More

    ಇನ್ನೂ ಎರಡು ವರ್ಷ ಕಾಯ್ದುಕೊಳ್ಳಬೇಕಾಗುತ್ತೆ ಸಾಮಾಜಿಕ ಅಂತರ: ವಿಜ್ಞಾನಿಗಳ ಅಭಿಮತ

    ನವದೆಹಲಿ: ಮುಂದಿನ ತಿಂಗಳು 3ನೇ ತಾರೀಖು ಮುಗಿಯುತ್ತಿದ್ದಂತೆಯೇ ಈ ಲಾಕ್‌ಡೌನು, ಸಾಮಾಜಿಕ ಅಂತರ ಮುಂತಾದವೆಲ್ಲ ಅಂತ್ಯವಾಗಿಬಿಡುತ್ತವೆ ಎಂದುಕೊಂಡಿದ್ದೀರಾ?

    ಹಾಗೇನಾದರೂ ಅಂದುಕೊಂಡಿದ್ದರೆ ತಪ್ಪು. ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದರೆ ಕೇಂದ್ರ ಸರ್ಕಾರ ಲಾಕ್‌ಡೌನ್ ಅನ್ನು ಹಿಂತೆಗೆದುಕೊಳ್ಳಬಹುದು ಅಥವಾ ಸಡಿಲಿಸಬಹುದು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಮಾತ್ರ ಈಗಲೇ ನಿಲ್ಲುವುದಿಲ್ಲ.

    ಹಾಗಾದರೆ ಎಲ್ಲಿಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು? ‘‘ಕರೊನಾ ತಡೆಗಟ್ಟಲು 2022ರವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಬಹುದು’’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    ಈಗಾಗಲೇ ಬಹುತೇಕ ವಿಶ್ವವನ್ನು ಆವರಿಸಿರುವ ಈ ವೈರಸ್ 2025ರ ಒಳಗೆ ಮತ್ತೊಮ್ಮೆ ಬರಬಹುದು. ಹಾಗೆ ಎರಡನೇ ಬಾರಿಗೆ ಬರುವ ವೈರಸ್ ಈಗ ಬೀರಿರುವ ಪರಿಣಾಮಕ್ಕಿಂತ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.

    ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಪತ್ತೆ ಹಚ್ಚುವಿರಾ?: ನಿಮ್ಮಕಣ್ಣಿನ ದೃಷ್ಟಿ, ತಾಳ್ಮೆಗೊಂದು ಸವಾಲು!

    ಮಾರ್ಚ್ ತಿಂಗಳ ಪಿಎಫ್ ವಂತಿಗೆ ಅವಧಿ ವಿಸ್ತರಣೆ: ಉದ್ಯೋಗಸ್ಥರು, ಉದ್ಯೋಗದಾತರು ಇಬ್ಬರೂ ನಿರಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts