More

    ಸೇನಾ ಮುಖ್ಯಸ್ಥರ ಸಾವಿಗೆ ಕೆಲವರು ಸಂಭ್ರಮಿಸಿದ್ದನ್ನು ನೋಡಿ ಬೇಸತ್ತ ಖ್ಯಾತ ನಿರ್ದೇಶಕ, ಇಸ್ಲಾಂ ಧರ್ಮ ಬಿಟ್ಟು ಹಿಂದು ಧರ್ಮಕ್ಕೆ ಸೇರ್ಪಡೆ..

    ಕೇರಳ: ದೇಶದ ಸೇನಾ ಮುಖ್ಯಸ್ಥ ಸಿಡಿಎಸ್​ ಜನರಲ್ ಬಿಪಿನ್ ರಾವತ್ ಅವರು ಇತ್ತೀಚೆಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿದ್ದು, ಆ ಸಾವನ್ನೂ ಕೆಲವರು ಸಂಭ್ರಮಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಕೆಲವರ ಇಂಥ ನಡೆಗೆ ದೇಶಾದ್ಯಂತ ತೀವ್ರ ಅಸಮಾಧಾನ-ಆಕ್ರೋಶ ಕೂಡ ವ್ಯಕ್ತವಾಗಿತ್ತು.

    ದೇಶದೊಳಗಿರುವವರೇ ದೇಶದ ಸೇನಾ ಮುಖ್ಯಸ್ಥರ ಸಾವಿಗೆ ಅಗೌರವ ಸೂಚಿಸಿದ್ದನ್ನು ನೋಡಿ ನೊಂದ ಖ್ಯಾತ ಮಲಯಾಳಂ ನಿರ್ದೇಶಕ ಅಲಿ ಅಕ್ಬರ್​, ಆ ಕುರಿತು ತಮ್ಮ ವಿರೋಧವನ್ನು ತಾವು ಮತಾಂತರವಾಗುವ ಮೂಲಕ ಗಂಭೀರವಾಗಿ ಹಾಗೂ ತೀರಾ ವಿಭಿನ್ನವಾಗಿ ವ್ಯಕ್ತಪಡಿಸಿದ್ದಾರೆ. 58 ವರ್ಷದ ಈ ನಟ ತಮ್ಮ ಮತಾಂತರದ ನಿರ್ಧಾರವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ.

    ಇದನ್ನೂ ಓದಿ: ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ನಾನು ನನ್ನ ಹುಟ್ಟಿದ ಉಡುಗೆಯನ್ನು ಎಸೆಯುತ್ತಿದ್ದೇನೆ. ಇಂದಿನಿಂದ ನಾನು ಮುಸ್ಲಿಂ ಅಲ್ಲ, ನಾನು ಭಾರತೀಯ. ನಾನು ದೇಶದ್ರೋಹಿಗಳ ಜತೆ ಇರಲು ಬಯಸುವುದಿಲ್ಲ. ಕೇರಳದ ಸಂಸ್ಕೃತಿಯನ್ನು ಹಚ್ಚಿಕೊಂಡು ಹತ್ಯೆಗೀಡಾದವರು ರಾಮಸಿಂಹನ್. ಅದೇರೀತಿ ಇನ್ನು ಮುಂದೆ ನಾನು ರಾಮ್​ ಸಿಂಗ್ ಎಂದು ಕರೆಯಲ್ಪಡುತ್ತೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಕೋಲಾರದಲ್ಲಿ ಬಲವಂತವಾಗಿ ಮತಾಂತರಿಸಲು ಯತ್ನ; ನಾಲ್ವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು..

    ಅಲಿ ಅಕ್ಬರ್ 20ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಬಿಜೆಪಿಯ ಕೇರಳ ರಾಜ್ಯ ಸಮಿತಿಯ ಸದಸ್ಯರಾಗಿದ್ದ ಅಲಿ ಅಕ್ಬರ್, ಕೆಲವು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಆ ಹುದ್ದೆಯನ್ನು ತ್ಯಜಿಸಿದ್ದರು.

    ಮತ್ತೆ ದೇವರ ಮೊರೆ ಹೋದ ‘ಏಕ್​ಲವ್​ಯಾ’; ಬಿಡುಗಡೆ ಆಯ್ತು ‘ಒಂದು ಊರಲಿ.. ಕೊನೇ ಬೀದಿಲಿ…’

    ದೊಣ್ಣೆಯಿಂದ ಹೊಡೆದು ಮಗನನ್ನೇ ಕೊಂದ ತಂದೆ!; ಬಳಿಕ ಶವ ಮನೆಯಲ್ಲಿಟ್ಟು ಜಮೀನಿಗೆ ತೆರಳಿ ಕೃಷಿಯಲ್ಲಿ ತೊಡಗಿದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts