More

    ಮಕ್ಕಳನ್ನು ನಲಿಸುತ್ತಾ ಕಲಿಸುವ ಮಕ್ಕಳವಾಣಿ ಯೂಟ್ಯೂಬ್​ ಚಾನಲ್​; ಸಿಎಂ ಬಿ.ಎಸ್​. ಯಡಿಯೂರಪ್ಪ ಅವರಿಂದ ಚಾಲನೆ

    ಬೆಂಗಳೂರು: ಶಿಕ್ಷಣ ಇಲಾಖೆ ಮಕ್ಕಳನ್ನು ನಲಿಸಲು ಮತ್ತು ಅವರಿಗೆ ಕಲಿಸಲು ಸಿದ್ಧಪಡಿಸಿರುವ ಮಕ್ಕಳವಾಣಿ ಯೂಟ್ಯೂಬ್​ ಚಾನಲ್​ಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ಗುರುವಾರ ಚಾಲನೆ ನೀಡಿದರು.

    ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರಾದ ಸುರೇಶ್​ಕುಮಾರ್​, ಶ್ರೀರಾಮುಲು, ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರ್​ ಗೌಡ ಪಾಟೀಲ್​ ಉಪಸ್ಥಿತಿಯಲ್ಲಿ ಚಾನಲ್​ಗೆ ಚಾಲನೆ ನೀಡಲಾಯಿತು.

    ರಜೆಯಲ್ಲಿ ಮಕ್ಕಳಿಗೆ ಮೋಜು: ಕೋವಿಡ್​ 19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮೇ 3ರವರೆಗೆ ಲಾಕ್​ಡೌನ್​ ಘೋಷಿಸಿದೆ. ಇದರಿಂದಾಗಿ ಮಕ್ಕಳು ಸೇರಿ ದೊಡ್ಡವರು ಕೂಡ ಮನೆಗಳಲ್ಲಿ ಬಂದಿಯಾಗಿದ್ದಾರೆ. ಜತೆಗೆ ಬೇಸಿಗೆ ರಜೆ ಇರುವ ಕಾರಣ, ಇವರೆಲ್ಲರನ್ನೂ ಕ್ರಿಯಾಶೀಲವಾಗಿರಿಸಲು ಶಿಕ್ಷಣ ಇಲಾಖೆ ನಲಿಯೋಣ, ಕಲಿಯೋಣ ಎಂಬ ಧ್ಯೇಯವಾಕ್ಯದಡಿ ಮಕ್ಕಳವಾಣಿ ಯೂಟ್ಯೂಬ್​ ಚಾನಲ್​ಗೆ ಚಾಲನೆ ನೀಡಿದೆ.

    ಕತೆ, ಹಾಡು, ಚಿತ್ರಕಲೆ, ಸಂಗೀತ, ಕಿರುನಾಟಕ, ಕ್ರಾಫ್ಟ್​, ಒಗಟು, ಗಾದೆ, ಮ್ಯಾಜಿಕ್​, ಪದಬಂಧ ಇತ್ಯಾದಿಗಳನ್ನು ಚಾನಲ್​ನಲ್ಲಿ ಪ್ರಸಾರ ಮಾಡಲಾಗುತ್ತದೆ. ರೇಡಿಯೋ/ಟಿವಿ/ಇಂಟರ್​ನೆಟ್​ನಲ್ಲಿ ಪ್ರಸಾರ ಮಾಡಲು ಸೂಕ್ತವಾಗುವ ರೀತಿಯಲ್ಲಿ ಈ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

    ಪ್ರತಿದಿನ ಬೆಳಗ್ಗೆ 10.30ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ಅನುವಾಗುವಂತೆ ಇಂಟರ್​ನೆಟ್​ ಸಂಪರ್ಕ ಇರುವ ಸ್ಮಾರ್ಟ್​ಪೋನ್​ಗಳನ್ನು ಕೊಡಬೇಕು ಎಂದು ಪಾಲಕರಿಗೆ ಇಲಾಖೆ ಸೂಚಿಸಿದೆ.

    ಕಾರ್ಯಕ್ರಮಗಳನ್ನು ಕೊಡಿ: ಮಕ್ಕಳಿಗೆ ಕಲಿಯಲು ಅನುವಾಗುವಂತೆ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವಂತೆ ಹಾಗೂ ಮನರಂಜನೆ ಜತೆಗೆ ಕಲಿಕೆಗೂ ಅವಕಾಶ ನೀಡುವಂಥ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಡುವಂತೆ ಶಿಕ್ಷಕರು ಮತ್ತು ಶಿಕ್ಷಣಾಸಕ್ತರಲ್ಲಿ ಇಲಾಖೆ ಮನವಿ ಮಾಡಿಕೊಂಡಿದೆ.

    ಇವರೆಲ್ಲರೂ ಕೊಡುವ ಸಾಮಗ್ರಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಅವುಗಳ ನಾವೀನ್ಯತೆ ಮತ್ತು ಸಮಂಜಸತೆಯನ್ನು ಖಚಿತಪಡಿಸಿಕೊಂಡು ಪ್ರಸಾರ ಮಾಡಲಾಗುವುದು. ಇದಕ್ಕಾಗಿ ಸಂಪಾದಕೀಯ ಮಂಡಳಿಯನ್ನೂ ರಚಿಸಿರುವುದಾಗಿ ಹೇಳಿದೆ.

    ಮೊದಲಿಗೆ ಅರ್ಧ ಗಂಟೆ ಪ್ರಸಾರ: ಎಲ್ಲ ವಯೋಮಾನದವರಿಗೆ ಅನುಕೂಲವಾಗುವಂತೆ ಮಕ್ಕಳವಾಣಿ ಯೂಟ್ಯೂಬ್​ ಚಾನಲ್​ನಲ್ಲಿ ಮೊದಲಿಗೆ ಕೇವಲ ಅರ್ಧ ಗಂಟೆ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ. ನಂತರದಲ್ಲಿ ಶಾಲೆಗಳು ಮರುಆರಂಭವಾಗುವವರೆಗೆ ಒಂದು ಗಂಟೆ ಕಾರ್ಯಕ್ರಮ ಪ್ರಸಾರ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    ಚಂದಾದಾರರಾಗುವುದು ಹೀಗೆ: ಮಕ್ಕಳವಾಣಿ ನಲಿಯೋಣ ಕಲಿಯೋಣ ಯೂಟ್ಯೂಬ್​ ಚಾನಲ್​ಗೆ ಚಂದಾದಾರಾಗಲು
    https://www.youtube.com/channel/UCDaVbK0F5b7y4hgSZrTwZNg ಲಿಂಕ್​ ಆಯ್ಕೆ ಮಾಡಿಕೊಂಡು ಮುಂದುವರಿಯಬೇಕು.

    ಕಾರ್ಯಕ್ರಮ ಸಲ್ಲಿಸುವುದು ಬಗೆ: ಶಿಕ್ಷಕರು ಮತ್ತು ಶಿಕ್ಷಣಾಸಕ್ತರು ಸಿದ್ಧಪಡಿಸಿರುವ ಕಾರ್ಯಕ್ರಮದ 5 ರಿಂದ 6 ನಿಮಿಷಗಳ ವಿಡಿಯೋಗಳನ್ನು [email protected] ಇಮೇಲ್​ ವಿಳಾಸಕ್ಕೆ ಅಥವಾ ವಾಟ್ಸಪ್ ಇಲ್ಲವೇ ಟೆಲಿಗ್ರಾಂ (ಸಂಖ್ಯೆ:9449432614) ಮೂಲಕ ಸಲ್ಲಿಸಬಹುದು.

    ಫಲ ನೀಡಿದ ಲಾಕ್​ಡೌನ್: 3 ವಾರಗಳ ನಿರ್ಬಂಧ ಬಳಿಕ ವೈರಸ್ ಏರಿಕೆ ನಿಧಾನಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts