More

    ಪರಸ್ಥಳದಿಂದ ಬಂದವರ ಮಾಹಿತಿ ಕೊಡಿ

    ಮಲೇಬೆನ್ನೂರು: ಮಲೇಬೆನ್ನೂರು ಪಟ್ಟಣಕ್ಕೆ ಪರಸ್ಥಳದಿಂದ ಜನರು ಬಂದಿದ್ದರೆ ಸಂಬಂಧಿತ ವಾರ್ಡ್ ಸದಸ್ಯರು ಪುರಸಭೆಗಾಗಲಿ, ಪೊಲೀಸರಿಗಾಗಲಿ, ಆರೋಗ್ಯ ಇಲಾಖೆಗಾಗಲಿ ಮಾಹಿತಿ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಮನವಿ ಮಾಡಿದರು.

    ಪುರಸಭೆ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ತುರ್ತು ಸಭೆಯಲ್ಲಿ ಮಾತನಾಡಿ, ಮಾಸ್ಕ್ ಇಲ್ಲದೆ ಸಂಚರಿಸುವವರಿಗೆ 500 ರೂ. ದಂಡ ವಿಧಿಸಲಾಗುವುದು. 2 ನೇ ಬಾರಿ ಸಿಕ್ಕುಬಿದ್ದಲ್ಲಿ 1000 ರೂ. ದಂಡ ವಿಧಿಸಲಾಗುವುದು. ಲಾಕ್‌ಡೌನ್ ನಿಯಮ ಉಲ್ಲಂಘಿಸಿದರೆ ಭಾರತೀಯ ದಂಡ ಸಂಹಿತೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಉಪತಹಸೀಲ್ದಾರ್ ಆರ್.ರವಿ ಮಾತನಾಡಿ, ಪಟ್ಟಣದಲ್ಲಿ 65 ವರ್ಷಕ್ಕೂ ಮೇಲ್ಪಟ್ಟವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಬಿಎಲ್‌ಒಗಳು ಸಂಗ್ರಹಿಸುತ್ತಿದ್ದು, ಸಾರ್ವಜನಿಕರು ಸ್ಪಂದಿಸುತ್ತಿಲ್ಲ. ಪುರಸಭೆ ಸದಸ್ಯರು ತಮ್ಮ ವಾರ್ಡಿನ ಜನರಿಗೆ ಈ ಬಗ್ಗೆ ತಿಳಿವಳಿಕೆ ನೀಡಬೇಕೆಂದು ಕೋರಿದರು.

    ಪಿಎಎಸ್‌ಐ ಕಿರಣ್‌ಕುಮಾರ್ ಇದ್ದರು. ಸಭೆಯ ಪ್ರಾರಂಭದಲ್ಲಿ ಎರಡು ನಿಮಿಷ ಮೌನಾಚರಣೆ ಮೂಲಕ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts