More

    ಚೀನಾ ಸೇನೆ ಹಿಂತೆಗೆತ: 10 ದಿನಗಳವರೆಗೆ ಭಾರತದ ಪರಿಶೀಲನೆ

    ನವದೆಹಲಿ: ಲಡಾಖ್​ನ ಪೂರ್ವಭಾಗದಲ್ಲಿ ವಿವಿಧ ಸ್ಥಳಗಳಲ್ಲಿ ನಿಯೋಜನೆಗೊಂಡಿದ್ದ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ಯೋಧರು ಸ್ಥಳದಿಂದ ಹಿಂತೆಗೆದಿರುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸೇನಾಪಡೆ ನಿರ್ಧರಿಸಿದೆ. ಇದಕ್ಕಾಗಿ ಅದು ಆ ಪ್ರದೇಶದಲ್ಲಿ ಮುಂದಿನ 10 ದಿನಗಳವರೆಗೆ ಪರಿಶೀಲನಾ ಕಾರ್ಯಾಚರಣೆ ಕೈಗೊಳ್ಳಲಿದೆ.

    ಭಾರತದ 14 ಕೋರ್​ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಹರೀಂದರ್​ ಸಿಂಗ್​ ಮತ್ತು ದಕ್ಷಿಣ ಕ್ಸಿನ್​ಜಿಯಾಂಗ್​ ಮಿಲಿಟರಿ ಡಿಸ್ಟ್ರಿಕ್ಟ್​ನ ಮುಖ್ಯಸ್ಥ ಮೇಜರ್​ ಜನರಲ್​ ಲಿಯು ಲಿನ್​ ನಡುವೆ 5ನೇ ಸುತ್ತಿನ ಮಾತುಕತೆ ನಿಗದಿಯಾಗಿದೆ. ಪ್ಯಾಂಗಾಂಗ್​ ತ್ಸೊ ಮತ್ತು ಗೋಗ್ರಾ-ಹಾಟ್​ಸ್ಪ್ರಿಂಗ್ಸ್​ನಲ್ಲಿ ಭಾಗಶಃ ಸೇನಾ ಹಿಂತೆಗೆದ ಬಳಿಕ ಈ ಮಾತುಕತೆಗಳು ನಡೆಯಲಿವೆ. ಈ ಮಾತುಕತೆಯು ಈ ಪ್ರದೇಶದಲ್ಲಿನ ಸೇನೆಯ ಸಂಪೂರ್ಣ ಹಿಂತೆಗೆತಕ್ಕೆ ದಾರಿ ಮಾಡಿಕೊಡುವ ಬಗ್ಗೆ ವಿಶ್ವಾಸ ವ್ಯಕ್ತವಾಗುತ್ತಿದೆ.

    ಜು.14ರಂದು ನಡೆದ 4ನೇ ಸುತ್ತಿನ ಮಾತುಕತೆ ವೇಳೆ ಪಿಎಲ್​ಎ ಪ್ಯಾಂಗಾಂಗ್​ ತ್ಸೊ ಮತ್ತು ಗೋಗ್ರಾ-ಹಾಟ್​ಸ್ಪ್ರಿಂಗ್​ಗಳಿಂದ ಇನ್ನಷ್ಟು ಹಿಂದಕ್ಕೆ ಸರಿಯುವ ಬಗ್ಗೆ ಭರವಸೆ ನೀಡಿತ್ತು. ಈ ವಿಷಯವಾಗಿ ಅದು ರಾಜಕೀಯ ಮತ್ತು ಮಿಲಿಟರಿ ನಾಯಕರ ಜತೆ ಚರ್ಚಿಸುತ್ತಿದೆ. ಅವರ ಈ ಚರ್ಚೆಗಳು ವಾಸ್ತವದಲ್ಲಿ ಯಾವ ರೂಪದಲ್ಲಿ ಅನುಷ್ಠಾನಕ್ಕೆ ಬರುತ್ತದೆ ಎಂಬುದನ್ನು ನಾವು ಕಾದುನೋಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಹೇಳಿವೆ.

    ಇದನ್ನೂ ಓದಿ: ಲಡಾಖ್​​ಗೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್

    ಇದಕ್ಕೆ ಪೂರಕವಾಗಿ ಭಾರತೀಯ ಸೇನಾಪಡೆ ತುಂಬಾ ಅಪರೂಪವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಪ್ರದೇಶದಲ್ಲಿ ಸಂಪೂರ್ಣ ಸೇನಾ ಹಿಂತೆಗೆತದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಆದರೆ, ಒಮ್ಮೆಲೇ ಇದು ಸಾಧ್ಯವಿಲ್ಲ. ಹಂತ, ಹಂತವಾಗಿ ಮುಂದುವರಿಯಬೇಕಾಗುತ್ತದೆ. ನಿರಂತರ ನಿಗಾವಣೆಯ ಅಗತ್ಯವೂ ಇದೆ. ಜೂ.15ರಂದು ಗಲ್ವಾನ್​ ಕಣಿವೆಯಲ್ಲಿ ಉಂಟಾದ ರಕ್ತಸಿಕ್ತ ಘರ್ಷಣೆಯ ಬಳಿಕ ಉಭಯ ಪಾಳೆಯದಲ್ಲೂ ಅಪನಂಬಿಕೆ ಮನೆ ಮಾಡಿದೆ. ಹಾಗಾಗಿ ಪಿಎಲ್​ಎ ಯೋಧರು ಹಿಂತೆಗೆತ ಪ್ರಕ್ರಿಯೆ ಬಗ್ಗೆ ನಿರಂತರ ಪರಿಶೀಲನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿತ್ತು.

    ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​, ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಮತ್ತು ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ ಅವರನ್ನು ಒಳಗೊಂಡ ಉನ್ನತಾಧಿಕಾರದ ಚೀನಾ ಸ್ಟಡಿ ಗ್ರೂಪ್​ ಗುರುವಾರ ಸಭೆ ಸೇರಿ ಜು.14ರ ಮಾತುಕತೆಯ ಬಳಿಕ ಲಡಾಖ್​ ಪ್ರದೇಶದಲ್ಲಿ ಆಗಿರುವ ಬೆಳವಣಿಗೆ ಕುರಿತು ಚರ್ಚಿಸಿದ ಬೆನ್ನಲ್ಲೇ ಭಾರತೀಯ ಸೇನಾಪಡೆ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

    ಪಾಕಿಸ್ತಾನದ ತಾಲಿಬಾನ್ ನಾಯಕ ಕಪ್ಪುಪಟ್ಟಿಗೆ: ವಿಶ್ವಸಂಸ್ಥೆ ಮಹತ್ವದ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts