More

    ಯುವ ಮೊದಲ ಚಿತ್ರದ ಟೀಸರ್ ಮೇಕಿಂಗ್ ವಿಡಿಯೋ ಹೀಗಿದೆ ನೋಡಿ …

    ಡಾ. ರಾಜಕುಮಾರ್ ಮೊಮ್ಮಗ, ರಾಘವೇಂದ್ರ ರಾಜಕುಮಾರ್ ಮಗ ಯುವ ರಾಜಕುಮಾರ್ ಅಭಿನಯದ ಮೊದಲ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವಾದ ಏಪ್ರಿಲ್ 24ರಂದು ಈ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿತ್ತು. ಈ ಮಧ್ಯೆ ಚಿತ್ರದ ಟೀಸರ್‌ನ ಚಿತ್ರೀಕರಣವಾಗಿದ್ದು, ಆ ಟೀಸರ್‌ನ ಮೇಕಿಂಗ್ ವಿಡಿಯೋ ಇಂದು ಬಿಡುಗಡೆ ಮಾಡಲಾಗಿದೆ.

    ಇದನ್ನೂ ಓದಿ: ಪೊಗರು ‘ಖರಾಬು’ ಹಾಡಿಗೆ ವಿದೇಶಿ ಪೈಲ್ವಾನರ ಸ್ಟೆಪ್

    ಯುವ ಅಭಿನಯದ ಮೊದಲ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ಈ ಚಿತ್ರವರು ‘ವೈಆರ್-01’ ಎಂದು ಕರೆಯಲಾಗುತ್ತಿದೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಪುನೀತ್ ರುದ್ರನಾಗ್. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪುನೀತ್‌ಗೆ ಗಿಫ್ಟ್​ ಆಗಿ ಚಿತ್ರತಂಡವು ಈ ಟೀಸರ್ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ, ಅದನ್ನು ಯುವ ರಾಜಕುಮಾರ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    ‘ನನ್ನ ಗುರುಗಳು ಹಾಗೂ ನನ್ನ ನಿರ್ದೇಶಕರಾದ ಪುನೀತ್ ರುದ್ರನಾಗ್ ಸಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ವಿಶ್ ಮಾಡುತ್ತಾ ಯುವ ಈ ವಿಡಿಯೋ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಅಮ್ಮಂದಿರ ದಿನಕ್ಕೆ ‘ಕೆಜಿಎಫ್​’ ತಂಡದಿಂದ ಹೀಗೊಂದು ವಿಶೇಷ ನಮನ

    ಪುನೀತ್ ಅವರ ಹುಟ್ಟುಹಬ್ಬವಾದ್ದರಿಂದ, ಹೆಚ್ಚಾಗಿ ಅವರನ್ನೇ ಈ ವಿಡಿಯೋದಲ್ಲಿ ಫೋಕಸ್ ಮಾಡಲಾಗಿದೆ. ಅವರು ಸೆಟ್‌ನಲ್ಲಿ ಹೇಗೆ ಕೆಲಸ ಮಾಡುತ್ತಿದ್ದರು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ವಿಶೇಷವೆಂದರೆ, ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಸಹ ಸೆಟ್‌ಗೆ ಭೇಟಿ ಕೊಟ್ಟು ಚಿತ್ರತಂಡಕ್ಕೆ ಶುಭ ಹಾರೈಸಿ ಹೋಗಿದ್ದಾರೆ. ಸೆಟ್‌ನಲ್ಲಿ ಪುನೀತ್ ಮತ್ತು ರಾಘವೇಂದ್ರ ರಾಜಕುಮಾರ್ ಇರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

    ಇನ್ನು ‘ವೈಆರ್ – 01’ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳೆಲ್ಲಾ ಮುಗಿದಿದ್ದು, ಲಾಕ್‌ಡೌನ್ ಮುಗಿದ ನಂತರ ಬಹುಶಃ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

    ಯುವ ರಾಜಕುಮಾರ್​ ಅಭಿನಯದ ಮೊದಲ ಚಿತ್ರದ ಟೀಸರ್​ ಮೇಕಿಂಗ್​ ವೀಡಿಯೋ

    ಯುವ ರಾಜಕುಮಾರ್​ ಅಭಿನಯದ ವೈಆರ್​-01 ಚಿತ್ರದ ಫಸ್ಟ್​ ಲುಕ್​ ಪೋಸ್ಟರ್ ಡಾ. ರಾಜಕುಮಾರ್​ ಅವರ ಹುಟ್ಟುಹಬ್ಬದಂದು​ ಬಿಡುಗಡೆಯಾಗಿದೆ. ಚಿತ್ರದ ಟೀಸರ್​ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇದೀಗ ಚಿತ್ರದ ನಿರ್ದೇಶಕ ಪುನೀತ್​ ರುದ್ರನಾಗ್​ ಅವರ ಹುಟ್ಟುಹಬ್ಬದಂದು ಅವರಿಗೆ ಶುಭ ಕೋರುತ್ತಾ ಟೀಸರ್​ ಮೇಕಿಂಗ್ ವೀಡಿಯೋ ಹಂಚಿಕೊಂಡಿದ್ದಾರೆ ಯುವ ರಾಜಕುಮಾರ್​.

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮೇ 10, 2020

    ಅನ್ನಪೂರ್ಣ ಕೈ ಹಿಡಿದ ನಿರ್ದೇಶಕ ಎ.ಪಿ ಅರ್ಜುನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts