More

    ಫಲ ನೀಡಿದ ಲಾಕ್​ಡೌನ್: 3 ವಾರಗಳ ನಿರ್ಬಂಧ ಬಳಿಕ ವೈರಸ್ ಏರಿಕೆ ನಿಧಾನಗತಿ

    ಭಾರತದಲ್ಲಿ ಲಾಕ್​ಡೌನ್ ಜಾರಿ ಮಾಡಿ ಮೂರು ವಾರಗಳಾಗಿದ್ದು, ಕರೊನಾ ವೈರಸ್ ಹರಡುವಿಕೆ ತುಸು ನಿಯಂತ್ರಣದಲ್ಲಿದೆ. ವೈರಾಣು ಹರಡುವುದನ್ನು ತಡೆಯುವಲ್ಲಿ ಕೇರಳ ರಾಜ್ಯ ದೇಶಕ್ಕೆ ಮಾದರಿಯಾಗಿದ್ದರೆ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ನಿರ್ಬಂಧಗಳ ಹೊರತಾಗಿಯೂ ಪ್ರಕರಣಗಳು ಹೆಚ್ಚಿವೆ. ವೈರಸ್ ಬಾಧಿತ 25 ದೇಶಗಳ ಪೈಕಿ ಭಾರತ ಸಹಿತ 16 ರಾಷ್ಟ್ರಗಳಲ್ಲಿ ಕನಿಷ್ಠ ಮೂರು ವಾರಗಳ ಲಾಕ್​ಡೌನ್ ಘೊಷಿಸಲಾಗಿದೆ. ಎಲ್ಲ ದೇಶಗಳ ಹೋಲಿಕೆ ಮಾಡಿದಾಗ, ಸೋಂಕು ಹರಡುವುದನ್ನು ನಿಧಾನಗೊಳಿಸುವಲ್ಲಿ ಭಾರತ ಯಶಸ್ವಿಯಾಗಿರುವುದು ಕಂಡುಬರುತ್ತದೆ. ಮಾತ್ರವಲ್ಲದೆ ಮೇ 3ರ ವರೆಗೆ ನಿರ್ಬಂಧ ವಿಸ್ತರಣೆಯಾಗಿರುವುದರಿಂದ ಮುಂದೆ ಮಾಡಬೇಕಾದುದೇನು ಎಂಬ ವಿಚಾರವೂ ಜನರ ಮುಂದಿದೆ. ಹೆಚ್ಚು ತೊಂದರೆಗೊಳಗಾದ 25 ದೇಶಗಳ ಪೈಕಿ ನಾಲ್ಕು ದೇಶಗಳು ಲಾಕ್​ಡೌನ್ ಜಾರಿ ಮಾಡಲಿಲ್ಲ. ಅವುಗಳಲ್ಲಿ ದಕ್ಷಿಣ ಕೊರಿಯಾ ಮತ್ತು ಸ್ವೀಡನ್​ನಲ್ಲಿ ಸೋಂಕಿನ ಹೊಸ ಪ್ರಕರಣಗಳ ದರ ನಿಯಂತ್ರಿಸುವಲ್ಲಿದೆ. ಜಪಾನ್​ನ ಸೋಂಕಿನ ದರ ಏರಿದೆ. ಟರ್ಕಿಯ ಸೋಂಕಿನ ದರ ನಾಟಕೀಯ ರೀತಿಯಲ್ಲಿ ಇಳಿಮುಖವಾದಂತೆ ಕಂಡರೂ, ಅಲ್ಲಿನ ಮೂಲ ದರ ಹೆಚ್ಚಿದ್ದರಿಂದ ಸಂಖ್ಯೆ ಜಾಸ್ತಿಯಾಗಿತ್ತು. ಭಾರತ ಲಾಕ್​ಡೌನ್ ವಿಧಿಸುವುದಕ್ಕೂ ಏಳು ದಿನಗಳ ಹಿಂದೆ ಅಲ್ಲಿ 47 ಪ್ರಕರಣಗಳಿದ್ದವು. ಅದೀಗ 61,000ಕ್ಕೆ ತಲುಪಿದೆ.

    ಏಳನೇ ಸ್ಥಾನದಲ್ಲಿ ಭಾರತ

    ಮೂರು ವಾರಗಳ ಲಾಕ್​ಡೌನ್ ನಂತರ ಭಾರತದಲ್ಲಿ ಹೊಸ ಪ್ರಕರಣಗಳ ದೈನಿಕ ಏರಿಕೆಯಲ್ಲಿ ಇಳಿಮುಖವಾಗಿದೆ. ಕನಿಷ್ಠ 3 ವಾರ ಲಾಕ್​ಡೌನ್ ಆಗಿರುವ 16 ದೇಶಗಳಲ್ಲಿ ದೈನಿಕ ಏರಿಕೆಯಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ.

    ಮುಂದಿರುವ ಸವಾಲು

    ಎರಡು ವಾರಗಳ ಹಿಂದೆ 10,000ಕ್ಕೂ ಹೆಚ್ಚಿನ ಸೋಂಕು ಪ್ರಕರಣ ದಾಟಿದ್ದ ದೇಶಗಳ ಅಂಕಿಸಂಖ್ಯೆ ವಿಶ್ಲೇಷಿಸಿದರೆ ಭಾರತ ಸೋಂಕಿನ ದರವನ್ನು ಇನ್ನಷ್ಟು ಕಡಿಮೆ ಮಾಡಬೇಕಿದೆ. ಈಗಿನ ದರದಲ್ಲೇ ಮುಂದುವರಿದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಮುಂದಿನ ಹದಿನೈದು ದಿನಗಳಲ್ಲಿ 60,000 ದಾಟುವ ಸಂಭವವಿದೆ. ಸೋಂಕಿತರ ಸಂಖ್ಯೆ 10,000 ದಾಟಿದ ವಾರದಲ್ಲಿ ಭಾರತದ ದೈನಿಕ ಸರಾಸರಿ ಏರಿಕೆ ಪ್ರಮಾಣ ಶೇಕಡಾ 13.1 ಆಗಿತ್ತು.

    ಶೂನ್ಯದಿಂದ ಏರಿಕೆ

    ಲಾಕ್​ಡೌನ್ ಘೊಷಣೆಗೆ ಮುನ್ನ ಮ.ಪ್ರದೇಶ, ಬಿಹಾರ, ಪ. ಬಂಗಾಳ, ಗುಜರಾತ್​ನಲ್ಲಿ ಒಂದೂ ಪ್ರಕರಣಗಳಿರಲಿಲ್ಲ, ಅಂದರೆ ಶೂನ್ಯವಾಗಿತ್ತು. ಆದರೆ ಲಾಕ್​ಡೌನ್​ನ ಮೂರು ವಾರಗಳಲ್ಲಿ ಅಲ್ಲಿ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡಿದೆ.

    ಭಾರತದಲ್ಲಿ ಸೋಂಕಿನ ಸಂಖ್ಯೆ

    • ಲಾಕ್​ಡೌನ್ ಘೊಷಿಸುವ ಒಂದು ವಾರದ ಮೊದಲು: 125
    • ಲಾಕ್​ಡೌನ್ ದಿನ: 492
    • ಲಾಕ್​ಡೌನ್​ನ ಮೂರು ವಾರಗಳ ನಂತರ: 10,453

    ಫಲ ನೀಡಿದ ಲಾಕ್​ಡೌನ್: 3 ವಾರಗಳ ನಿರ್ಬಂಧ ಬಳಿಕ ವೈರಸ್ ಏರಿಕೆ ನಿಧಾನಗತಿ

    ಇನ್ನೂ ಎರಡು ವರ್ಷ ಕಾಯ್ದುಕೊಳ್ಳಬೇಕಾಗುತ್ತೆ ಸಾಮಾಜಿಕ ಅಂತರ: ವಿಜ್ಞಾನಿಗಳ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts