More

    ಮಾದಪ್ಪನ ಹುಂಡಿಯಲ್ಲಿ ಯುಎಸ್​ ಡಾಲರ್​: ಲಾಕ್​ಡೌನ್​ ಹೊಡೆತದಿಂದ ಆದಾಯದಲ್ಲಿ ಭಾರಿ ಇಳಿಕೆ

    ಚಾಮರಾಜನಗರ: ಮಹಾಮಾರಿ ಕರೊನಾ ವೈರಸ್​ ಆರ್ಭಟದಿಂದ ಜಾಗತಿಕವಾಗಿ ಆರ್ಥಿಕತೆ ನೆಲಕಚ್ಚಿದ್ದು, ಇದರ ಬಿಸಿ ಮಲೆ ಮಹದೇಶ್ವರ ಬೆಟ್ಟದ ಮಾದಪನ್ನ ಸನ್ನಿಧಿಗೂ ತಟ್ಟಿದೆ.

    ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆ‌ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಪ್ರತಿ ತಿಂಗಳು ಒಂದು ಕೋಟಿಗೂ ಅಧಿಕ ಹಣ ಸಂಗ್ರಹವಾಗುತ್ತಿತ್ತು. ಆದರೆ, ಈ ಭಾರಿ 96,27,988 ರೂಪಾಯಿ ನಗದು ಜೊತೆಗೆ 19 ಗ್ರಾಂ ಚಿನ್ನ, 1 ಕೆ.ಜಿ 900 ಗ್ರಾಂ ಬೆಳ್ಳಿ ಮಾತ್ರ ಸಂಗ್ರಹವಾಗಿದೆ.

    ಇದನ್ನೂ ಓದಿ: ಇನ್​ಸ್ಟಾಗ್ರಾಂ ಮಿತ್ರನಿಗಾಗಿ ಮನೆ ಬಿಟ್ಟ ಬಾಲಕಿ: ಬಲೆಗೆ ಬೀಳುವಷ್ಟರಲ್ಲಿ ಬಚಾವ್​ ಆಗಿದ್ಹೇಗೆ?

    ಈ ಬಾರಿ 6 ಯುಎಸ್ ಡಾಲರ್ ಜೊತೆಗೆ ಒಂದು ಹಳೆಯ ಕೈಗಡಿಯಾರವನ್ನು ಹುಂಡಿಗೆ ಹಾಕಿರುವುದು ವಿಶೇಷವಾಗಿದೆ. ಫೆ.29 ರಂದು ಹುಂಡಿಯನ್ನು ಕೊನೆಯದಾಗಿ ಎಣಿಕೆ ಮಾಡಲಾಗಿತ್ತು. ಸತತ ಮೂರು ತಿಂಗಳು ಕರೊನಾ ವೈರಸ್​ನಿಂದ ಮಾದಪ್ಪನ ಸನ್ನಿಧಿಯನ್ನು ಬಂದ್ ಮಾಡಲಾಗಿತ್ತು. ಜೂನ್ 8 ರಂದು ಮುಂಜಾಗೃತ ಕ್ರಮಗಳೊದಿಂಗೆ ಮಾದಪ್ಪನ ಬಾಗಿಯಲು ತೆರೆಯಲಾಗಿತ್ತು.

    ಪ್ರತಿ ತಿಂಗಳ ಭಕ್ತರ ಕಾಣಿಕೆಗೆ ಹೋಲಿಸಿದರೆ ಈ ಬಾರಿ ಕಡಿಮೆ ಹಣ ಹುಂಡಿಯಲ್ಲಿ ಸಂಗ್ರಹವಾಗಿದ್ದು, ಕರೊನಾ ಭೀತಿಗೆ ಸಾಕ್ಷಿಯಾಗಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಮದುವೆಗೆ 4 ದಿನ‌ ಇರುವಾಗ್ಲೇ ಭಾವನಿಂದಲೇ ಮದುಮಗಳ ಹತ್ಯೆ: ಆರೋಪಿಯ ನಾಟಕ ಕೇಳಿದ್ರೆ ಶಾಕ್​ ಆಗ್ತೀರಾ!

    ರಜೆ ಬೇಕಾ, ತಗೊಳ್ಳಿ; ಸಂಬಳ ಮಾತ್ರ ಕೇಳ್ಬೇಡಿ; ನೌಕರರಿಗೆ ಕೆಎಸ್​ಆರ್​ಟಿಸಿ ಆಫರ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts