More

    ಅಭಿವೃದ್ಧಿ ವಿಚಾರ ಬಂದಾಗ ಜಾತಿ ಮತ್ತು ಪಕ್ಷ ಗೌಣವಾಗಬೇಕು

    ಪಂಚನಹಳ್ಳಿ: ಅಭಿವೃದ್ಧಿ ವಿಚಾರ ಬಂದಾಗ ಜಾತಿ ಮತ್ತು ಪಕ್ಷ ಗೌಣವಾಗಬೇಕು ಎಂದು ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ಹೇಳಿದರು. ಪಂಚನಹಳ್ಳಿ ಸಮೀಪದ ತಿಮ್ಮಲಾಪುರದಲ್ಲಿ ಪಂಚಾಯತ್​ರಾಜ್ ಇಲಾಖೆಯಿಂದ ನಿರ್ವಿುಸಿರುವ 35 ಲಕ್ಷ ರೂ. ವೆಚ್ಚದ ರಾಜೀವ್ ಗಾಂಧಿ ಸೇವಾ ಕೇಂದ್ರ ಮತ್ತು ಸಂಜೀವಿನಿ ಶೆಡ್ ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

    ಸರ್ಕಾರದಿಂದ ಬೇರೆ ಬೇರೆ ಯೋಜನೆಗಳ ಮೂಲಕ ಅನುದಾನ ತರುವುದು ಕಷ್ಟ. ಆದರೆ ಸಾಕಷ್ಟು ಅನುದಾನ ಬರುವ ನರೇಗಾ ಯೋಜನೆ ಬಳಸಿಕೊಂಡು ಗ್ರಾಮದಲ್ಲಿ ಅಭಿವೃದ್ಧಿ ಕೈಗೊಳ್ಳಬೇಕು. ಆದರೆ ವೈಯಕ್ತಿಕ ಕಾರಣ ಮುಂದಿಟ್ಟುಕೊಂಡು ಕಾಮಗಾರಿಗೆ ಯಾರಾದರೂ ಅಡ್ಡಿಪಡಿಸಿದರೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತವೆ ಎಂದರು.

    ನೆರೆ ಸಂತ್ರಸ್ತರಿಗೆ ಹೆಚ್ಚಿನ ಹಣ ವಿನಿಯೋಗಿಸಿರುವ ಕಾರಣ ಇತರೆ ಯೋಜನೆಗಳಿಗೆ ಸರ್ಕಾರದಿಂದ ಬರುವ ಅನುದಾನ ವಿಳಂಬವಾಗುತ್ತಿದೆ. ಆದರೆ ಇಂದಲ್ಲ ನಾಳೆ ಅನುದಾನ ಬರುತ್ತದೆ. ನರೇಗಾ ಅಡಿ ಕೆಲಸ ಮಾಡಿದವರು ತಾಳ್ಮೆಯಿಂದ ಕಾಯಬೇಕು ಎಂದು ತಿಳಿಸಿದರು.

    ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ಮಾತನಾಡಿ, ಜನಪ್ರತಿನಿಧಿಗಳು ನಿಸ್ವಾರ್ಥ ಸೇವೆ ಸಲ್ಲಿಸಿದರೆ ಗ್ರಾಮಗಳು ಪ್ರಗತಿ ಕಾಣುತ್ತವೆ. ಈ ನಿಟ್ಟಿನಲ್ಲಿ ತಿಮ್ಮಲಾಪುರ ಗ್ರಾಪಂ ಸದಸ್ಯರು ಒಟ್ಟಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

    ತಿಮ್ಮಲಾಪುರದಲ್ಲಿ ಈ ಹಿಂದೆ ಅಸ್ತಿತ್ವದಲ್ಲಿದ್ದ ಹಾಲು ಉತ್ಪಾದಕರ ಸಹಕಾರ ಸಂಘ ಹಲವು ಕಾರಣಕ್ಕೆ ಮುಚ್ಚಿಹೋಗಿದೆ. ತೀವ್ರ ಬರಗಾಲದಲ್ಲೂ ತಾಲೂಕಿನ ರೈತರ ಕೈಹಿಡಿದಿದ್ದು ಹೈನುಗಾರಿಕೆ ಮಾತ್ರ. ಹಾಗಾಗಿ ತಿಮ್ಮಲಾಪುರದಲ್ಲಿ ಸಂಘದ ಸ್ಥಾಪನೆಗೆ ಯುವಕರು ಮುಂದಾಗಬೇಕು. ಅದಕ್ಕೆ ಬೇಕಾಗುವ ಸಹಕಾರವನ್ನು ಒಕ್ಕೂಟದಿಂದ ನೀಡಲಾಗುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts