More

    ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಕರಣ; FSL ವರದಿಯಲ್ಲಿ ಬಹಿರಂಗವಾಯ್ತು ಸ್ಫೋಟಕ ಮಾಹಿತಿ

    ಬೆಂಗಳೂರು: ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ್ದ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಂಬ್​ ಸ್ಫೋಟ ಪ್ರಕರಣಕ್ಕೆ ಮೇಜರ್​ ಟ್ವಿಸ್ಟ್​ ಸಿಕ್ಕಿದ್ದು, FSL ವರದಿಯಿಂದ ಆಘಾತಕಾರಿ ಅಂಶ ಒಂದು ಬೆಳಕಿಗೆ ಬಂದಿದೆ.

    ಬಾಂಬರ್​ ಏಕಕಾಲಕ್ಕೆ ಎರಡು ಬಾಂಬ್​ ಸ್ಫೋಟಿಸಲು ಪ್ಲ್ಯಾನ್​ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಟೈಮರ್​ ಫಿಕ್ಸ್​ ಮಾಡುವಾಗ 5 ಸೆಕೆಂಡ್​ ಅಂತರದ ಬಗ್ಗೆ ಗೊತ್ತಿಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂಬುದು FSL ವರದಿಯಲ್ಲಿ ಬಹಿರಂಗವಾಗಿದೆ.

    Rameshwaram Suspect

    ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಆಘಾತ; ಎನ್​ಡಿಎ ಜತೆ ಕೈ ಜೋಡಿಸಿದ ಆರ್​ಎಲ್​ಡಿ

    ಒಂದು ವೇಳೆ ಒಂದೇ ವೇಳೆ 2 ಬಾಂಬ್ ಸ್ಫೋಟಗೊಂಡಿದ್ದರೆ ಕಟ್ಟಡವೇ ನೆಲಸಮ ಆಗುವುದರೊಂದಿಗೆ ಸಾವು-ನೋವು ಹೆಚ್ಚಾಗುವ ಸಾಧ್ಯತೆ ಇತ್ತು ಎಂಬ ಆಂಶ ವರದಿಯಲ್ಲಿ ಬಹಿರಂಗವಾಗಿದೆ. ಇತ್ತ ಆರೋಪಿಗಾಗಿ ತೋವ್ರ ಶೋಧ ಮುಂದುವರೆಸಿರುವ ಪೊಲೀಸರು ಎಂಟು ತಂಡ ಮಾಡಿಕೊಂಡು ಬಾಂಬರ್​ಗಾಘಿ ಬಲೆ ಬೀಸಿದ್ದಾರೆ.

    ಎಲ್ಲೂ ಕೂಡ ಸಂಪೂರ್ಣ ಮುಖ ಚಹರೆ ಬಿಟ್ಟುಕೊಡದ ಶಂಕಿತ ಉಗ್ರ, ಮುಖ ಕಾಣದಂತೆ ಬ್ಲಾಕ್ ಮಾಸ್ಕ್, ಸ್ಪೆಕ್ಸ್, ವೈಟ್ ಕ್ಯಾಪ್ ಧರಿಸಿ ಬಂದಿದ್ದಾನೆ. ಹೋಟೆಲ್ ಸುತ್ತಮುತ್ತಲ ಸಿಸಿ ಕ್ಯಾಮಾರದಲ್ಲಿ ಶಂಕಿತ ಚಲನವಲನ ಸೆರೆ ಆಗಿದೆ. ಬೆನ್ನಿಗೆ ಚಿಕ್ಕದೊಂದು ಬ್ಯಾಗ್ ಹಾಕಿ ನಡೆದಾಡುವ ದೃಶ್ಯ ಕಂಡುಬಂದಿದೆ. ಮುಖ ಚಹರೆ ಸಂಪೂರ್ಣ ಇದುವರೆಗೆ ಯಾವ ಸಿಸಿ ಕ್ಯಾಮಾರದಲ್ಲೂ ಸೆರೆಯಾಗಿಲ್ಲ. ರಾಮೇಶ್ವರಂ ಕೆಫೆ ಎಡಭಾಗದ ಬಸ್ ನಿಲ್ದಾಣದಲ್ಲಿ ಬಸ್ ಏರಿ ಹೊರಟಿದ್ದಾನೆ. ಶಂಕಿತ ಸಂಪೂರ್ಣ ಮುಖ ಚಹರೆ ಸಿಗದೆ ಇರುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ನಿಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts