More

    ದಣಿದ ದೇಹ, ಮನಸ್ಸುಗಳಿಗೆ ವಿಶ್ರಾಂತಿ ನೀಡುವ ಮಕರಾಸನ

    ಸೊಂಟ ನೋವು ನಿಯಂತ್ರಣಕ್ಕೆ ಉಪಯುಕ್ತವಾದ ಮತ್ತು ವಿಶ್ರಾಂತಿದಾಯಕವಾದ ಯೋಗಾಸನವೆಂದರೆ, ಮಕರಾಸನ. ಸಂಸ್ಕೃತದಲ್ಲಿ ಮಕರ ಎಂದರೆ ಮೊಸಳೆ ಎಂದಾಗಿದೆ. ಈ ಆಸನದ ಭಂಗಿಯು ಮೊಸಳೆ ನೀರಿನಲ್ಲಿ ತೇಲುತ್ತಿರುವ ಭಂಗಿಗೆ ಹೋಲುವುದರಿಂದ ಮಕರಾಸನ ಎಂದು ಹೆಸರಿಡಲಾಗಿದೆ. ಮಕರಾಸನದಲ್ಲಿ ಕಾಲುಗಳು ಹಾಗೂ ಹಿಂಭಾಗದ ಸ್ನಾಯುಗಳು ನೇರವಾಗಿದ್ದು, ದೇಹ ಸಹಜವಾಗಿ ಹಗುರವಾಗುತ್ತದೆ.

    ಇದೊಂದು ಪೂರ್ತಿ ವಿಶ್ರಾಂತಿದಾಯಕ ಭಂಗಿಯಾಗಿದೆ. ಈ ಆಸನದಿಂದ ಮುಖ್ಯವಾಗಿ ದೇಹ ಮನಸ್ಸುಗಳಿಗೆ ವಿಶ್ರಾಂತಿಯೂ, ನೆಮ್ಮದಿಯೂ ದೊರೆಯುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಸುಲಭವಾಗುತ್ತದೆ. ಈ ಆಸನದಿಂದ ಕೆಲಸ ಮಾಡಿ ಆಯಾಸವಾದವರಿಗೆ ಹೊಸ ಹುರುಪು, ಹೊಸ ಚೈತನ್ಯ ಉಂಟಾಗುತ್ತದೆ.

    ಇದನ್ನೂ ಓದಿ: ಅಣ್ಣಮ್ಮದೇವಿ ಭಕ್ತೆಯ ಸರ ಕದ್ದ ಹಳೇ ಕಳ್ಳ, ಜೈಲು ಪಾಲು; 300 ಗ್ರಾಂ ಚಿನ್ನಾಭರಣ ಜಪ್ತಿ

    ಪ್ರಯೋಜನಗಳು: ಸ್ಲಿಪ್ ಡಿಸ್ಕ್, ಸ್ಪಾಂಡಿಲೈಟಿಸ್ ಸಯಾಟಿಕಾ ಸಮಸ್ಯೆಯ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಎಲ್ಲಾ ಬೆನ್ನು ಮೂಳೆಯ ಸಂಬಂಧಿತ ಸಮಸ್ಯೆಗಳಿಗೆ ಈ ಆಸನ ಪ್ರಯೋಜನಕಾರಿ. ಅಸ್ತಮಾ, ಮೊಣಕಾಲು ನೋವು ಹಾಗೂ ಶ್ವಾಸಕೋಶದ ಸಮಸ್ಯೆ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ದಣಿದ ದೇಹಕ್ಕೂ, ಮನಸ್ಸಿಗೂ ಬಲು ಬೇಗನೇ ವಿಶ್ರಾಂತಿ ದೊರಕುತ್ತದೆ. ನಿದ್ರಾ ಹೀನತೆಯ ಸಮಸ್ಯೆ ಇರುವವರಿಗೆ ಈ ಆಸನ ಪ್ರಯೋಜನಕಾರಿಯಾಗಿದೆ.

    ಅಭ್ಯಾಸ ಕ್ರಮ : ಜಮಖಾನದ ಮೇಲೆ ಕವುಚಿ ಮಲಗಬೇಕು. ಆಮೇಲೆ ಕಾಲುಗಳನ್ನು ಎರಡು ಅಡಿಯಷ್ಟು ವಿಸ್ತರಿಸಬೇಕು. ಕಾಲು ಬೆರಳುಗಳು ಹೊರ ಮುಖವಾಗಿಯೂ ಇದ್ದು ನೆಲಕ್ಕೆ ತಾಗಿರಬೇಕು. ಎರಡು ಕೈಗಳನ್ನು ಕಟ್ಟಿ ಗಲ್ಲವನ್ನು ಕೈಗಳ ಮೇಲಿರಿಸಬೇಕು.ಎಡ ಅಥವಾ ಬಲ ಬದಿಯ ತಲೆ, ಕೆನ್ನೆಯನ್ನು ಕೈಗಳ ಮೇಲಿರಿಸಬಹುದಾಗಿದೆ. ಈ ಸ್ಥಿತಿಯಲ್ಲಿ 3 ರಿಂದ 5 ನಿಮಿಷಗಳ ಕಾಲ ಸಹಜ ಉಸಿರಾಟ ನಡೆಸುತ್ತಿರಬೇಕು. ಹಾಗೂ ಶರೀರವನ್ನು ಪೂರ್ತಿ ಸಡಿಲಗೊಳಿಸಬೇಕು. ಆಸನದಲ್ಲಿ ನಿದ್ರೆ ಮಾಡದೆ, ಎಚ್ಚರದ ಸ್ಥಿತಿಯಲ್ಲಿರಬೇಕು. ಕಣ್ಣು ಮುಚ್ಚಿ ಉಸಿರಿನ ಕಡೆಗೆ ಗಮನ ಹರಿಸಬೇಕು. ನಂತರ ನಿಧಾನವಾಗಿ ಮೇಲೇಳಬೇಕು.

    ಇದನ್ನೂ ಓದಿ: ಅತ್ಯಾಚಾರಿಗಳಿಗೆ ದುಬೈ ಮಾದರಿ ಶಿಕ್ಷೆಯಾಗಲಿ: ಸಚಿವ ಆನಂದ್ ಸಿಂಗ್

    ರಕ್ತದೊತ್ತಡ, ಮಧುಮೇಹ, ಮನಸ್ಸಿನ ಒತ್ತಡ, ಸೊಂಟ ನೋವು ಮತ್ತು ಬೆನ್ನು ನೋವು ಇದ್ದವರು ಈ ಆಸನವನ್ನು ದಿನಕ್ಕೆ 3 ರಿಂದ 4 ಬಾರಿ ಮಾಡಬೇಕು. ಖಾಲಿ ಹೊಟ್ಟೆಯಲ್ಲಿದ್ದ ವೇಳೆ ಅಭ್ಯಾಸ ಮಾಡಬೇಕು. ಗಂಭೀರ ಬೆನ್ನು ನೋವು, ಮೊಣಕಾಲು ಗಾಯವನ್ನು ಹೊಂದಿದ್ದರೆ ಈ ಆಸನ ಅಭ್ಯಾಸ ಮಾಡುವುದು ಬೇಡ. ಕುತ್ತಿಗೆ ನೋವು ಅಥವಾ ಗಾಯದಿಂದ ಬಳಲುತ್ತಿರುವವರು ಈ ಆಸನವನ್ನು ಜಾಗರೂಕತೆಯಿಂದ ಅಭ್ಯಾಸ ಮಾಡಬೇಕು.

    ಬೆನ್ನು, ಸೊಂಟ ಬಿಗಿತವಿದ್ದರೆ ಈ ಸರಳ ಯೋಗಾಸನ ಮಾಡಿ

    ಕಾಲಿನ ಮಾಂಸಖಂಡಗಳನ್ನು ಪಳಗಿಸುವ ವೀರಭದ್ರಾಸನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts