More

    ಮೈದಾನದಿಂದ 22 ಕೋಟಿ ನಷ್ಟ … ಮೂರನೇ ಬಾರಿಗೆ ಸೆಟ್ ನಿರ್ಮಾಣ

    ಮುಂಬೈ: ತೌಕ್ತೆ ಚಂಡಮಾರುತದಿಂದ ಅಜಯ್​ ದೇವಗನ್​ ಅಭಿನಯದ ಹೊಸ ಚಿತ್ರ ಮೈದಾನ್​ಗೆ ಹಾಕಲಾಗಿದ್ದ ಸೆಟ್​ಗಳು ಧ್ವಂಸವಾಗಿವೆ. ಚಿತ್ರದ ಸೆಟ್​ಗಳು ನಾಶವಾಗುತ್ತಿರುವುದು ಎರಡನೆಯ ಸಲ. ಇದರಿಂದ ಚಿತ್ರದ ನಿರ್ಮಾಪಕರಿಗೆ ನಷ್ಟವಾಗಿರುವುದು ಎಷ್ಟು ಗೊತ್ತಾ? ಬರೋಬ್ಬರಿ 22 ಕೋಟಿ ರೂ.ಗಳು ಎಂದು ನಿರ್ಮಾಪಕ ಬೋನಿ ಕಪೂರ್​ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ರಕ್ತ ಚರಿತ್ರ ಚಿತ್ರದಲ್ಲಿ ಶೋಷಣೆಗೊಳಗಾಗಿದ್ದೆ ಎಂದು ರಹಸ್ಯ ಬಿಚ್ಚಿಟ್ಟ ರಾಧಿಕಾ

    ಮೈದಾನ್​ ಚಿತ್ರಕ್ಕಾಗಿ ಮುಂಬೈನ ಹೊರವಲಯದಲ್ಲಿ ಸ್ಟೇಡಿಯಂನ ಬೃಹತ್​ ಸೆಟ್​ವೊಂದನ್ನು ಹಾಕಲಾಗಿತ್ತು. ಲಾಕ್​ಡೌನ್​ಗೂ ಮುನ್ನ ಅಲ್ಲಿ ಸ್ವಲ್ಪ ಚಿತ್ರೀಕರಣ ಸಹ ಮಾಡಲಾಗಿತ್ತು. ಈಗ ತೌಕ್ತೆ ಚಂಡಮಾರುತದಿಂದ ಆ ಸೆಟ್​ನ ಕೆಲವು ಭಾಗಗಳು ಧ್ವಂಸವಾಗಿವೆ. ಇದಕ್ಕೂ ಮುನ್ನ, ಕಳೆದ ವರ್ಷ ಇದೇ ಸಮಯಕ್ಕೆ, ಮೊದಲ ಲಾಕ್​ಡೌನ್​ ಆದಾಗ ಸೆಟ್​ಗಳನ್ನು ಉಪಯೋಗಿಸದೆ ಅದು ಹಾಳಾಗಿತ್ತು. ಕೊನೆಗೆ ಆ ಸೆಟ್​ಗಳನ್ನು ನಾಶ ಮಾಡಿ, ಇನ್ನೊಮ್ಮೆ ನಿರ್ಮಿಸಲಾಗಿತ್ತು. ಹೀಗೆ ಎರಡು ಬಾರಿ ಸೆಟ್​ಗಳು ನಾಶವಾಗಿರುವುದರಿಂದ ಚಿತ್ರತಂಡಕ್ಕೆ 22 ಕೋಟಿ ನಷ್ಟವಾಗಿದೆಯಂತೆ.

    ಈ ಕುರಿತು ಮಾತನಾಡಿರುವ ಬೋನಿ ಕಪೂರ್​, ಇದುವರೆಗೂ ಸ್ಟೇಡಿಯಂ ನಿರ್ಮಾಣಕ್ಕಾಗಿ 22 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇನ್ನೊಮ್ಮೆ ಸೆಟ್​ ನಿರ್ಮಾಣಕ್ಕೆ ಇನ್ನೂ ಏಳು ಕೋಟಿ ರೂ. ಬೇಕಾಗುತ್ತದೆ. ಈ ಬಾರಿಯಂತೂ ಬಹಳ ನಷ್ಟವಾಗಿದೆ. ಪಿಚ್​ ಬಿಟ್ಟು ಇನ್ನೆಲ್ಲವೂ ಧ್ವಂಸವಾಗಿದೆ. ಅರ್ಧ ಚಿತ್ರೀಕರಣಕ್ಕೆ ಇಷ್ಟೊಂದು ಖರ್ಚಾಗಿದೆ. ಚಿತ್ರ ಮುಗಿಯುವ ಹೊತ್ತಿಗೆ ಎಷ್ಟು ಖರ್ಚಾಗುತ್ತದೋ ಗೊತ್ತಿಲ್ಲ. ಸದ್ಯದಲ್ಲೇ ಮತ್ತೆ ಸೆಟ್​ ಕೆಲಸ ಪ್ರಾರಂಭವಾಗಲಿದೆ. ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಗುತ್ತಿದ್ದಂತೆಯೇ, ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಬೋನಿ ಕಪೂರ್​ ಹೇಳಿಕೊಂಡಿದ್ದಾರೆ.

    ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರ ಆಗಸ್ಟ್​ 13ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಇದೀಗ ಚಿತ್ರ ಲಾಕ್​ಡೌನ್​ನಿಂದ ವಿಳಂಬವಾಗುತ್ತಿರುವುದರಿಂದ, ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಮತ್ತು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇತ್ತು. ಆದರೆ, ಇದನ್ನು ಅಲ್ಲಗೆಳೆದಿರುವ ಬೋನಿ ಕಪೂರ್​, ತಮ್ಮ ಚಿತ್ರಗಳೇನಿದ್ದರೂ ಚಿತ್ರಮಂದಿರಗಳಲ್ಲಿ ಮಾತ್ರ, ಒಟಿಟಿಯಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಈ ಪುಟ್ಟ ಹುಡುಗಿ ಯಾರು? ಆಕೆ ಯಾವುದಕ್ಕಾಗಿ ಕಾಯುತ್ತಿದ್ದಾಳೆ?

    ಖ್ಯಾತ ಫುಟ್​ಬಾಲ್​ ಆಟಗಾರ ಸೈಯ್ಯದ್​ ಅಬ್ದುಲ್ ರಹೀಮ್​ ಅವರ ಬದುಕು ಮತ್ತು ಸಾಧನೆಯನ್ನಾಧರಿಸಿದ ಈ ಚಿತ್ರದಲ್ಲಿ ಅವರ ಪಾತ್ರವನ್ನು ಅಜಯ್​ ದೇವಗನ್​ ನಿರ್ವಹಿಸುತ್ತಿದ್ದಾರೆ. ಪ್ರಿಯಾಮಣಿ, ಗಜರಾಜ್​ ರಾವ್​ ಮುಂತಾದವರು ನಟಿಸಿರುವ ಈ ಚಿತ್ರವನ್ನು ಅಮಿತ್​ ಶರ್ಮಾ ನಿರ್ದೇಶಿಸು್​ತ್ತಿದ್ದಾರೆ.

    ವಯಸ್ಸಾದರೂ ಮದುವೆಯಾಗಿಲ್ಲವೆಂದು ಹೆತ್ತವರಿಂದಲೇ ಸಿನಿಮಾ ನಿರ್ದೇಶಕನ ಬರ್ಬರ ಹತ್ಯೆ- ದೇಹ ಪೀಸ್‌ ಪೀಸ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts