More

    ಶ್ರೀಲಂಕಾ ಸಂಸತ್​ ಚುನಾವಣೆಯಲ್ಲಿ ಮಹಿಂದಾ ರಾಜಪಕ್ಸ ಸರ್ಕಾರಕ್ಕೆ ಭಾರಿ ಗೆಲುವು

    ಕೊಲಂಬೊ: ಶ್ರೀಲಂಕಾದ ಸಂಸದೀಯ ಚುನಾವಣೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸ ಅಭೂತ ಪೂರ್ವ ಗೆಲುವು ದಾಖಲಿಸಿದ್ದು, ಅವರ ಪಕ್ಷ ಮೂರನೇ ಎರಡಷ್ಟು ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಎರಡು ಸಲ ಮುಂದೂಡಲ್ಪಟ್ಟಿದ್ದ ಚುನಾವಣೆಯ ಅಂತಿಮ ಫಲಿತಾಂಶ ನಿನ್ನೆ ಪ್ರಕಟವಾಗಿದೆ.

    ಇದರಂತೆ, 225 ಸದಸ್ಯ ಬಲದ ಸಂಸತ್​ನಲ್ಲಿ ಮಹಿಂದಾ ರಾಜಪಕ್ಸ ಅವರ ಶ್ರೀಲಂಕಾ ಪೊದುಜನ ಪೆರುಮನ(ಎಸ್​ಎಲ್​ಪಿಪಿ) 145 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಇದರ ಮಿತ್ರ ಪಕ್ಷಗಳು 5 ಸ್ಥಾನಗಳಲ್ಲಿ ವಿಜಯದ ನಗೆ ಬೀರಿದ್ದು, ಸಂಸತ್​ನಲ್ಲಿ ಈ ಮೈತ್ರಿಯ ಸದಸ್ಯಬಲ 150 ಆಗಿದೆ.

    ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಂಡ ಗೆಲುವು ದಾಖಲಿಸಿದ ಗೋತಬಯ ರಾಜಪಕ್ಸೆ!

    ಪ್ರಧಾನಿ ಮಹಿಂದಾ ನೇತೃತ್ವದ ಎಸ್​ಎಲ್​ಪಿಪಿಯು ಎಲ್ಲ 22 ಜಿಲ್ಲೆಗಳಲ್ಲೂ ಗೆಲುವು ವಿಜಯದ ನಗೆ ಬೀರಿದೆ. ದಕ್ಷಿಣ ಶ್ರೀಲಂಕಾದಲ್ಲಿ ಸಿಂಹಳೀಯ ಸಮುದಾಯ ಬಹುಸಂಖ್ಯಾತರಿರುವಲ್ಲಿ ಪಕ್ಷಕ್ಕೆ ಗರಿಷ್ಠ ಶೇಕಡ 60 ಮತ ಬಿದ್ದಿದೆ. ಪಕ್ಷಕ್ಕೆ 68 ಲಕ್ಷ ಮತ ಲಭಿಸಿದ್ದು, ಮತಗಳಿಕೆ ಪ್ರಮಾಣ ಶೇಕಡ 59.9 ಆಗಿದೆ.

    ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಫಲಿತಾಂಶ ಘೋಷಣೆಯಾದ ಕೂಡಲೇ ರಾಜಪಕ್ಸ ಅವರಿಗೆ ಕರೆ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜಪಕ್ಸ ಅವರು ಟ್ವೀಟ್ ಮಾಡಿದ್ದು, ಭಾರತ ಮತ್ತು ಶ್ರೀಲಂಕಾದ ಸ್ನೇಹ ಸಂಬಂಧಗಳ ವಿಚಾರ ಪ್ರಸ್ತಾಪಿಸಿದ್ದಾರೆ.

    ಇದನ್ನೂ ಓದಿ: ನರೇಂದ್ರ ಮೋದಿಯವರಿಗೆ ಶುಭ ಕೋರಿದ ಶ್ರೀಲಂಕಾ ಪ್ರಧಾನಿ ರನಿಲ್​ ವಿಕ್ರಮಸಿಂಘೆ

    ಕಳೆದ ನವೆಂಬರ್​ನಲ್ಲಿ ಎಸ್​ಎಲ್​ಪಿಪಿ ಟಿಕೆಟ್ ಮೂಲಕ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಗೋಟಬಯ ರಾಜಪಕ್ಸ, ಆರು ತಿಂಗಳು ಮುಂಚಿತವಾಗಿಯೇ ಕ್ಷಿಪ್ರ ಚುನಾವಣೆ ಘೋಷಿಸಿದ್ದರು. ಸಂಸತ್​ನ ಪಾತ್ರವನ್ನು ಬಲಪಡಿಸುವ ಸಲುವಾಗಿ ಸಂವಿಧಾನದಲ್ಲಿ ತಿದ್ದುಪಡಿ ತರುವುದಕ್ಕೆ ಸಂಸತ್ತಿನಲ್ಲಿ 150 ಸ್ಥಾನಗಳ ಬಹುಮತ ಬೇಕಾದ್ದನ್ನು ಮನಗಂಡು ಅದಕ್ಕೆ ಅವರು ಮನವಿ ಮಾಡಿದ್ದರು. ಈಗ ಅದು ಸಾಕಾರವಾಗಿದೆ.

    ಇದರೊಂದಿಗೆ ಮಾಜಿ ಪ್ರಧಾನಿ ರಾನಿಲೆ ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್​ಪಿ)ಗೆ ಭಾರಿ ಮುಖಭಂಗವಾಗಿದೆ. ಯುಎನ್​ಪಿ ಕೇವಲ ಒಂದು ಸ್ಥಾನದಲ್ಲಿ ಗೆಲುವು ದಾಖಲಿಸಿದ್ದು, 22 ಜಿಲ್ಲೆಗಳಲ್ಲಿ ಒಂದೇ ಒಂದು ಸ್ಥಾನದಲ್ಲೂ ವಿಜಯದ ನಗೆ ಬೀರುವಲ್ಲಿ ಯಶಸ್ವಿಯಾಗಲಿಲ್ಲ. ಆಗಸ್ಟ್​ 5ರಂದು ಸಂಸತ್ತಿನ 225 ಕ್ಷೇತ್ರಗಳ ಪ್ರತಿನಿಧಿಗಳನ್ನು ಐದು ವರ್ಷದ ಅವಧಿಗೆ ಆಯ್ಕೆ ಮಾಡಲು ಮತದಾನ ನಡೆದಿತ್ತು. ದೇಶದ 1.6 ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸಿದ್ದರು. (ಏಜೆನ್ಸೀಸ್)

    ರಾಜಸ್ಥಾನ ರಾಜಕೀಯ: ಪಕ್ಷಗಳ ವಿಲೀನ ಒಕೆ, ಶಾಸಕರ ವಿಲೀನಕ್ಕೆಲ್ಲಿ ಅವಕಾಶ- ಬಿಎಸ್​ಪಿ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts