More

    ಭಕ್ತಿಯಿಂದ ಜಲಕ್ಷಾಮ ನಿರ್ಮೂಲನೆ ಮಾಡಿದ ಮಹಾನ್ ತಪಸ್ವಿ ಭಗೀರಥ ಮಹರ್ಷಿ

    ದೇವದುರ್ಗ: ಭಗೀರಥ ಮಹರ್ಷಿ ಮಹಾನ್ ತಪಸ್ವಿಯಾಗಿದ್ದು ತಮ್ಮ ಭಕ್ತಿಯಿಂದ ಗಂಗೆಯನ್ನು ಭೂಮಿಗೆ ತಂದು ಜಲಕ್ಷಾಮ ನಿರ್ಮೂಲನೆ ಮಾಡಿದ್ದಾರೆ ಎಂದು ತಹಸೀಲ್ದಾರ್ ವೈ.ಕೆ.ಬಿದರಿ ಹೇಳಿದರು.


    ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗುರುವಾರ ಮಾತನಾಡಿದರು. ನಾಡಿಗೆ ಭಗೀರಥರ ಸೇವೆ ಅತ್ಯಂತ ಅಮೋಘ ಮತ್ತು ವಿಸ್ಮರಣವಾಗಿದೆ. ಇಂತಹ ಮಹಾಜ್ಞಾನಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮೌಲ್ಯಯುತ ಬದುಕು ಕಟ್ಟಿಕೊಳ್ಳಬೇಕು ಎಂದರು.


    ಇದನ್ನೂ ಓದಿ: ಶತಮಾನದ ಸುರಂಗ ಪುರುಷನ ಭಗೀರಥ ಸಾಧನೆ: 56 ವರ್ಷಗಳಲ್ಲಿ 1400 ಸುರಂಗ ಕೊರೆದ ಕುಂಞಂಬು ನಾಯರ್

    ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

    ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಚ್.ಶಿವರಾಜ ಮಾತನಾಡಿ, ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಶಿಕ್ಷಣದಿಂದ ಮಾತ್ರ ಸರ್ವರ ಅಭಿವೃದ್ಧಿ ಸಾಧ್ಯ ಎಂದರು. ಉಪ್ಪಾರ ಸಮಾಜ ತಾಲೂಕು ಅಧ್ಯಕ್ಷ ಭೀಮಣ್ಣ, ತಿಮ್ಮರೆಡ್ಡಿ, ದೇವಪ್ಪ, ಶಿವಪ್ಪ, ತಿರುಪತಿ, ತಿಮ್ಮಣ್ಣ, ಶಿವರಾಜ್, ಮಲ್ಲಿಕಾರ್ಜುನ್, ನೌಕರರಾದ ಗೋವಿಂದ ನಾಯಕ, ಭೀಮರಾಯ ನಾಯಕ, ಬಸವರಾಜ್ ಪೂಜಾರಿ, ಅನಿಲ್ ಕುಮಾರ್ ಇತರರಿದ್ದರು.
    27-ಡಿವಿಡಿ-2
    ದೇವದುರ್ಗದ ಮಿನಿವಿಧಾನಸೌಧದಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ವೈ.ಕೆ.ಬಿದರಿ, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಚ್.ಶಿವರಾಜ, ಉಪ್ಪಾರ ಸಮಾಜ ತಾಲೂಕು ಅಧ್ಯಕ್ಷ ಭೀಮಣ್ಣ, ಗಂಗಪ್ಪಯ್ಯ ತಾತ ಪೂಜಾರಿ, ಮುಕ್ಕಣ್ಣ ವಕೀಲ್, ನಾಗಪ್ಪ ಉಪ್ಪಾರ್, ಶಿವಪುತ್ರ ಉಪ್ಪಾರ್, ಯಂಕಪ್ಪ, ಹನುಮಂತ ಮನ್ನಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts