More

    ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್​ಸಿಬಿ; ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ ಖಚಿತ

    ಬೆಂಗಳೂರು: ರಂಗು ರಂಗಿನ ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​​ನ 15ನೇ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದ್ದು, ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಲಖನೌ ತಂಡಗಳು ಗೆಲುವಿಗಾಗಿ ಸೆಣಸಾಡಲಿವೆ. ಈ ಪಂದ್ಯವು ಆರ್​ಸಿಬಿ ವರ್ಸಸ್​​​ ಕನ್ನಡಿಗರು ಎಂಬಂತೆ ಪಾರ್ಪಟ್ಟಿದ್ದು ಅಂತಿಮವಾಗಿ ಗೆಲುವು ಯಾರ ಪಾಲಾಗಲಿದ ಎಂದು ಕಾದು ನೋಡಬೇಕಿದೆ.

    ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತು ಒಂದರಲ್ಲಿ ಗೆದ್ದು ಪಾಯಿಂಟ್ಸ್​ ಟೇಬಲ್​ನಲ್ಲಿ 9ನೇ ಸ್ಥಾನದಲ್ಲಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಈ ಪಂದ್ಯ ಮಹತ್ವದಾಗಿದ್ದು, ಪಾಯಿಂಟ್ಸ್​ ಟೇಬಲ್​ನಲ್ಲಿ ಮೇಲಕ್ಕೇರಬೇಕೆಂದರೆ ಆರ್​ಸಿಬಿ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

    ಸಿಎಸ್​ಕೆ, ಪಂಜಾಬ್ ಮತ್ತು ಕೆಕೆಆರ್ ವಿರುದ್ಧ ಆರ್​ಸಿಬಿ ನೀಡಿದ ಪ್ರದರ್ಶನ ಬೌಲಿಂಗ್​ನಲ್ಲಿ ತೀರಾ ಕಳಪೆಯಾಗಿತ್ತು. ಹೀಗಾಗಿ ಇಂದಿನ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಆಗುವುದು ಖಚಿತ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿರುವ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ಸ್ವರೂಪವನ್ನು ಗಮನಿಸಿದರೆ, ಆರ್​ಸಿಬಿ ತಂಡಕ್ಕೆ ಬಲಿಷ್ಠ ಅನುಭವಿ ಬೌಲರ್ ಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.

    RCB Changes

    ಇದನ್ನೂ ಓದಿ: IPL 2024; ಪ್ಲೇಆಫ್​ಗೇರುವ ನಾಲ್ಕು ತಂಡಗಳನ್ನು ಹೆಸರಿಸಿದ ಜಂಬೋ

    ಕಳೆದ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅಲ್ಝಾರಿ ಜೋಸೆಫ್​ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3.4 ಓವರ್​ಗಳಲ್ಲಿ 38 ರನ್ ನೀಡಿದ್ದ ಅಲ್ಝಾರಿ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್​ಗಳಲ್ಲಿ 43 ರನ್ ಬಿಟ್ಟುಕೊಟ್ಟಿದ್ದರು. ಇನ್ನು ಕೆಕೆಆರ್ ವಿರುದ್ಧ 2 ಓವರ್​ಗಳಲ್ಲಿ 34 ರನ್ ಬಿಟ್ಟುಕೊಟ್ಟಿದ್ದರು. ಹೀಗಾಗಿ ಲಖನೌ ಸೂಪರ್ ಜೈಂಟ್ಸ್​ ವಿರುದ್ಧದ ಪಂದ್ಯದಿಂದ ಅಲ್ಝಾರಿ ಜೋಸೆಫ್ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಅಲ್ಜಾರಿ ಜೋಸೆಫ್​ ಬದಲಿಗೆ ರೀಸ್ ಟೋಪ್ಲಿ ಅಥವಾ ಲಾಕಿ ಫರ್ಗುಸನ್​ಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

    ಇನ್ನು ಬ್ಯಾಟಿಂಗ್​ ವಿಭಾಗಕ್ಕೆ ಬರುವುದಾದರೆ ಕಳಪೆ ಫಾರ್ಮ್​ನಲ್ಲಿರುವ ರಜತ್​ ಪಾಟಿದಾರ್​ ಬದಲಿಗೆ ಮಹಿಪಾಲ್​ ಲೊಮ್ರೊರ್ ಅಥವಾ ಸುಯೇಶ್ ಪ್ರಭುದೇಸಾಯಿಗೆ ತಂಡದಲ್ಲಿ ಸ್ಥಾನ ದೊರೆಯಬಹುದು ಎಂದು ಹೇಳಲಾಗಿದೆ. ಅಂತಿಮವಾಗಿ ನಾಯಕ ಫಾಫ್​ ಡು ಪ್ಲೆಸಿಸ್​ ಲಖನೌ ವಿರುದ್ಧದ ಪಂದ್ಯಕ್ಕೆ ತಂಡದಲ್ಲಿ ತಾರಿಗೆಲ್ಲಾ ಸ್ಥಾನ ಕೊಡಲಿದ್ದಾರೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts