More

    ರಾಜ್ಯಸಭಾ ಪ್ರತಿಪಕ್ಷ ನಾಯಕನ ಸ್ಥಾನ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ

    ನವದೆಹಲಿ: ಗುಲಾಂ ನಬಿ ಅಜಾದ್ ನಿವೃತ್ತಿಯಿಂದ ತೆರವಾದ ರಾಜ್ಯಸಭಾ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಲಿದ್ದು, ಈ ಬಗ್ಗೆ ರಾಜ್ಯಸಭಾ ಚೇರ್​ಮನ್​​ಗೆ ಕಾಂಗ್ರೆಸ್​ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ಅಜಾದ್​ ಅವರು ಜಮ್ಮು ಕಾಶ್ಮೀರ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಮಂಗಳವಾರ ರಾಜ್ಯಸಭಾದಿಂದ ನಿವೃತ್ತಿ ಹೊಂದಿದ ನಾಲ್ವರು ಸದಸ್ಯರಲ್ಲಿ ಅಜಾದ್​ ಸಹ ಒಬ್ಬರು. ಅಜಾದ್​ ಅವರಿಗೆ ಮೇಲ್ಮನೆಯಲ್ಲಿ ಒಳ್ಳೆಯ ಬೀಳ್ಕೊಡುಗೆ ಸಹ ಸಿಕ್ಕಿತು. ಅಜಾದ್​ ಕುರಿತು ಮಾತನಾಡುವಾಗ ಪ್ರಧಾನಿ ಮೋದಿ ಅವರು ಕಣ್ಣೀರು ಸಹ ಹಾಕಿದ್ದರು.

    ಇದನ್ನೂ ಓದಿರಿ: ಅಕ್ರಮ ಗೋಸಾಗಾಟ: ಕುಂದಾಪುರ ಪೋಲಿಸರಿಂದ 16 ಗೋವುಗಳ ರಕ್ಷಣೆ

    ಅಜಾದ್​ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ ಅಜಾದ್​ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅವರು ರಾಜಕೀಯ ಮಾತ್ರವಲ್ಲದೆ, ದೇಶ ಮತ್ತು ರಾಜ್ಯಸಭಾ ಜತೆಗೆ ನಿಕಟ ಸಂಬಂಧವನ್ನು ಹೊಂದಿದ್ದರು ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.

    ಇದೀಗ ಅಜಾದ್​ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಖರ್ಗೆ ಅವರನ್ನು ಕಾಂಗ್ರೆಸ್​ ಆಯ್ಕೆ ಮಾಡಿದ್ದು, ಇನ್ನು ಮುಂದೆ ರಾಜ್ಯಸಭೆಯಲ್ಲಿ ಕಾಂಗ್ರೆಸ್​ ಅನ್ನು ಖರ್ಗೆ ಅವರು ಮುನ್ನೆಡೆಸಲಿದ್ದಾರೆ. ಅಜಾದ್​ ಅವರು ಫೆ. 15ರಂದು ನಿವೃತ್ತಿಯನ್ನು ಹೊಂದಲಿದ್ದಾರೆ. (ಏಜೆನ್ಸೀಸ್​)

    ಹಿಟ್​ ಆ್ಯಂಡ್​​ ರನ್​ ಕೇಸ್​: ಕಾರು ಮಾಹಿತಿ ಬೆನ್ನತ್ತಿದ್ದ ಬೆಂಗ್ಳೂರ್​ ಪೊಲೀಸ್ರಿಗೆ ಸಿಕ್ಕಿದ್ದು ಶಿಲ್ಪಾ ಶೆಟ್ಟಿ ದಂಪತಿ ಪರಿಚಯ!

    ಕಸ್ತೂರಿ ರಂಗನ್ ವರದಿ ವಿರುದ್ಧ ಸುಪ್ರೀಂಗೆ ಮೊರೆ; 1553 ಹಳ್ಳಿಗಳಿಗೆ ಕಾಡುತ್ತಿದೆ ಆತಂಕ

    ಜೂ. ಎನ್​ಟಿಆರ್-ನೀಲ್ ಸಿನಿಮಾ ಪಕ್ಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts