜ್​ ಘೋಷಿಸಿದ ಸರ್ಕಾರಕ್ಕೆ ಅಭಿನಂದನೆಗಳು. ತಮಗೆ ಎಷ್ಟು ಬೇಕೋ ಅಷ್ಟು ಕರೆನ್ಸಿಯನ್ನು ಪ್ರಿಂಟ್​ ಮಾಡಿಕೊಳ್ಳಬಹುದು. ಆದರೆ, ನನ್ನಂಥ ಸಣ್ಣ ವಂತಿಕೆದಾರ ಇರಿಸಿರುವ ಶೇ.100ರಷ್ಟು ಬ್ಯಾಂಕ್ ಸಾಲ ತೀರುವಳಿಯ ಪ್ರಸ್ತಾಪವನ್ನು ನಿರ್ಲಕ್ಷಿಸುತ್ತಿರುವುದು ಏಕೆ? ದಯವಿಟ್ಟು ಬೇಷರತ್ತಾಗಿ ನನ್ನ ಹಣವನ್ನು ಪಡೆದು, ಪ್ರಕರಣಗಳನ್ನು ಕೊನೆಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದರು.

    VIDEO|PHOTOS: ಲೇಹ್​ ನಲ್ಲಿ ಭಾರತೀಯ ಸಶಸ್ತ್ರಪಡೆಗಳ ಪ್ಯಾರಾ ಡ್ರಾಪಿಂಗ್​ ಕವಾಯತು ಪ್ರದರ್ಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts