More

    ಅವಧಿ ಮುಗಿದ್ರೂ ಟೆಂಡರ್ ಕರೆದಿಲ್ಲ

    ಟಿ.ಎಚ್.ಶಿವಕುಮಾರ ಮಲೇಬೆನ್ನೂರು: ಕುರಿ, ಕೋಳಿ, ಮೀನು ಮಾಂಸ ಮಾರಾಟ ಮಳಿಗೆ, ವಾರದ ಮತ್ತು ದಿನವಹಿ ಸಂತೆ ಗುತ್ತಿಗೆ ಅವಧಿ ಮುಗಿದು ಆರು ತಿಂಗಳಾದರೂ ಟೆಂಡರ್ ಕರೆಯದೇ ಪುರಸಭೆಗೆ 5 ಲಕ್ಷಕ್ಕೂ ಅಧಿಕ ಆರ್ಥಿಕ ನಷ್ಟವಾಗಿದೆ.

    ರಾಜ್ಯ ಸರ್ಕಾರ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಕರೊನಾ ಆರ್ಥಿಕ ಸಂಕಷ್ಟಕ್ಕೊಳಗಾಗಿದು,್ದ ಇದಕ್ಕೆ ಮಲೇಬೆನ್ನೂರು ಪುರಸಭೆ ಹೊರತಾಗಿಲ್ಲ. ಗುತ್ತಿಗೆ ಅವಧಿ ಮಾರ್ಚ್‌ಗೆ ಮುಗಿದರೂ, ಅಧಿಕಾರಿಗಳು ಟೆಂಡರ್ ಕರೆದು ಕುರಿ, ಕೋಳಿ ಮಾಂಸ ಮಾರಾಟದ 15 ಮಳಿಗೆ, ವಾರದ ಸಂತೆ ಮತ್ತು ದಿನವಹಿ ಜಕಾತಿ ಸಂಗ್ರಹ ಹರಾಜು ಪ್ರಕ್ರಿಯೆ ನಡೆಸದೇ ನಿರ್ಲಕ್ಷಿಸಿದ್ದಾರೆ.

    ವ್ಯಾಪಾರ ನಿಂತಿಲ್ಲ: ಗುತ್ತಿಗೆ ನವೀಕರಣವಾಗದಿದ್ದರೂ ಮಾಂಸ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ನಿಂತಿಲ್ಲ. ಆರು ತಿಂಗಳಿಂದ ನಿರಾತಂಕವಾಗಿ ವಹಿವಾಟು ನಡೆಸುತ್ತಿದ್ದರಿಂದ ಪುರಸಭೆಗೆ ದೊಡ್ಡ ಮೊತ್ತದ ಆರ್ಥಿಕ ನಷ್ಟವಾಗುತ್ತಿದೆ.

    ಅಧಿಕಾರಿ-ವ್ಯಾಪಾರಿಗಳು ಶಾಮೀಲ್: ಕಳೆದ ಮಾರ್ಚ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಆಗ ಈ ಹಿಂದಿನ ವರ್ಷಕ್ಕಿಂತ ಕಡಿಮೆ ಮೊತ್ತ ಕೂಗಿದ್ದರಿಂದ ಹರಾಜು ಪ್ರಕ್ರಿಯೆ ಅಪೂರ್ಣಗೊಂಡಿತ್ತು. ಬಳಿಕ ಕರೊನಾ ಬಂದಿದ್ದರಿಂದ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿತು. ಆದರೆ ವ್ಯಾಪಾರ ಮಾತ್ರ ಇಂದಿಗೂ ನಿಲ್ಲದೇ ನಡೆಯುತ್ತಿದೆ. ಇದರಲ್ಲಿ ಅಧಿಕಾರಿಗಳು ಮತ್ತು ವ್ಯಾಪಾರಿಗಳು ಷಾಮೀಲಾಗಿದ್ದಾರೆಂಬುದು ಸಾರ್ವಜನಿಕರ ಆರೋಪವಾಗಿದೆ.

    ಐದಕ್ಕೂ ಅಧಿಕ ನಷ್ಟ: 2019-20ನೇ ಸಾಲಿನಲ್ಲಿ ಕುರಿ-ಕೋಳಿ ಮಾರುಕಟ್ಟೆ 2,94,150 ರೂ.ಗೆ, ವಾರದ ಸಂತೆ 4.56 ಲಕ್ಷ, ದಿನವಹಿ ಸಂತೆ 2.57 ಲಕ್ಷ ರೂ.ಗೆ ಹರಾಜಾಗಿತ್ತು. ಈ ಅವಧಿ ಮುಗಿದ ಕೂಡಲೇ ಹರಾಜು ಪ್ರಕ್ರಿಯೆ ನಡೆದಿದ್ದರೆ ಪುರಸಭೆಗೆ 5 ಲಕ್ಷಕ್ಕೂ ಅಧಿಕ ಆದಾಯ ಬರುತ್ತಿತ್ತು. ಪುರಸಭೆ ಆಡಳಿತ ಶೀಘ್ರ ಟೆಂಡರ್ ಕರೆದು ಆದಾಯ ಕ್ರೋಢೀಕರಣಕ್ಕೆ ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

    ಕರೊನಾ ಕಾರಣಕ್ಕೆ ಮಾನವೀಯತೆ ದೃಷ್ಟಿಯಿಂದ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಅಲ್ಲದೇ ನಿಯಮಾನುಸಾರ ಅಂಗಡಿ ಮಾಲೀಕರಿಗೆ ನೊಟೀಸ್ ನೀಡಿದ್ದೇವೆ. ಸದ್ಯದಲ್ಲೇ ಹರಾಜು ಪ್ರಕ್ರಿಯೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ. ಅಲ್ಲಿಂದ ಯಾವುದೇ ಆದೇಶ ಬಂದಿಲ್ಲ. ಬಂದ ಕೂಡಲೇ ಹರಾಜು ಕರೆಯಲಾಗುವುದು.
    > ಧರಣೇಂದ್ರಕುಮಾರ್ ಪುರಸಭೆ ಮುಖ್ಯಾಧಿಕಾರಿ ಮಲೇಬೆನ್ನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts