ಇನ್ನೂ ಎರಡು ವರ್ಷ ಕಾಯ್ದುಕೊಳ್ಳಬೇಕಾಗುತ್ತೆ ಸಾಮಾಜಿಕ ಅಂತರ: ವಿಜ್ಞಾನಿಗಳ ಅಭಿಮತ

ನವದೆಹಲಿ: ಮುಂದಿನ ತಿಂಗಳು 3ನೇ ತಾರೀಖು ಮುಗಿಯುತ್ತಿದ್ದಂತೆಯೇ ಈ ಲಾಕ್‌ಡೌನು, ಸಾಮಾಜಿಕ ಅಂತರ ಮುಂತಾದವೆಲ್ಲ ಅಂತ್ಯವಾಗಿಬಿಡುತ್ತವೆ ಎಂದುಕೊಂಡಿದ್ದೀರಾ? ಹಾಗೇನಾದರೂ ಅಂದುಕೊಂಡಿದ್ದರೆ ತಪ್ಪು. ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದರೆ ಕೇಂದ್ರ ಸರ್ಕಾರ ಲಾಕ್‌ಡೌನ್ ಅನ್ನು ಹಿಂತೆಗೆದುಕೊಳ್ಳಬಹುದು ಅಥವಾ ಸಡಿಲಿಸಬಹುದು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಮಾತ್ರ ಈಗಲೇ ನಿಲ್ಲುವುದಿಲ್ಲ. ಹಾಗಾದರೆ ಎಲ್ಲಿಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು? ‘‘ಕರೊನಾ ತಡೆಗಟ್ಟಲು 2022ರವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಬಹುದು’’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈಗಾಗಲೇ ಬಹುತೇಕ ವಿಶ್ವವನ್ನು ಆವರಿಸಿರುವ ಈ ವೈರಸ್ … Continue reading ಇನ್ನೂ ಎರಡು ವರ್ಷ ಕಾಯ್ದುಕೊಳ್ಳಬೇಕಾಗುತ್ತೆ ಸಾಮಾಜಿಕ ಅಂತರ: ವಿಜ್ಞಾನಿಗಳ ಅಭಿಮತ