More

    ಬೆಂಗಳೂರಿನಲ್ಲಿ ‘ಮೇಜರ್​’ ಚಿತ್ರತಂಡ … ಸಂದೀಪ್​ ಉನ್ನಿಕೃಷ್ಣನ್​ ಬಯೋಪಿಕ್​ ನೋಡಿ ಗದ್ದದಿತರಾದ ಪೋಷಕರು …

    ಬೆಂಗಳೂರು: ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ತಾಜ್​ ಹೋಟೆಲ್​ಗೆ ನುಗ್ಗಿ ಉಗ್ರರ ಹುಟ್ಟಡಗಿಸಿ, ವೀರಮರಣವನ್ನಪ್ಪಿದ ಬೆಂಗಳೂರಿನ ಹುಡುಗ ಸಂದೀಪ್​ ಉನ್ನಿಕೃಷ್ಣನ್​ ಜೀವನಾಧಾರಿತ ಚಿತ್ರ ‘ಮೇಜರ್​’. ಶಶಿಕಿರಣ್​ ಟಿಕ್ಕಾ ನಿರ್ದೇಶನದ ಈ ಬಯೋಪಿಕ್​ನಲ್ಲಿ ಅಡಿವಿ ಶೇಷ್​, ಸಂದೀಪ್​ ಉನ್ನಿಕೃಷ್ಣನ್​ ಪಾತ್ರದಲ್ಲಿ ನಟಿಸಿದ್ದಾರೆ. ನಾಳೆ (ಜೂನ್​ 03) ಚಿತ್ರವು ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು.

    ಇದನ್ನೂ ಓದಿ: ಯಶ್​ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​: ಕೆಜಿಎಫ್​- 2 ಇನ್ಮುಂದೆ ನೋಡ್ಬೋದು ಉಚಿತವಾಗಿ!

    ಭಯೋತ್ಪಾದಕ ದಾಳಿ ಹಾಗೂ ಸಂದೀಪ್​ ಹೋರಾಟವನ್ನಷ್ಟೇ ಅಲ್ಲದೇ, ಅವರ ಬಾಲ್ಯ, ಶಾಲಾ ದಿನಗಳು, ಲವ್​ಸ್ಟೋರಿ, ಮದುವೆ, ಸೇನೆಗೆ ಆಯ್ಕೆಯಾಗಿದ್ದು, ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದು, ತಂದೆ&ತಾಯಿ ಜತೆಗಿನ ಬಾಂಧವ್ಯ, ಗೆಳೆಯರ ಜತೆಗಿನ ಒಡನಾಟ… ಹೀಗೆ ಸಂದೀಪ್​ ಅವರ ಸಂಪೂರ್ಣ ಕಥೆಯನ್ನ ಈ ಬಯೋಪಿಕ್​ನಲ್ಲಿ ಚಿತ್ರಿಸಲಾಗಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಅಡಿವಿ ಶೇಷ್​, ‘ದೇಶಾದ್ಯಂತ 10 ಕಡೆಗಳಲ್ಲಿ ಸ್ಪೆಷಲ್​ ಶೋ ಆಯೋಜಿಸಿದ್ದೆವು. ಅದರಲ್ಲಿ ಮುಂಬೈನ ಎನ್​ಎಸ್​ಜಿ (ನ್ಯಾಷನಲ್​ ಸೆಕ್ಯುರಿಟಿ ಗಾರ್ಡ್ಸ್​) ಕೂಡ ಒಂದು. ಸಂದೀಪ್​ ಉನ್ನಿಕೃಷ್ಣನ್​ ಸರ್​ ಕೂಡ ಎನ್​ಎಸ್​ಜಿಯಲ್ಲಿದ್ದವರೇ. ಹೀಗಾಗಿ ಎನ್​ಎಸ್​ಜಿಯ ಕಮಾಂಡೋಗಳಿಗೆ ಸಿನಿಮಾ ಇಷ್ಟವಾಗದಿದ್ದರೆ? ಎಂಬ ಆತಂಕವೂ ಇತ್ತು. ಸುಮಾರು 312 ಮಂದಿ ಕಮಾಂಡೋಗಳು ಸಿನಿಮಾ ನೋಡಿದರು. ಬಳಿಕ ನನ್ನನ್ನು ಹೆಡ್​ಕ್ವಾರ್ರ್ಟಸ್​ಗೆ ಕರೆದೊಯ್ದರು. ಅಲ್ಲಿ ನನಗೆ ಎನ್​ಎಸ್​ಜಿ ಬ್ಲಾಕ್​ ಕ್ಯಾಟ್​ ಕಮಾಂಡೋಸ್​ನ ಪದಕ ನೀಡಿದರು’ ಎಂದು ಪದಕವನ್ನೂ ತೋರಿಸಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಿತ್ರದ ನಾಯಕ ಅಡಿವಿ ಶೇಷ್​, ನಾಯಕಿ ಸಾಯಿ ಮಂಜ್ರೇಕರ್​ ಹಾಗೂ ನಿರ್ದೇಶಕ ಶರತ್​ ಚಂದ್ರಹಾಜರಿದ್ದರು.

    ಇದನ್ನೂ ಓದಿ: ಕೆಜಿಎಫ್​ ಬ್ಯೂಟಿ ಶ್ರೀನಿಧಿ ಶೆಟ್ಟಿ ಸಂಭಾವನೆ ಡಿಮ್ಯಾಂಡ್​ ಕೇಳಿ ಶಾಕ್​ ಆದ ಟಾಲಿವುಡ್​ ಮಂದಿ!

    ನಂತರ ಚಿತ್ರತಂಡವು ಬೆಂಗಳೂರಿನಲ್ಲಿ ಸಂದೀಪ್​ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು. ಸಂದೀಪ್​ ತಂದೆ ಕೆ. ಉನ್ನಿಕೃಷ್ಣನ್​ ನಾಯರ್​ ಹಾಗೂ ತಾಯಿ ಧನಲಕ್ಷ್ಮಿ ಉನ್ನಿಕೃಷ್ಣನ್​ ಚಿತ್ರ ನೋಡಿ ಗದ್ಗದಿತರಾದರು.

    ಸಾಲು ಸಾಲು ಚಿತ್ರಗಳು ಸೋತರೂ ಪೂಜಾ ಹೆಗ್ಡೆಗೆ ಕಿಂಚಿತ್ತೂ ಕಡಿಮೆ ಆಗಿಲ್ಲ ಡಿಮ್ಯಾಂಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts