More

  ಬರ ಪರಿಹಾರದ ಹಣ ತಕ್ಷಣ ಜಮೆ ಮಾಡಲು ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹ

  ಬ್ಯಾಡಗಿ: ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವುದೇ ಸರ್ಕಾರಕ್ಕೆ ದೊಡ್ಡ ಸಾಧನೆಯಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಕೂಡಲೇ ಪರಿಹಾರ ಮೊತ್ತ ಜಮೆ ಮಾಡುವ ಮೂಲಕ ಉದ್ಯೋಗ ಸೃಷ್ಟಿಗೆ ಕ್ರಿಯಾಯೋಜನೆ ತಯಾರಿಸಬೇಕು ಎಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಸರ್ಕಾರವನ್ನು ಆಗ್ರಹಿಸಿದರು.

  ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕು ರೈತ ಸಂಘದ ಕಾರ್ಯಕರ್ತರು ನ. 28ರಂದು ಹಾವೇರಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಕುರಿತು ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಮಳೆ ಬಾರದೆ ರೈತರು ಸಾಕಷ್ಟು ತೊಂದರೆಯಲ್ಲಿದ್ದಾರೆ. ಒಬ್ಬ ರೈತರಿಗೂ ನಯಾಪೈಸೆ ಬೆಳೆನೂ ಬಂದಿಲ್ಲ, ಆದರೆ, ಸರ್ಕಾರ ಅಹೋರಾತ್ರಿ ಹೋರಾಟ, ಧರಣಿ ಮಾಡಿದ ಬಳಿಕ ತಾಲೂಕನ್ನು ಬರಗಾಲ ಪಟ್ಟಿಗೆ ಸೇರ್ಪಡೆಗೊಳಿಸಿ ಕೈತೊಳೆದುಕೊಂಡಿದೆ. ರೈತರಿಗೆ ಕೂಲಿಯೂ ಇಲ್ಲ, ಹೊಲದಲ್ಲಿ ಕಾಳೂ ಇಲ್ಲವಾಗಿ ತೀವ್ರ ಸಂಕಷ್ಟದಲ್ಲಿ ಮುಳುಗಿದ್ದಾರೆ. ಕೇಂದ್ರದ ಎನ್​ಡಿಆರ್​ಎಫ್ ಗೈಡ್ ಲೈನ್ ಪ್ರಕಾರ ರೈತರಿಗೆ ಪರಿಹಾರ ಬಿಡುಗಡೆ ಮಾಡಿಲ್ಲ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಬ್ಬರ ಮೇಲೊಬ್ಬರು ಹಾಕುತ್ತ ರೈತ ಸಮುದಾಯದ ಜೀವ ಹಿಂಡುತ್ತಿದ್ದಾರೆ. ರೈತರು ಹೋರಾಟ ತೀವ್ರಗೊಳಿಸುವ ಮುನ್ನವೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬರಗಾಲ ಪರಿಹಾರಕ್ಕೆ ಒತ್ತಾಯಿಸಿ ನ. 28ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತೇವೆ. ಸರ್ಕಾರ ಸ್ಪಂದಿಸದಿದ್ದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಮನೆ ಎದುರು ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.

  ನ. 28ರಂದು ನಡೆಯುವ ಪ್ರತಿಭಟನೆ ಕುರಿತು ಭಿತ್ತಿಪತ್ರ ಬಿಡುಗಡೆ ಮಾಡಿದರು. ರೈತ ಪದಾಧಿಕಾರಿಗಳಾದ ಗಂಗಣ್ಣ ಎಲಿ, ರುದ್ರಗೌಡ್ರ ಕಾಡನಗೌಡ್ರ, ಕಿರಣ ಹೂಗಾರ, ಮೌನೇಶ ಕಮ್ಮಾರ, ಮಲ್ಲೇಶ ಡಂಬಳ, ಮಂಜು ತೋಟದ, ಮಂಜಯ್ಯ ಹಿರೇಮಠ, ಶೇಖಪ್ಪ ಕಾಶಿ, ಜಾನ ಪುನೀತ್, ನಿಂಗಪ್ಪ ಮಾಸಣಗಿ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts